ವಿಶಾಖಪಟ್ಟಣ: 2023ರ ಚಾಂಪಿಯನ್ ಪುಣೇರಿ ಪಲ್ಟನ್, ಹಾಲಿ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದ್ದು ಬುಧವಾರ 45–36 ರಿಂದ ಬೆಂಗಾಲ್ ವಾರಿಯರ್ಸ್ ತಂಡವನ್ನು 9 ಪಾಯಿಂಟ್ಗಳಿಂದ ಸೋಲಿಸಿತು. ಇದು ತಂಡಕ್ಕೆ ಸತತ ಮೂರನೇ ಗೆಲುವು.

ನಾಯಕ ಅಸ್ಲಂ ಇನಾಂದಾರ್ (11 ಅಂಕ) ಅವರ ಕೌಶಲದ ಆಟದ ಜೊತೆಗೆ ಆದಿತ್ಯ ಶಿಂದೆ (11 ಅಂಕ) ಸೂಪರ್ ಟೆನ್ ಮತ್ತು ವಿಶಾಲ್ ಭಾರದ್ವಾಜ್ (5 ಅಂಕ) ಅವರು ಹೈಫೈವ್ಗಳೊಂದಿಗೆ ಪುಣೇರಿ ಗೆಲುವಿನಲ್ಲಿ ಮಿಂಚಿದರು.

ವಾರಿಯರ್ಸ್ ಕ್ಯಾಪ್ಟನ್ ಹಾಗೂ ರೇಡರ್ ದೇವಾಂಕ್ ದಲಾಲ್ (17 ಅಂಕ) ಹೊನಲು ಬೆಳಕಿನಲ್ಲಿ ಮಿಂಚಿದರೂ, ಅವರಿಗೆ ಉಳಿದವರಿಂದ ಸಮರ್ಥ ಬೆಂಬಲ ದೊರೆಯಲಿಲ್ಲ.

ಶಿಂದೆ ಮತ್ತು ಅಸ್ಲಾಂ ಅವರ ಪರಿಣಾಮಕಾರಿ ರೇಡಿಂಗ್ ಬಲದಿಂದ ಪಲ್ಟನ್ ಆರಂಭದಿಂದಲೇ ಮುನ್ನಡೆ ಪಡೆಯಿತು. ಶಿಂಧೆ ಅವರಂತೂ ಒಂದರ ಮೇಲೊಂದರಂತೆ ಯಶಸ್ವಿ ರೇಡ್ಗಳನ್ನು ಮಾಡಿ ವಾರಿಯರ್ಸ್ ಪಾಳೆಯವನ್ನು ಒತ್ತಡಕ್ಕೆ ತಳ್ಳಿದರು. ಅಸ್ಲಂ ಇನ್ನೊಂದೆಡೆ ಸೂಪರ್ ರೇಡ್ನಲ್ಲಿ ವಾರಿಯರ್ಸ್ ಡಿಫೆಂಡರ್ಗಳಾದ ನಿತೇಶ್ ಮತ್ತು ಪ್ರತೀಕ್ ಅವರನ್ನು ಔಟ್ ಮಾಡಿ ತಮ್ಮ ತಂಡದ ಮುನ್ನಡೆ (13–9) ಹೆಚ್ಚಿಸಿದರು. ಆದರೆ ವಾರಿಯರ್ಸ್ನ ದೇವಾಂಕ್ ಅವರ ರೇಡಿಂಗ್ ಪಂದ್ಯ ಏಕಪಕ್ಷೀಯವಾಗುವುದನ್ನು ತಪ್ಪಿಸಿತು.

9ನೇ ನಿಮಿಷ ವಾರಿಯರ್ಸ್ ಮೊದಲು ಆಲೌಟ್ ಆಯಿತು. ಅಸ್ಲಂ ಅವರು ದೇವಾಂಕ್ ಅವರನ್ನು ಅಮೋಘವಾಗಿ ಟ್ಯಾಕಲ್ ಮಾಡಿ ಎದುರಾಳಿ ಅಂಕಣ ಬರಿದುಗೊಳಿಸಿದರು.

ಕೆಲಹೊತ್ತಿನಲ್ಲೇ ವಾರಿಯರ್ಸ್ನ ಮನ್ಪ್ರೀತ್ ಅವರ ಯಶಸ್ವಿ ರೇಡ್ನಲ್ಲಿ ಅಸ್ಲಂ, ಅಭಿನೇಶ್ ನಾದರಾಜನ್ ನಿರ್ಗಮಿಸಬೇಕಾಯಿತು. ಇದಾದ ಬಳಿಕ ಪಲ್ಟನ್ ಆಲೌಟ್ ಆಗಿ ವಾರಿಯರ್ಸ್ ಹಿನ್ನಡೆ ಕಡಿಮೆ ಮಾಡಿತು. ವಿರಾಮದ ವೇಳೆಗೆ ಸ್ಕೋರ್ 26–22.

ಮೂರನೇ ಕ್ವಾರ್ಟರ್ನಲ್ಲಿ ಪುಣೇರಿ ಪಲ್ಟನ್ ಮೇಲುಗೈ ಸಾಧಿಸಿತು. ದೇವಾಂಕ್ ಕೆಲವು ರೇಡ್ಗಳಲ್ಲಿ ಮಾತ್ರ ಯಶಸ್ಸು ಪಡೆದರೂ, ಆದಿತ್ಯ ಶಿಂಧೆ ಪಲ್ಟನ್ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರು. ವಿರಾಮದ ಬಳಿಕ 14ನೇ ನಿಮಿಷ ವಿಶಾಲ್, ಎದುರಾಳಿ ಆಟಗಾರ ಪ್ರತೀಕ್ ಅವರನ್ನು ಟ್ಯಾಕಲ್ ಮಾಡುವುದರೊಂದಿಗೆ ವಾರಿಯರ್ಸ್ ಎರಡನೇ ಸಲ ಆಲೌಟ್ ಆಯಿತು. ಪಂಕಜ್ ಮೋಹಿತೆ (5 ಅಂಕ) ಅವರೂ ಪಲ್ಟನ್ ತಂಡಕ್ಕೆ ಉಪಯುಕ್ತ ಪಾಯಿಂಟ್ಸ್ ಗಳಿಸಿಕೊಟ್ಟರು.

ಗುರುವಾರದ ಪಂದ್ಯಗಳು:

ಜೈಪುರ ಪಿಂಕ್ ಪ್ಯಾಂಥರ್ಸ್– ತೆಲುಗು ಟೈಟನ್ಸ್ (ರಾತ್ರಿ 8)

ಪುಣೇರಿ ಪಲ್ಟನ್– ದಬಾಂಗ್ ಡೆಲ್ಲಿ ಕೆ.ಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.