ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದ ಟೆನಿಸ್‌ ಆಟಗಾರ್ತಿ ಜೊನರೇವಾಗೆ ಪೋಲೆಂಡ್‌ ಪ್ರವೇಶ ನಿಷೇಧ

Published 23 ಜುಲೈ 2023, 14:53 IST
Last Updated 23 ಜುಲೈ 2023, 14:53 IST
ಅಕ್ಷರ ಗಾತ್ರ

ವಾರ್ಸಾ, ಪೋಲೆಂಡ್‌ : ರಷ್ಯಾದ ಟೆನಿಸ್‌ ಆಟಗಾರ್ತಿ ವೆರಾ ಜೊನರೇವಾ ಅವರು ಪೋಲೆಂಡ್‌ ಪ್ರವೇಶಿಸುವುದಕ್ಕೆ ನಿಷೇಧ ಹೇರಲಾಗಿದೆ ಎಂದು ಅಲ್ಲಿನ ಒಳಾಡಳಿತ ಸಚಿವಾಲಯ ತಿಳಿಸಿದೆ.

ಜೊನರೇವಾ ಅವರು ವಾರ್ಸಾದಲ್ಲಿ ಸೋಮವಾರ ಆರಂಭವಾಗಲಿರುವ ಡಬ್ಲ್ಯುಟಿಎ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಫ್ರಾನ್ಸ್ ವೀಸಾ ಹೊಂದಿರುವ ಅವರು ಬೆಲ್‌ಗ್ರೇಡ್‌ನಿಂದ ಶುಕ್ರವಾರ ವಾರ್ಸಾಕ್ಕೆ ಬಂದಿಳಿದಿದ್ದರು. ಆದರೆ ವಿಮಾನ ನಿಲ್ದಾಣದಿಂದ ಹೊರಗೆ ಹೋಗಲು ಅವಕಾಶ ನಿರಾಕರಿಸಲಾಯಿತು. ಅವರು ವಾರ್ಸಾದಿಂದ ಶನಿವಾರ ಮಾಂಟೆನೆಗ್ರೊಗೆ ಪ್ರಯಾಣಿಸಿದ್ದಾರೆ.

ರಷ್ಯಾ–ಉಕ್ರೇನ್‌ ಯುದ್ಧದಲ್ಲಿ ಪೋಲೆಂಡ್‌ ಸರ್ಕಾರವು ಉಕ್ರೇನ್‌ಗೆ ಬೆಂಬಲ ನೀಡಿದೆ. ‘ರಷ್ಯಾ ಮತ್ತು ಬೆಲಾರಸ್‌ ನಡೆಸುತ್ತಿರುವ ಯುದ್ಧವನ್ನು ಬೆಂಬಲಿಸುವವರು ನಮ್ಮ ದೇಶಕ್ಕೆ ಪ್ರವೇಶಿಸಲು ಅವಕಾಶವಿಲ್ಲ’ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ. 38 ವರ್ಷದ ಜೊನರೇವಾ ಅವರ ಹೆಸರು ನಿಷೇಧಿತರ ಪಟ್ಟಿಯಲ್ಲಿ ಇದೆ ಎಂದಿದೆ.

ಈ ಹಿಂದೆ ವಿಶ್ವ ರ್‍ಯಾಂಕಿಂಗ್‌ನಲ್ಲಿ 2ನೇ ಸ್ಥಾನದಲ್ಲಿದ್ದ ಜೊನರೇವಾ ಅವರು ಈಗ 60ನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT