ಚೆನ್ನೈ: ಭಾರತೀಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಮತ್ತು ಹಾಲಿ ವಿಶ್ವ ಚೆಸ್ ಚಾಂಪಿಯನ್ ಡಿ.ಗುಕೇಶ್ ಅವರು ಇಂದು (ಗುರುವಾರ) ತಮ್ಮ ಕುಟುಂಬದೊಂದಿಗೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿಯಾಗಿದ್ದಾರೆ.

ರಜನಿಕಾಂತ್ ಅವರನ್ನು ಭೇಟಿಯಾದ ಫೋಟೊಗಳನ್ನು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಸೂಪರ್ ಸ್ಟಾರ್ ರಜನಿಕಾಂತ್ ಸರ್, ನಿಮ್ಮ ಆತ್ಮೀಯ ಹಾರೈಕೆಗಳು ಮತ್ತು ನಿಮ್ಮ ಜ್ಞಾನವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು’ ಎಂದು ತಿಳಿಸಿದ್ದಾರೆ.

18 ವರ್ಷದ ಗುಕೇಶ್ ಅವರು ಈಚೆಗೆ ಸಿಂಗಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ಚೀನಾದ ಡಿಂಗ್ ಲಿರೇನ್ ವಿರುದ್ಧ ಗೆದ್ದು ದಾಖಲೆ ಬರೆದಿದ್ದರು.

ವಿಶ್ವ ಚೆಸ್ ಚಾಂಪಿಯನ್ಷಿಪ್ ಗೆದ್ದ ಅತಿ ಕಿರಿಯ ಆಟಗಾರ ಎನಿಸಿದ್ದಾರೆ. ಹಾಗೆಯೇ ಐದು ಬಾರಿಯ ವಿಶ್ವ ಚಾಂಪಿಯನ್ ಆನಂದ್ ಬಳಿಕ ಚೆಸ್ ಚಾಂಪಿಯನ್ಷಿಪ್ ಗೆದ್ದ ಎರಡನೇ ಭಾರತೀಯ ಎನಿಸಿದ್ದಾರೆ.

ಹೆಸರಾಂತ ಕೋಚ್ ಆಗಿರುವ ಪ್ಯಾಡಿ ಆಪ್ಟನ್ ಅವರು ಫೈನಲ್ಗೂ ಮುನ್ನ ಮತ್ತು ಅಂತಿಮ 14 ಸುತ್ತುಗಳ ಸಂದರ್ಭದಲ್ಲಿ ಅವರು ಗುಕೇಶ್ ಅವರಿಗೆ ಮಾರ್ಗದರ್ಶನ ನೀಡಿದ್ದರು.
.Gukesh D: ವಿಶ್ವ ವಿಜಯದ ಗುಟ್ಟು ಬಿಚ್ಚಿಟ್ಟ ಗುಕೇಶ್ .VIDEO: ಗೆಲುವಿಗೆ ಇದೇ ಕಾರಣ... ಯಶಸ್ಸಿನ ಮಂತ್ರ ಹೇಳಿದ ಚೆಸ್ ಚಾಂಪಿಯನ್ ಗುಕೇಶ್.ಕ್ರಿಕೆಟ್, ಹಾಕಿ ಬಳಿಕ ಚೆಸ್; ಗುಕೇಶ್ ಯಶಸ್ಸಿನಲ್ಲಿ ಪ್ಯಾಡಿ ಮಾಸ್ಟರ್ 'ಮೈಂಡ್'.ಜಯದ ಶಿಖರದ ಹಾದಿಯಲ್ಲಿ ಅಡೆತಡೆಗಳ ಮೀರಿದ ಗುಕೇಶ್ ಗೆಲುವು: ಗ್ಯಾರಿ ಕ್ಯಾಸ್ಪರೋವ್.11ರ ಹರೆಯದಲ್ಲೇ ತಾನಾಡಿದ ಮಾತನ್ನು ಸಾಧಿಸಿ ತೋರಿಸಿದ ಗುಕೇಶ್.ಸವಾಲಿನ ಹಾದಿಯಲ್ಲಿ ಬೆಳೆದ ಚೆಸ್ ತಾರೆ ಗುಕೇಶ್!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.