ಶುಕ್ರವಾರ, ಫೆಬ್ರವರಿ 21, 2020
29 °C

ಚೆಸ್‌: ಮ್ಯಾಗ್ನಸ್‌ ಕಾರ್ಲ್‌ಸನ್‌ಗೆ ಟೂರ್ನಿಯಲ್ಲಿ ಮೊದಲ ಜಯ

ಪಿಟಿಐ Updated:

ಅಕ್ಷರ ಗಾತ್ರ : | |

 ವಿಜ್ಕ್ ಆನ್‌ಜಿ, ನೆದರ್ಲೆಂಡ್ಸ್‌: ಭಾರತದ ಗ್ರ್ಯಾಂಡ್‌ಮಾಸ್ಟರ್‌ ವಿಶ್ವನಾಥನ್‌ ಆನಂದ್‌, ಟಾಟಾ ಸ್ಟೀಲ್‌ ಮಾಸ್ಟರ್ಸ್‌ ಚೆಸ್‌ ಟೂರ್ನಿಯ ಎಂಟನೇ ಸುತ್ತಿನಲ್ಲಿ ಅಮೆರಿಕದ ಫ್ಯಾಬಿಯಾನೊ ಕರುವಾನ ಅವರಿಗೆ ಶರಣಾದರು.

ಸೋಮವಾರ ನಡೆದ ಇದೇ ಸುತ್ತಿನ ಇನ್ನೊಂದು ಪಂದ್ಯದಲ್ಲಿ ವಿಶ್ವ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್‌ಸನ್‌ ರಷ್ಯದ ನಿಕಿತಾ ವಿಟಯಿಗೊವ್‌ ಅವರನ್ನು ಸೋಲಿಸಿದರು. ಸತತ ‘ಡ್ರಾ’ಗಳನ್ನು ಕಂಡಿದ್ದ ಕಾರ್ಲ್‌ಸನ್‌ಗೆ ಇದು ಟೂರ್ನಿಯಲ್ಲಿ  ಮೊದಲ ಗೆಲುವು.

ಎಂಟನೇ ಸುತ್ತಿನ ನಂತರ ಇರಾನ್‌ನ ಅಲಿರೇಜಾ ಫಿರೋಜ ಮತ್ತು ಕರುವಾನ ತಲಾ 5.5 ಅಂಕ ಸಂಗ್ರಹಿಸಿದ್ದು, ಜಂಟಿಯಾಗಿ ಮುನ್ನಡೆ ಹಂಚಿಕೊಂಡಿದ್ದಾರೆ. ಅಲಿರೇಜಾ ನೆದರ್ಲೆಂಡ್ಸ್‌ನ ಜೋರ್ಡೆನ್‌ ವ್ಯಾನ್‌ ಫಾರೀಸ್ಟ್ ಜೊತೆ ಪಾಯಿಂಟ್‌ ಹಂಚಿಕೊಂಡರು.

ಅಮೆರಿಕದ ವೆಸ್ಲಿ ಸೊ ಮತ್ತು ವ್ಯಾನ್‌ ಫಾರೀಸ್ಟ್ ಅವರು ತಲಾ ಐದು ಪಾಯಿಂಟ್ಸ್‌ ಸಂಗ್ರಹಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಸೊ ಎಂಟನೇ ಸುತ್ತಿನಲ್ಲಿ ಡೇನಿಯಲ್‌ ಡುಬೋವ್‌ ಜೊತೆ ‘ಡ್ರಾ’ ಒಪ್ಪಂದಕ್ಕೆ ಸಹಿಹಾಕಿದರು.

ಕಾರ್ಲ್‌ಸನ್‌ 4.5 ಸಂಗ್ರಹಿಸಿದ್ದಾರೆ. ಇನ್ನೊಂದೆಡೆ ಆನಂದ್‌ ಒಟ್ಟು 3.5 ಪಾಯಿಂಟ್‌ಗಳೊಡನೆ ಹತ್ತನೇ ಸ್ಥಾನಕ್ಕೆ ಸರಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು