ಶನಿವಾರ, ಸೆಪ್ಟೆಂಬರ್ 25, 2021
29 °C

Tokyo Olympics: ಗೂಗಲ್‌ನಿಂದ ಆಕರ್ಷಕ ಒಲಿಂಪಿಕ್ಸ್ ಡೂಡಲ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

PV Photo Google Screen Shot

ಬೆಂಗಳೂರು: ಟೋಕಿಯೊ ಒಲಿಂಪಿಕ್ಸ್ ಹಿನ್ನೆಲೆಯಲ್ಲಿ ಗೂಗಲ್ ವಿಶೇಷವಾದ ಡೂಡಲ್ ಒಂದನ್ನು ರೂಪಿಸಿದೆ.

ಗೂಗಲ್ ಸರ್ಚ್ ಮುಖಪುಟ ತೆರೆಯುತ್ತಿದ್ದಂತೆ, ಡೂಡಲ್ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ, ಡೂಡಲ್ ಪ್ಲೇ ಆಗುತ್ತದೆ.

ನೀಲಿ, ಕೆಂಪು, ಹಳದಿ ಮತ್ತು ಹಸಿರು ಎಂಬ ನಾಲ್ಕು ತಂಡಗಳನ್ನು ಪ್ರತಿನಿಧಿಸುವ ರೀತಿಯಲ್ಲಿ ಮತ್ತು ಲಕ್ಕಿ ಎಂಬ ನಿಂಜಾ ಬೆಕ್ಕಿನ ಆಟವನ್ನು ಗೂಗಲ್ ಬಳಕೆದಾರರಿಗೆ ಒದಗಿಸಿದೆ.

ಶುಕ್ರವಾರ ಒಲಿಂಪಿಕ್ಸ್ ವರ್ಣರಂಜಿತ ಸಮಾರಂಭದ ಮೂಲಕ ಆರಂಭವಾಗಲಿದೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ 120ಕ್ಕೂ ಹೆಚ್ಚಿನ ಅಥ್ಲೀಟ್‌ಗಳು ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.

ಗೂಗಲ್, ವಿಶೇಷ ಸಂದರ್ಭದಲ್ಲಿ ಡೂಡಲ್ ಮೂಲಕ ಆ ದಿನವನ್ನು ಸ್ಮರಣೀಯವಾಗಿಸುವ ಪರಿಪಾಠ ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು