ಸೋಮವಾರ, ಮಾರ್ಚ್ 8, 2021
27 °C

ಹಾಕಿ: ಅರ್ಜೆಂಟೀನಾ ‘ಬಿ’ ತಂಡಕ್ಕೆ ಮಣಿದ ಭಾರತ ಮಹಿಳಾ ತಂಡ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬ್ಯೂನಸ್‌ ಐರಿಸ್‌, ಅರ್ಜೆಂಟೀನಾ: ಭಾರತ ಮಹಿಳಾ ಹಾಕಿ ತಂಡವು ಅರ್ಜೆಂಟೀನಾ ಪ್ರವಾಸದಲ್ಲಿ ಸತತ ಎರಡನೇ ಸೋಲು ಅನುಭವಿಸಿತು. ಸೋಮವಾರ ನಡೆದ ಹಣಾಹಣಿಯಲ್ಲಿ ಭಾರತದ ಮಹಿಳೆಯರು 2–3ರಿಂದ ಅರ್ಜೆಂಟೀನಾ ಬಿ ತಂಡದ ಎದುರು ಪರಾಭವ ಕಂಡರು.

ಭಾರತ ತಂಡದ ಪರ ಸಲೀಮಾ ಟೆಟೆ (6ನೇ ನಿಮಿಷ), ಗುರ್ಜಿತ್ ಕೌರ್‌ (42ನೇ ನಿ.) ಗೋಲು ದಾಖಲಿಸಿದರೆ, ಅರ್ಜೆಂಟೀನಾ ಬಿ ತಂಡದ ಸೋಲ್‌ ಪಾಜೆಲಾ (25ನೇ ನಿ.), ಕಾನ್‌ಸ್ಟಂಜಾ ಸೆರುಂಡೊಲೊ (38ನೇ ನಿ.) ಹಾಗೂ ಅಗಸ್ಟಿನಾ ಗೊರ್ಜಾಲೆನಿ (39ನೇ ನಿ.) ಕೈಚಳಕ ತೋರಿದರು.

ಪಂದ್ಯದ ಮೊದಲ ನಿಮಿಷದಲ್ಲೇ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತ್ತು. ಆದರೆ ಯಶಸ್ಸು ಸಿಗಲಿಲ್ಲ. ಇದಾದ ಐದು ನಿಮಿಷಗಳಲ್ಲಿ ಗೋಲು ದಾಖಲಿಸಿದ ಸಲೀಮಾ ಭಾರತಕ್ಕೆ ಮುನ್ನಡೆ ತಂದುಕೊಟ್ಟರು.

ಭಾರತದ ಕಳಪೆ ಡಿಫೆನ್ಸ್ ವಿಭಾಗದ ಲಾಭ ಪಡೆದ ಆತಿಥೇಯ ತಂಡದ ಪಾಜೆಲಾ ಗೋಲು ಹೊಡೆದು 1–1ರ ಸಮಬಲ ಸಾಧಿಸಿದರು. ಆದರೆ ಅರ್ಜೆಂಟೀನಾ ಬಿ ತಂಡದ ಆಟಗಾರ್ತಿಯರು 38 ಹಾಗೂ 39ನೇ ನಿಮಿಷದಲ್ಲಿ ಸತತ ಗೋಲು ಗಳಿಸಿದ ಬಳಿಕ ಪಂದ್ಯವು ಭಾರತದ ಕೈಯಿಂದ ಜಾರುವ ಲಕ್ಷಣಗಳು ಕಂಡವು. 42ನೇ ನಿಮಿಷದಲ್ಲಿ ಯಶಸ್ವಿಯಾದ ಗುರ್ಜಿತ್ ಕೌರ್‌ ಭಾರತದ ಹಿನ್ನಡೆಯನ್ನು ತಗ್ಗಿಸಿದರು.

ಚಿಲಿ ವಿರುದ್ಧ ಮತ್ತೆ ಗೆದ್ದ ಜೂನಿಯರ್ ಆಟಗಾರ್ತಿಯರು: ಚಿಲಿಯ ಸ್ಯಾಂಟಿಯಾಗೊದಲ್ಲಿ ನಡೆದ ಪಂದ್ಯದಲ್ಲಿ ಭಾರತ ಮಹಿಳಾ ಜೂನಿಯರ್ ತಂಡವು ಚಿಲಿ ರಾಷ್ಟ್ರೀಯ ತಂಡವನ್ನು 2–1ರಿಂದ ಪರಾಭವಗೊಳಿಸಿತು. ಈ ಮೂಲಕ ಆರು ಪಂದ್ಯಗಳ ಪ್ರವಾಸವನ್ನು ಅಜೇಯವಾಗಿ ಕೊನೆಗೊಳಿಸಿತು.

ಭಾರತ ಜೂನಿಯರ್ ತಂಡದ ಪರ ಫಾರ್ವರ್ಡ್‌ ಆಟಗಾರ್ತಿ ಬ್ಯೂಟಿ ಡಂಗ್‌ಡಂಗ್‌ (6ನೇ ಹಾಗೂ 26ನೇ ನಿಮಿಷ) ಗೋಲು ದಾಖಲಿಸಿದ ಮುನ್ನಡೆ ಗಳಿಸಿಕೊಟ್ಟಿದ್ದರು. ಫ್ರಾನ್ಸಿಸ್ಕಾ ತಾಲ ಚಿಲಿ ತಂಡದ ಪರ 40ನೇ ನಿಮಿಷದಲ್ಲಿ ಗೋಲು ಗಳಿಸಿದರು. 

ಚಿಲಿ ವಿರುದ್ಧ ಆಡಿದ ಆರು ಪಂದ್ಯಗಳಲ್ಲಿ ಜೂನಿಯರ್ ತಂಡವು ಐದರಲ್ಲಿ ಗೆಲುವು ದಾಖಲಿಸಿದರೆ ಒಂದರಲ್ಲಿ ಡ್ರಾ ಸಾಧಿಸಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು