ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics: ವಾಲಿಬಾಲ್‌ನಲ್ಲಿ ಫ್ರಾನ್ಸ್‌ ಪ್ರಭುತ್ವ

Last Updated 7 ಆಗಸ್ಟ್ 2021, 22:51 IST
ಅಕ್ಷರ ಗಾತ್ರ

ಟೋಕಿಯೊ: ಒಲಿಂಪಿಕ್ಸ್‌ನ ಪುರುಷರ ವಿಭಾಗದ ವಾಲಿಬಾಲ್‌ ಸ್ಪರ್ಧೆಯಲ್ಲಿ ಫ್ರಾನ್ಸ್‌ ತಂಡವು ಪ್ರಭುತ್ವ ಸಾಧಿಸಿತು.

ಫೈನಲ್‌ನಲ್ಲಿ ಫ್ರಾನ್ಸ್‌ 3–2 ಸೆಟ್‌ಗಳಿಂದ ರಷ್ಯಾ ಒಲಿಂಪಿಕ್‌ ಸಮಿತಿಯನ್ನು ಸೋಲಿಸಿತು.

ಮೊದಲ ಸೆಟ್‌ನಲ್ಲಿ ಫ್ರಾನ್ಸ್‌ 25–23ರಿಂದ ಗೆದ್ದಿತು. ಎರಡನೇ ಸೆಟ್‌ನಲ್ಲೂ ಈ ತಂಡದ ಆಟಗಾರರು ಪರಾಕ್ರಮ ಮೆರೆದರು. ಹೀಗಾಗಿ ಈ ತಂಡದ ಮುನ್ನಡೆ 2–0ಗೆ ಹೆಚ್ಚಿತು. ಮೂರು ಮತ್ತು ನಾಲ್ಕನೇ ಸೆಟ್‌ಗಳಲ್ಲಿ ರಷ್ಯಾ ಆಟಗಾರರು ತಿರುಗೇಟು ನೀಡಿದರು. ಹೀಗಾಗಿ 2–2 ಸಮಬಲ ಕಂಡುಬಂತು.

ನಿರ್ಣಾಯಕ ಎನಿಸಿದ್ದ ಐದನೇ ಸೆಟ್‌ನಲ್ಲೂ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. 18 ನಿಮಿಷಗಳ ಈ ಹೋರಾಟದಲ್ಲಿ 15–12ರಿಂದ ಎದುರಾಳಿಗಳ ಸವಾಲು ಮೀರಿದ ಫ್ರಾನ್ಸ್‌ ಆಟಗಾರರು ಸಂಭ್ರಮಿಸಿದರು. ಈ ಪಂದ್ಯ ಒಟ್ಟು 2 ಗಂಟೆ 15 ನಿಮಿಷ ನಡೆಯಿತು.

ಕಂಚಿನ ಪದಕಕ್ಕಾಗಿ ನಡೆದ ಹಣಾಹಣಿಯಲ್ಲಿ ಅರ್ಜೆಂಟೀನಾ ತಂಡ 3–2 ಸೆಟ್‌ಗಳಿಂದ ಬ್ರೆಜಿಲ್‌ ತಂಡವನ್ನು ಪರಾಭವಗೊಳಿಸಿತು. ಎದುರಾಳಿಗಳಿಂದ ಪ್ರಬಲ ಪೈಪೋಟಿ ಎದುರಿಸಿದ ಅರ್ಜೆಂಟೀನಾ ಆಟಗಾರರು 2 ಗಂಟೆ 17 ನಿಮಿಷ ಛಲದಿಂದ ಹೋರಾಡಿ ಗೆಲುವು ಒಲಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT