ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲದ ಒಲಿಂಪಿಕ್ಸ್‌: ಭಾರತದ ಅಥ್ಲೀಟ್‌ ಸಾಧನೆ; ಆರಿಫ್‌ ಖಾನ್‌ಗೆ 45ನೇ ಸ್ಥಾನ

Last Updated 13 ಫೆಬ್ರುವರಿ 2022, 17:44 IST
ಅಕ್ಷರ ಗಾತ್ರ

ಬೀಜಿಂಗ್‌: ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಭಾರತದ ಏಕೈಕ ಕ್ರೀಡಾಪಟು ಆಲ್ಪೈನ್ ಸ್ಕೀಯರ್‌ ಆರಿಫ್‌ ಖಾನ್ ಅವರು ಜೈಂಟ್‌ ಸ್ಲಲೋಮ್‌ನಲ್ಲಿ 45ನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು.

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲ ಜಿಲ್ಲೆಯವರಾದ 31 ವರ್ಷದ ಆರಿಫ್‌ ಎರಡು ರೇಸ್‌ಗಳಲ್ಲಿ ಒಟ್ಟಾರೆ ಎರಡು ತಾಸು47 ನಿಮಿಷ 24 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

ಯಾಂಗಿಂಗ್ ರಾಷ್ಟ್ರೀಯ ಆಲ್ಪೈನ್‌ ಸ್ಕೀಯಿಂಗ್‌ ಕೇಂದ್ರದಲ್ಲಿ ಭಾನುವಾರ ನಡೆದ ಸ್ಪರ್ಧೆಯಲ್ಲಿ ಪಾಲ್ಗೊಂಡವರು ಪ್ರತಿಕೂಲ ಹವಾಮಾನದಿಂದಾಗಿ ಅತ್ಯಂತ ಕಠಿಣ ಸವಾಲು ಎದುರಿಸಬೇಕಾಯಿತು. ಮೊದಲನೇ ರೇಸ್‌ನಲ್ಲಿ ಆರಿಫ್‌ 53ನೇ ಸ್ಥಾನ ಗಳಿಸಿದರು. 33 ಮಂದಿಗೆ ರೇಸ್ ಪೂರ್ಣಗೊಳಿಸಲು ಆಗಲಿಲ್ಲ. ಇಬ್ಬರು ಆರಂಭಿಸಲಾಗದೇ ಹಿಂದೆ ಉಳಿದರು. ಹಾವಾಮಾನ ವೈಪರೀತ್ಯದಿಂದಾಗಿ ನಾಲ್ಕು ತಾಸು ವಿಳಂಬವಾಗಿ ಆರಂಭಗೊಂಡ ಎರಡನೇ ರೇಸ್‌ನಲ್ಲಿ ಆರಿಫ್‌ 44ನೇ ಸ್ಥಾನ ಗಳಿಸಿದರು.

ಒಂಬತ್ತು ಮಂದಿಗೆ ಪೂರ್ಣಗೊಳಿಸಲು ಆಗಲಿಲ್ಲ. ಆರಿಫ್‌ ಒಟ್ಟಾರೆ ತೆಗೆದುಕೊಂಡ ಕಾಲದ ಆಧಾರದಲ್ಲಿ 45ನೇ ಸ್ಥಾನ ನೀಡಲಾಯಿತು. ಸ್ವಿಟ್ಜರ್ಲೆಂಡ್‌ನ ಮಾರ್ಕೊ ಒಡೆರ್ಮಟ್ (2:09.35) ಚಿನ್ನ ಗೆದ್ದುಕೊಂಡರು. ಸ್ಲೊವೇನಿಯಾದ ಜನ್ ಕ್ರಂಜೆಕ್ (2:09.54) ಮತ್ತು ಫ್ರಾನ್ಸ್‌ನ ಮ್ಯಾಥ್ಯೂ ಫೈವರ್‌(2:10.69) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT