ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics | ಏಳು ಪದಕಕ್ಕೆ ಕೊರಳೊಡ್ಡಿದ ಎಮ್ಮಾ ಮೆಕಿಯನ್ ವಿಶ್ವ ದಾಖಲೆ

Last Updated 1 ಆಗಸ್ಟ್ 2021, 4:57 IST
ಅಕ್ಷರ ಗಾತ್ರ

ಟೋಕಿಯೊ: ಆಸ್ಟ್ರೇಲಿಯಾದ ಈಜುಗಾರ್ತಿ ಎಮ್ಮಾ ಮೆಕಿಯನ್, ಪ್ರತಿಷ್ಠಿತ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಒಟ್ಟು ಏಳು ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ.

ಈ ಮೂಲಕ ಒಲಿಂಪಿಕ್ಸ್ ಮಹಾಕ್ರೀಡಾಕೂಟವೊಂದರಲ್ಲಿ ಅತಿ ಹೆಚ್ಚು ಪದಕಗಳನ್ನು ಗೆದ್ದ ಮಹಿಳಾ ಸ್ಪರ್ಧಿ ಎಂಬ ದಾಖಲೆಯನ್ನು ಸರಿಗಟ್ಟಿದ್ದಾರೆ.

ಈ ಹಿಂದೆ 1952ರಲ್ಲಿ ಸೋವಿಯತ್ ಒಕ್ಕೂಟದ ಜಿಮ್ನಾಸ್ಟ್ ಮರಿಯಾ ಗೊರೊವೊವಿಸ್ಕ ಏಳು ಪದಕಗಳನ್ನು ಗೆದ್ದಿದ್ದರು.

ಅಷ್ಟೇ ಯಾಕೆ ಒಲಿಂಪಿಕ್ಸ್‌ ಕ್ರೀಡಾಕೂಟವೊಂದರಲ್ಲಿ ಈಜು ಸ್ಪರ್ಧೆಯಲ್ಲಿ ಅತಿ ಹೆಚ್ಚು ಪದಕ ಗೆದ್ದ ಮಹಿಳಾ ಈಜುಗಾರ್ತಿ ಎಂಬ ಹಿರಿಮೆಗೂ ಎಮ್ಮಾ ಪಾತ್ರರಾಗಿದ್ದಾರೆ.

ಈ ಮೂಲಕ ಏಳು ಅಥವಾ ಅದಕ್ಕಿಂತಲೂ ಹೆಚ್ಚು ಪದಕಗಳನ್ನು ಗೆದ್ದ ದಿಗ್ಗಜ ಈಜುಪಟುಗಳಾದ ಮೈಕಲ್‌ ಫೆಲ್ಪ್ಸ್‌, ಮಾರ್ಕ್ ಸ್ಬಿಟ್ಜ್ ಹಾಗೂ ಮ್ಯಾಟ್ ಬಿಯಾಂಡಿ ಸಾಲಿಗೆ ಸೇರಿದ್ದಾರೆ. ಈ ಪೈಕಿ 2008ರ ಬೀಜಿಂಗ್ ಗೇಮ್ಸ್‌ನಲ್ಲಿ ಮೈಕಲ್‌ ಫೆಲ್ಪ್ಸ್‌ ಎಂಟು ಚಿನ್ನದ ಪದಕಗಳನ್ನು ಗೆದ್ದಿದ್ದರು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಎಮ್ಮಾ ಮೆಕಿಯನ್ ಗೆದ್ದ ಪದಕಗಳ ಪಟ್ಟಿ ಇಂತಿದೆ:

4x100 ಫ್ರೀಸ್ಟೈಲ್ ರಿಲೇ (ಚಿನ್ನ, ವಿಶ್ವದಾಖಲೆ)
100 ಫ್ರೀ (ಚಿನ್ನ, ಒಲಿಂಪಿಕ್ಸ್ ದಾಖಲೆ)
50 ಫ್ರೀ (ಚಿನ್ನ)
100 ಬಟರ್‌ಫ್ಲೈ (ಕಂಚು)
4x200 ಫ್ರೀ ರಿಲೇ (ಕಂಚು)
4x100 ಮಿಕ್ಸೆಡ್ ಮೆಡ್ಲಿ ರಿಲೇ (ಕಂಚು)
4x100 ಮೆಡ್ಲಿ ರಿಲೇ (ಚಿನ್ನ, ಒಲಿಂಪಿಕ್ಸ್ ದಾಖಲೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT