ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್‌ ಓಪನ್‌ನಲ್ಲಿ ಜೊಕೊವಿಚ್ ಗೆಲುವಿನಲ್ಲಿ ಪುಟ್ಟ ಬಾಲಕನ ಪಾತ್ರ..!

Last Updated 14 ಜೂನ್ 2021, 10:48 IST
ಅಕ್ಷರ ಗಾತ್ರ

ಪ್ಯಾರಿಸ್: ಫ್ರೆಂಚ್ ಓಪನ್‌ನಲ್ಲಿ ಸಬಿರ್ಯಾದ ನೊವಾಕ್ ಜೊಕೊವಿಚ್ ಗೆಲುವಿನಲ್ಲಿ ಪುಟ್ಟ ಬಾಲಕನ ಪಾತ್ರ ಮಹತ್ತರವಾಗಿದೆ. ಈ ಬಗ್ಗೆ ಸ್ವತಃ ಜೊಕೊವಿಚ್ ಅವರೇ ಹೇಳಿಕೊಂಡಿದ್ದಾರೆ.

ಭಾನುವಾರ ನಡೆದ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿ ಫೈನಲ್ ಪಂದ್ಯದಲ್ಲಿ ಗ್ರೀಸ್‌ನ ಸ್ಟೆಫನೊಸ್ ಸಿಟ್ಸಿಪಾಸ್ ವಿರುದ್ಧ 6-7 (6), 2-6, 6-3, 6-2, 6-4ರ ಅಂತರದ ಪ್ರಯಾಸದ ಗೆಲುವು ದಾಖಲಿಸಿರುವ ಜೊಕೊವಿಚ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.

ಮೊದಲೆರಡು ಸೆಟ್‌ಗಳನ್ನು ಕಳೆದುಕೊಂಡ ಜೊಕೊವಿಚ್ ವಿರುದ್ಧ ಸಿಟ್ಸಿಪಾಸ್ ಗೆಲುವು ದಾಖಲಿಸಲಿದ್ದಾರೆ ಎಂದೇ ಅಂದಾಜಿಸಲಾಗಿತ್ತು. ಆದರೆ ಪುಟಿದೆದ್ದು ಬಂದ ಜೊಕೊವಿಚ್, ಅಂತಿಮ ಮೂರು ಸೆಟ್‌ಗಳನ್ನು ಗೆದ್ದು, ಇತಿಹಾಸ ರಚಿಸಿದ್ದರು.

ಅಷ್ಟೇ ಯಾಕೆ ಎಲ್ಲ ನಾಲ್ಕು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ತಲಾ ಎರಡು ಬಾರಿ ಗೆದ್ದ ದಾಖಲೆಯನ್ನು ಬರೆದಿದ್ದಾರೆ.

ಸ್ಟೇಡಿಯಂನಲ್ಲಿ ನಿಂತು ಪಂದ್ಯ ವೀಕ್ಷಿಸುತ್ತಿದ್ದ ಜೊಕೊವಿಚ್ ಕಟ್ಟಾ ಅಭಿಮಾನಿಯಾಗಿರುವ ಪುಟ್ಟ ಬಾಲಕನೊಬ್ಬ ಪಂದ್ಯದ ಆರಂಭದಿಂದಲೂ ಚಾಂಪಿಯನ್ ಆಟಗಾರನನ್ನು ಬೆಂಬಲಿಸಿದ್ದರು. ಜೊಕೊವಿಚ್ ಹಿನ್ನೆಡೆ ಅನುಭವಿಸಿದಾಗಲೂ ಆತನ ಆತ್ಮವಿಶ್ವಾಸ ಕುಗ್ಗಲಿಲ್ಲ. ಕೊನೆಗೆ ಪಂದ್ಯ ಗೆದ್ದಾಗ ಬಾಲಕನ ಆನಂದಕ್ಕೆ ಪಾರವೇ ಇರಲಿಲ್ಲ.

ಯುವ ಟೆನಿಸ್ ಪ್ರೇಮಿಯ ಪ್ರೀತಿಗೆ ಮನಸೋತ ಜೊಕೊವಿಚ್, ಪಂದ್ಯದ ಬಳಿಕ ಬಾಲಕನ ಬಳಿ ತೆರಳಿ ತಮ್ಮ 'ರ‍್ಯಾಕೆಟ್' ಅನ್ನು ಉಡುಗೊರೆಯಾಗಿ ನೀಡಿದರು. ಪ್ರಸ್ತುತ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ:

'ಹುಡುಗ ಯಾರೆಂಬುದು ನನಗೆ ತಿಳಿದಿಲ್ಲ. ಆದರೆ ಪಂದ್ಯ ಮುಗಿಯುವ ವರೆಗೂ ನನ್ನ ಕಿವಿಗೆ ಆತನ ಧ್ವನಿ ಕೇಳಿಸುತ್ತಿತ್ತು. ವಿಶೇಷವಾಗಿಯೂ ನಾನು ಎರಡು ಸೆಟ್‌ನಿಂದ ಹಿನ್ನಡೆ ಅನುಭವಿಸಿದಾಗಲೂ ನನ್ನನ್ನು ಹುರಿದುಂಬಿಸುತ್ತಿದ್ದನು. ಆತನ ಮಾತುಗಳು ನನಗೆ ತಂತ್ರಗಳನ್ನು ಹೆಣೆಯಲು ನೆರವಾಗುತ್ತಿತ್ತು. ಅಕ್ಷರಶಃ ಆತ ನನಗೆ ಕೋಚಿಂಗ್ ಮಾಡುತ್ತಿದ್ದ' ಎಂದು ಜೊಕೊವಿಚ್ ವಿವರಿಸಿದ್ದಾರೆ.

ಒಟ್ಟಿನಲ್ಲಿ ನೊವಾಕ್ ಜೊಕೊವಿಚ್ 19ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇನ್ನೊಂದು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದರೆ ರೋಜರ್ ಫೆಡರರ್ ಹಾಗೂ ರಫೆಲ್ ನಡಾಲ್ ದಾಖಲೆಯನ್ನು ಸರಿಗಟ್ಟಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT