ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್ ಓಪನ್‌ನಲ್ಲಿ ಮ್ಯಾಚ್‌ ಫಿಕ್ಸಿಂಗ್ ಆರೋಪ; ರಷ್ಯಾ ಆಟಗಾರ್ತಿಯ ಬಂಧನ

Last Updated 4 ಜೂನ್ 2021, 11:44 IST
ಅಕ್ಷರ ಗಾತ್ರ

ಪ್ಯಾರಿಸ್: ಕಳೆದ ವರ್ಷ ಫ್ರೆಂಚ್ ಓಪನ್‌ನಲ್ಲಿ ನಡೆದ ಡಬಲ್ಸ್ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ರಷ್ಯಾದ ಟೆನಿಸ್ ಆಟಗಾರ್ತಿ ಯಾನಾ ಸಿಝಿಕೊವಾ ಅವರನ್ನು ಪ್ಯಾರಿಸ್ ಪೊಲೀಸರು ಶುಕ್ರವಾರ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಪ್ರಸಕ್ತ ಸಾಗುತ್ತಿರುವ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಗುರುವಾರ ರಾತ್ರಿ ನಡೆದ ಪಂದ್ಯದ ಬಳಿಕ 26 ವರ್ಷದ ಸಿಝಿಕೊವಾ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಲೆ ಪ್ಯಾರಿಸಿಯನ್ ಪತ್ರಿಕೆಯು ರಷ್ಯಾ ಟೆನಿಸ್ ಆಟಗಾರ್ತಿಯ ಬಂಧನವನ್ನು ಮೊದಲು ವರದಿ ಮಾಡಿದ್ದು, ಪಂದ್ಯದ ಬಳಿಕ ಮಸಾಜ್‌ನಿಂದ ಹೊರಬಂದ ಬಳಿಕ ಬಂಧಿಸಲಾಗಿದ್ದು, ಆಕೆಯ ಹೋಟೆಲ್ ಕೊಠಡಿಯನ್ನು ಪರಿಶೀಲಿಸಲಾಗಿದೆ ಎಂದು ತಿಳಿಸಿದೆ.

2020 ಅಕ್ಟೋಬರ್‌ನಲ್ಲಿ ನಡೆದ ಪಂದ್ಯದಲ್ಲಿ ಸಿಝಿಕೊವಾ ಹಾಗೂ ಆಕೆಯ ಜೊತೆಗಾರ್ತಿ ಅಮೆರಿಕದ ಮ್ಯಾಡಿಸನ್ ಬ್ರೆಂಗಲ್ ಜೋಡಿಯು ರೋಮಾನಿಯಾದ ಆಂಡ್ರಿಯಾ ಮಿಟು ಹಾಗೂ ಪ್ಯಾಟ್ರಿಷಿಯಾ ಮಾರಿಯಾ ಟಿಗ್ ವಿರುದ್ಧ ನಡೆದ ಪಂದ್ಯದಲ್ಲಿ ಪರಾಭವಗೊಂಡಿದ್ದರು. ಈ ಪಂದ್ಯದಲ್ಲಿ ನಡೆದ ಮೋಸದಾಟಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ.

ಈ ನಿರ್ದಿಷ್ಟ ಪಂದ್ಯದಲ್ಲಿ ಎರಡನೇ ಸೆಟ್‌ನಲ್ಲಿ ಸಿಝಿಕೊವಾ ಎರಡು ಡಬಲ್ ಫಾಲ್ಟ್‌ಗಳನ್ನು ಎಸಗಿದ್ದರು. ಇದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಗುರುವಾರ ನಡೆದ ಫ್ರೆಂಚ್ ಓಪನ್ ಮಹಿಳಾ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಸಿಝಿಕೊವಾ ಹಾಗೂ ಎಕಟೆರಿನಾ ಅಲೆಕ್ಸಾಂಡ್ರೊವಾ ಜೋಡಿಯು ಆಸ್ಟ್ರೇಲಿಯಾದ ಸ್ಟಾರ್ಮ್ ಸ್ಯಾಂಡರ್ಸ್ ಹಾಗೂಅಜ್ಲಾ ಟೊಮ್ಲ್‌ಜಾನೋವಿಕ್ ಜೋಡಿ ವಿರುದ್ಧ 1-6, 1-6ರ ಅಂತರದಲ್ಲಿ ಸೋಲನುಭವಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT