ಮಿಯಾಮಿ ಗಾರ್ಡನ್ಸ್, ಅಮೆರಿಕ (ಎಪಿ): ಗ್ರೀಕ್‌ನ ಸ್ಟೆಫನೊಸ್ ಸಿಟ್ಸಿಪಾಸ್ ಅವರು ಇಲ್ಲಿ ನಡೆಯುತ್ತಿರುವ ಮಿಯಾಮಿ ಓಪನ್ ಟೆನಿಸ್ ಟೂರ್ನಿಯಲ್ಲಿ ಜಯ ಗಳಿಸಿದರು.
ಪುರುಷರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ಸಿಟ್ಸಿಪಾಸ್ 6-3, 4-6, 6-4ರಿಂದ ಚಿಲಿಯ ಕ್ರಿಸ್ಟಿಯನ್ ಗರಿನ್ ಅವರನ್ನು ಮಣಿಸಿದರು. ಮೂರನೇ ಶ್ರೇಯಾಂಕದ ಸಿಟ್ಸಿಪಾಸ್ ಅವರಿಗೆ ಮೊದಲ ಸುತ್ತಿನಲ್ಲಿ ಬೈ ಲಭಿಸಿತ್ತು. ಎರಡನೇ ಸುತ್ತಿನಲ್ಲಿ ವಾಕ್‌ಓವರ್ ಪಡೆದಿದ್ದರು.
ಅರ್ಜೆಂಟೀನಾದ, 25ನೇ ಶ್ರೇಯಾಂಕದ ಆಟಗಾರ ಫ್ರಾನ್ಸಿಸ್ಕೊ ಸೆರುಂಡೊಲೊ 6-2, 7-5ರಿಂದ ಐದನೇ ಶ್ರೇಯಾಂಕದ ಕೆನಡಾ ಆಟಗಾರ ಫೆಲಿಕ್ಸ್ ಅಗರ್ ಅಲಿಯಾಸ್ಸಿಮ್ ಅವರನ್ನು ಮಣಿಸಿ ಮುನ್ನಡೆದರು.
ಆ್ಯಂಡ್ರಿಸ್ಕೂಗೆ ಗಾಯ: ಮಹಿಳೆಯರ ವಿಭಾಗದ ಪಂದ್ಯದಲ್ಲಿ, ಅಮೆರಿಕ ಓಪನ್ ಮಾಜಿ ಚಾಂಪಿಯನ್ ಬಿಯಾಂಕಾ ಆ್ಯಂಡ್ರಿಸ್ಕೂ ಗಾಯಗೊಂಡು ನಿವೃತ್ತ ರಾದರು. ನಾಲ್ಕನೇ ಸುತ್ತಿನ ಪಂದ್ಯದಲ್ಲಿ ರಷ್ಯಾದ ಏಕಟೆರಿನಾ ಅಲೆಕ್ಸಾಂಡ್ರೊವಾ ಎದುರು ಸ್ಪರ್ಧಿಸಿದ್ದ ಬಿಯಾಂಕಾ ಒಂದು ಸೆಟ್ ಹಿನ್ನಡೆಯಲ್ಲಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.