ನ್ಯೂಯಾರ್ಕ್: ಹಾಲಿ ಚಾಂಪಿಯನ್ ಹಾಗೂ ವಿಶ್ವದ ಅಗ್ರ ಕ್ರಮಾಂಕದ ಆಟಗಾರ್ತಿ ಅರಿನಾ ಸಬಲೆಂಕಾ ಅವರು ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಫೈನಲ್ನಲ್ಲಿ ಅಮಂಡಾ ಅನಿಸಿಮೋವಾ ಅವರನ್ನು ಎದುರಿಸಲಿದ್ದಾರೆ. ಅನಿಸಿಮೋವಾ ಅವರು ಗುರುವಾರ ನಡೆದ ಸೆಮಿಫೈನಲ್ನಲ್ಲಿ ಜಪಾನ್ನ ನವೋಮಿ ಒಸಾಕಾ ಅವರ ಯಶಸ್ಸಿನ ಹೋರಾಟಕ್ಕೆ ತೆರೆಯೆಳೆದರು.

2014ರಲ್ಲಿ ಸೆರೆನಾ ವಿಲಿಯಮ್ಸ್ ಅವರ ನಂತರ ನ್ಯೂಯಾರ್ಕ್ನಲ್ಲಿ ಪ್ರಶಸ್ತಿ ಉಳಿಸಿಕೊಂಡ ಮೊದಲ ಆಟಗಾರ್ತಿಯಾಗುವ ಪ್ರಯತ್ನದಲ್ಲಿರುವ ಸಬಲೆಂಕಾ ಸೆಮಿಫೈನಲ್ ಪಂದ್ಯದಲ್ಲಿ ಅಮೆರಿಕದ ಜೆಸಿಕಾ ಪೆಗುಲಾ ಅವರನ್ನು 4–6, 6–3, 6–4 ರಿಂದ ಹಿಮ್ಮೆಟ್ಟಿಸಿದರು. 2024ರಲ್ಲಿ ಇವರಿಬ್ಬರು ಫೈನಲ್ನಲ್ಲಿ
ಮುಖಾಮುಖಿಯಾಗಿದ್ದರು.

27 ವರ್ಷದ ಸಬಲೆಂಕಾ ಸತತ ಮೂರನೇ ಬಾರಿ ಇಲ್ಲಿ ಫೈನಲ್ ತಲುಪಿದ್ದಾರೆ. ‘ಇದು ಕಠಿಣ ಪಂದ್ಯವಾಗಿತ್ತು. ಆಕೆ (ಪೆಗುಲಾ) ಎಂದಿನ ರೀತಿ ಅಮೋಘವಾಗಿಯೇ ಆಡಿದರು. ನಾನು ಈ ಗೆಲುವಿಗೆ ತುಂಬಾ ಶ್ರಮ ಹಾಕಬೇಕಾಯಿತು’ ಎಂದು ಮೂರು ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಬೆಲರೂಸ್ನ ಆಟಗಾರ್ತಿ
ಪ್ರತಿಕ್ರಿಯಿಸಿದರು.

ಸಬಲೆಂಕಾ ಈ ಮೂಲಕ ಕಳೆದ ಐದು ಗ್ರ್ಯಾನ್ಸ್ಲಾಮ್ಗಳ ಪೈಕಿ ನಾಲ್ಕರಲ್ಲಿ ಫೈನಲ್ ತಲುಪಿದಂತಾಗಿದೆ. ಆದರೆ 2024ರ ಅಮೆರಿಕ ಓಪನ್ ನಂತರ ಅವರು ಯಾವುದೇ ಪ್ರಮುಖ ಟೂರ್ನಿಯಲ್ಲಿ ಕಿರೀಟ ಧರಿಸಿಲ್ಲ. ಈ ವರ್ಷ ಆಸ್ಟ್ರೇಲಿಯನ್ ಓಪನ್ ಮತ್ತು ಫ್ರೆಂಚ್ ಓಪನ್ನಲ್ಲಿ ರನ್ನರ್ ಅಪ್ ಆಗಿದ್ದರು.

ಸಬಲೆಂಕಾ ಈಗ, ವಿಂಬಲ್ಡನ್ ಸೆಮಿಫೈನಲ್ನಲ್ಲಿ ಅನಿಸಿಮೋವಾ ಎದುರು ಅನುಭವಿಸಿದ ಸೋಲಿಗೆ ಸೇಡುತೀರಿಸುವ ತವಕದಲ್ಲಿದ್ದಾರೆ.

ಎಂಟನೇ ಶ್ರೇಯಾಂಕದ ಅನಿಸಿಮೋವಾ 6–7 (4–7), 7–5 (7–3), 6–3 ರಿಂದ 23ನೇ ಶ್ರೇಯಾಂಕದ ಒಸಾಕಾ ಅವರನ್ನು ಸೋಲಿಸಿದಾಗ ನ್ಯೂಯಾರ್ಕ್ನಲ್ಲಿ ಮಧ್ಯರಾತ್ರಿ ಕಳೆದಿತ್ತು. ಒಸಾಕಾ ಇಲ್ಲಿ ಎರಡು ಬಾರಿ ಚಾಂಪಿಯನ್ ಆಗಿದ್ದರು.

ಮಾತೃತ್ವ ವಿರಾಮದ ನಂತರ 2024ರ ಆರಂಭದಲ್ಲಿ ಸಕ್ರಿಯ ಟೆನಿಸ್ಗೆ ಮರಳಿದ ಬಳಿಕ ಒಸಾಕಾ ಇದೇ ಮೊದಲ ಬಾರಿ ಗ್ರ್ಯಾನ್ಸ್ಲಾಮ್ ಟೂರ್ನಿಯೊಂದರ ಸೆಮಿಫೈನಲ್ ಹಂತ ತಲುಪಿದ್ದರು.

ಭಾಂಬ್ರಿ ಯಶಸ್ಸಿನ ಓಟ ಅಂತ್ಯ

ನ್ಯೂಯಾರ್ಕ್: ಭಾರತದ ಯುಕಿ ಭಾಂಬ್ರಿ ಅವರು ಅಮೆರಿಕ ಓಪನ್ ಪುರುಷರ ಡಬಲ್ಸ್ ಸೆಮಿಫೈನಲ್
ನಲ್ಲಿ ಗುರುವಾರ ಸೋಲನುಭವಿಸಿದರು.

ಆದರೆ ಗ್ರ್ಯಾನ್ಸ್ಲಾಮ್ ಟೂರ್ನಿಯೊಂದರಲ್ಲಿ ಸೆಮಿಫೈನಲ್ ತಲುಪಿದ್ದು 33 ವರ್ಷ ವಯಸ್ಸಿನ ದೆಹಲಿ ಆಟ ಗಾರನ ಅತ್ಯುತ್ತಮ ಸಾಧನೆಯಾಗಿ ದಾಖಲಾಯಿತು. ನ್ಯೂಜಿಲೆಂಡ್ನ ಮೈಕೆಲ್ ವೀನಸ್ ಜೊತೆಗೂಡಿ ಆಡಿದ ಅವರು 7–6 (2), 6–7 (5), 4–6ರಿಂದ ನೀಲ್ ಸ್ಕುಪ್ಸ್ಕಿ– ಜೋ ಸಾಲಿಸ್ಬರಿ ಜೋಡಿಗೆ ಮಣಿಯಬೇಕಾಯಿತು.

ಫ್ಲಷಿಂಗ್ ಮೆಡೋಸ್ನಲ್ಲಿ ಭಾರತ– ನ್ಯೂಜಿಲೆಂಡ್ ಆಟಗಾರರ ಜೋಡಿ 11ನೇ ಮತ್ತು 4ನೇ ಶ್ರೇಯಾಂಕದ ಜೋಡಿಯನ್ನು ಸೋಲಿಸಿ ಗಮನ ಸೆಳೆದಿತ್ತು. ಲಿಯಾಂಡರ್ ಪೇಸ್, ಮಹೇಶ್ ಭೂಪತಿ, ರೋಹನ್ ಬೋಪಣ್ಣ ಅವರ ಪರಂಪರೆಯಲ್ಲಿ ಭಾಂಬ್ರಿ ಸಹ ನಡೆದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.