ಭಾನುವಾರ, ಆಗಸ್ಟ್ 1, 2021
27 °C

ಕೋವಿಡ್‌ ವಿರುದ್ಧ ಹೋರಾಟ: ಮಂತ್ರ ಪಠಣ, ಪ್ರಾರ್ಥನೆಗೆ ಮೊರೆ ಹೋದ ಗೋವಾ ಜನತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪಣಜಿ: ಕೋವಿಡ್‌–19ನ ಪ್ರಸರಣವನ್ನು ತಡೆಯಲು ಗೋವಾದ ಕೆಲ ಪ್ರದೇಶಗಳಲ್ಲಿ ಜನರು ದೇವರ ಮೊರೆ ಹೋಗಿದ್ದು, ವಿಶೇಷ ಪ್ರಾರ್ಥನೆ, ಮಂತ್ರ ಪಠಣ ಆರಂಭಿಸಿದ್ದಾರೆ. 

ಕೆಲ ತಿಂಗಳು ಹಿಂದೆ ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳೇ ವರದಿಯಾಗಿರಲಿಲ್ಲ. ಹೀಗಾಗಿ ರಾಜ್ಯವನ್ನು ಹಸಿರು ವಲಯ ಎಂಬುದಾಗಿ ಮೇ 1ರಂದು ಘೋಷಿಸಲಾಗಿತ್ತು. ಆದರೆ, ನಂತರದ ದಿನಗಳಲ್ಲಿ ಜನರು ಸೋಂಕು ಪ್ರಸರಣ ಕಂಡು ಬಂತಲ್ಲದೇ, ಶುಕ್ರವಾರ ಕೋವಿಡ್‌ ಪ್ರಕರಣಗಳ ಸಂಖ್ಯೆ 5.900 ತಲುಪಿತ್ತು. ಈ ವರೆಗೆ 45 ಜನರು ಈ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. 

ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ (ಎಂಜಿಪಿ) ವತಿಯಿಂದ ದೇವಾಲಯಗಳಲ್ಲಿ ಮಹಾಮೃತ್ಯುಂಜಯ ಮಂತ್ರ ಪಠಣ ಆಯೋಜಿಸಲಾಗಿದೆ. ಕೆಲವೆಡೆ ವಿಶೇಷ ಪ್ರಾರ್ಥನಾ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ.

‘ರಾಜ್ಯದ ಪ್ರತಿಯೊಂದು ದೇವಾಲಯದಲ್ಲಿ ಮಹಾಮೃತ್ಯುಂಜಯ ಮಂತ್ರವನ್ನು ಲಕ್ಷ ಬಾರಿ ಪಠಿಸಲಾಗುವುದು. ಪೋಂಡಾ ತಾಲ್ಲೂಕಿನ ಧವಳಿ ಗ್ರಾಮದ ವಾಮನೇಶ್ವರ ದೇವಸ್ಥಾನದಲ್ಲಿ ಮಂತ್ರ ಪಠಣಕ್ಕೆ ಚಾಲನೆ ನೀಡಲಾಗಿದೆ’ ಎಂದು ಎಂಜಿಪಿ ಮುಖಂಡ, ಶಾಸಕ ಸುದಿನ್‌ ಧವಳೀಕರ್‌ ಹೇಳಿದರು.

‘ಋಗ್ವೇದದಲ್ಲಿ ಮಹಾಮೃತ್ಯುಂಜಯ ಮಂತ್ರದ ಉಲ್ಲೇಖ ಇದೆ. ನಮ್ಮ ಸುತ್ತಲು ಇರುವ ನಕಾರಾತ್ಮಕ ಶಕ್ತಿ ನಿರ್ಮೂಲನೆ ಮಾಡುವ ಶಕ್ತಿ ಈ ಮಂತ್ರಕ್ಕಿದೆ. ಕೋವಿಡ್‌–19 ಸಹ ಒಂದು ನಕಾರಾತ್ಮಕ ಶಕ್ತಿಯಾಗಿದ್ದು, ಮಾನವ ಕುಲಕ್ಕೆ ಕಂಟಕವಾಗಿ ಪರಿಣಮಿಸಿದೆ’ ಎಂದು ಹೇಳಿದರು. 

ದಕ್ಷಿಣ ಗೋವಾದ ಸಾಂಗೆಮ್‌ ತಾಲ್ಲೂಕಿನ ನೇತ್ರಾವಳಿ ಗ್ರಾಮದ ಜನರು ‘ಬೇತಾಳ ಸಾತೇರಿ’ ದೇವಸ್ಥಾನದಲ್ಲಿ ಪ್ರಾರ್ಥನೆ, ವಿಶೇಷ ಪೂಜೆ ಆರಂಭಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು