ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update: ಸೋಂಕಿತರ ಸಂಖ್ಯೆ 45 ಲಕ್ಷ, ಮೃತರ ಸಂಖ್ಯೆ 3 ಲಕ್ಷ

Last Updated 16 ಮೇ 2020, 16:24 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಜಾನ್ಸ್ ಹಾಪ್ಕಿನ್ಸ್ ಕೊರೊನಾ ವೈರಸ್ ಸೆಂಟರ್ ಮಾಹಿತಿ ಪ್ರಕಾರ, ಜಗತ್ತಿನಾದ್ಯಂತ 45,77,988ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 3, 08,899ಜನರು ಸಾವಿಗೀಡಾಗಿದ್ದಾರೆ.

25,58,456 ಪ್ರಕರಣಗಳು ಕ್ರಿಯಾಶೀಲವಾಗಿದ್ದು, ಅದರಲ್ಲಿ 45,008 ಜನರ ಸ್ಥಿತಿ ಗಂಭೀರವಾಗಿದೆ.

ಜಾಗತಿಕವಾಗಿ ಅಮೆರಿಕದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ಕಂಡುಬಂದಿವೆ. ಈವರೆಗೆ ಕೊರೊನಾ ವೈರಸ್‌ ಸೋಂಕಿಗೆ ಅಮೆರಿಕಾದಲ್ಲಿ 88,507 ಜನರು ಮೃತರಾಗಿದ್ದು, ಒಟ್ಟು 14,84,285 ಮಂದಿಗೆ ಸೋಂಕು ತಗುಲಿದೆ.

ರಷ್ಯಾದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 2,62,843ಕ್ಕೇರಿದ್ದು, ಸಾವಿನ ಸಂಖ್ಯೆ 2418 ತಲುಪಿದೆ. ಆ ಮೂಲಕ ರಷ್ಯಾ ದೇಶವು ಕೊರೊನಾ ವೈರಸ್‌ ಸೋಂಕಿನ ಹೊಸ ಕೇಂದ್ರವಾಗಿ ಮಾರ್ಪಟ್ಟಿದೆ.

ಸ್ಪೇನ್‌ನಲ್ಲಿ 27,459, ಇಟಲಿಯಲ್ಲಿ 31,610, ಇಂಗ್ಲೆಂಡ್‌ನಲ್ಲಿ 33,998, ಪ್ರಾನ್ಸ್‌ನಲ್ಲಿ 27,529 ಜನರು ಕೊರೊನಾ ಸೋಂಕಿನಿಂದ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT