ಭಾನುವಾರ, ಜುಲೈ 25, 2021
28 °C

ಕೊರೊನಾ ಮುಕ್ತವಾಗಿದ್ದ ನ್ಯೂಜಿಲೆಂಡ್‌ನಲ್ಲಿ ಮತ್ತೆ 2 ಸೋಂಕು ಪ್ರಕರಣಗಳು ಪತ್ತೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

newzeland

ವೆಲ್ಲಿಂಗ್ಟನ್ : ಕೋವಿಡ್-19 ಮುಕ್ತವಾಗಿದ್ದ ನ್ಯೂಜಿಲೆಂಡ್‌ನಲ್ಲಿ 25 ದಿನಗಳ ನಂತರ ಮಂಗಳವಾರ ಎರಡು ಪ್ರಕರಣಗಳು ವರದಿ ಆಗಿವೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಬ್ರಿಟನ್‌ನಿಂದ ಬಂದಿರುವ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. 

ಬ್ರಿಟನ್‌ನಿಂದ ಇತ್ತೀಚೆಗೆ ಬಂದಿರುವ ಇಬ್ಬರಿಗೆ ಕೋವಿಡ್ -19  ರೋಗ ಇರುವುದು ದೃಢಪಟ್ಟಿದೆ ಎಂದು ಸಚಿವಾಲಯ ತಮ್ಮ ಪ್ರಕಟಣೆಯಲ್ಲಿ ಹೇಳಿದೆ. ನ್ಯೂಜಿಲೆಂಡ್ ಮೂಲದವರು ವಿದೇಶದಲ್ಲಿದ್ದರೆ ಅವರು ಮಾತ್ರ ದೇಶಕ್ಕೆ ಮರಳಬಹುದಾಗಿದೆ. ಅಂದರೆ ನ್ಯೂಜಿಲೆಂಡ್ ಪ್ರಜೆಗಳಿಗೆ ಮಾತ್ರ ದೇಶದ ಗಡಿ ತೆರೆಯಲಾಗಿದೆ. ವ್ಯಾಪಾರ ಮತ್ತು ಇನ್ನಿತರ ತುರ್ತು ಸಂದರ್ಭಗಳಿದ್ದರೆ ಮಾತ್ರ ಇತರರಿಗೆ ಪ್ರವೇಶ ಕಲ್ಪಿಸಲಾಗಿದೆ. ಹೀಗೆ ಬಂದವರು ಎರಡು ವಾರ ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿರಬೇಕು.

ಇದನ್ನೂ ಓದಿ: ನ್ಯೂಜಿಲೆಂಡ್ ಮೊದಲ‌ ಕೊರೊನಾ ಮುಕ್ತ ದೇಶ!

5 ದಶಲಕ್ಷ ಜನಸಂಖ್ಯೆ ಹೊಂದಿರುವ  ನ್ಯೂಜಿಲೆಂಡ್‌ನಲ್ಲಿ ಕೋವಿಡ್‌ನಿಂದ 22 ಮಂದಿ ಸಾವಿಗೀಡಾಗಿದ್ದಾರೆ. ದೇಶ ಕೊರೊನಾವೈರಸ್ ಮುಕ್ತವಾಗಿದೆ ಎಂದು ಕಳೆದ ವಾರ ಘೋಷಿಸಲಾಗಿತ್ತು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು