ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಸೇರಿ ಏಳು ರಾಜ್ಯಗಳಿಂದ ಶ್ರಮಿಕ್ ರೈಲುಗಳ ಸಂಚಾರಕ್ಕೆ ಮನವಿ

Last Updated 12 ಜೂನ್ 2020, 11:28 IST
ಅಕ್ಷರ ಗಾತ್ರ

ನವದೆಹಲಿ: ಏಳು ರಾಜ್ಯ ಸರ್ಕಾರಗಳು ಒಟ್ಟಾರೆ 63 ವಿಶೇಷ ಶ್ರಮಿಕ್‌ ರೈಲುಗಳ ಸಂಚಾರಕ್ಕೆ ರೈಲ್ವೆ ಇಲಾಖೆಗೆ ಮನವಿ ಮಾಡಿವೆ. ಕರ್ನಾಟಕ 6 ರೈಲುಗಳ ಸಂಚಾರಕ್ಕೆ ಮನವಿ ಮಾಡಿದೆ.

ಕೇರಳದಿಂದ ಒಟ್ಟು 32 ರೈಲುಗಳು ಸಂಚರಿಸಲಿವೆ. ಬಹುತೇಕ ರೈಲುಗಳು ಪಶ್ಚಿಮ ಬಂಗಾಳಕ್ಕೆ ಅಂದರೆ ಒಟ್ಟು 23 ರೈಲುಗಳು ಸಂಚರಿಸಲಿವೆ ಎಂದು ರೈಲ್ವೆ ಇಲಾಖೆಯು ತಿಳಿಸಿದೆ.

ತಮಿಳುನಾಡು (12 ಶ್ರಮಿಕ್‌ ರೈಲುಗಳು), ಜಮ್ಮು ಮತ್ತು ಕಾಶ್ಮೀರ (9), ಆಂಧ್ರಪ್ರದೇಶ (3), ಪಶ್ಚಿಮ ಬಂಗಾಳ (2), ಗುಜರಾತ್‌ (1) ರಾಜ್ಯಗಳು ವಿಶೇಷ ಶ್ರಮಿಕ್ ರೈಲುಗಳಿಗೆ ಮನವಿ ಸಲ್ಲಿಸಿವೆ.

ವಲಸೆ ಕಾರ್ಮಿಕರ ಸಂಚಾರಕ್ಕಾಗಿ ಮನವಿ ಸಲ್ಲಿಸುವಂತೆ ರೈಲ್ವೆ ಮಂಡಳಿಯ ಅಧ್ಯಕ್ಷರು ರಾಜ್ಯಗಳ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT