ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

36 ಗಂಟೆಗಳಲ್ಲಿ ದೆಹಲಿ ಗಲಭೆ ನಿಯಂತ್ರಿಸಿದ್ದೆವು: ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ

Last Updated 11 ಮಾರ್ಚ್ 2020, 13:14 IST
ಅಕ್ಷರ ಗಾತ್ರ

ನವದೆಹಲಿ:ದೆಹಲಿ ಹಿಂಸಾಚಾರಕ್ಕೆ ಬಿಜೆಪಿ ನಾಯಕರಾದ ಅನುರಾಗ್ ಠಾಕೂರ್, ಪರ್ವೇಶ್ ವರ್ಮಾ ಮತ್ತು ಕಪಿಲ್ ಮಿಶ್ರಾ ಅವರ ಪ್ರಚೋದನಾಕಾರಿ ಹೇಳಿಕೆಯೇ ಕಾರಣ ಎಂಬ ಆರೋಪವನ್ನು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ನಿರಾಕರಿಸಿದ್ದಾರೆ.

ದೆಹಲಿ ದಳ್ಳುರಿ ಬಗ್ಗೆ ಬುಧವಾರ ಲೋಕಸಭೆಯಲ್ಲಿ ನಡೆದ ಚರ್ಚೆ ವೇಳೆ ಮಾತನಾಡಿದ ಲೇಖಿ, ದೆಹಲಿ ಹಿಂಸಾಚಾರಕ್ಕೆ ಅನುರಾಗ್ ಠಾಕೂರ್ ಮತ್ತು ಪರ್ವೇಶ್ ವರ್ಮಾ ಅವರನ್ನು ದೂರಲಾಗುತ್ತಿದೆ . ಅನುರಾಗ್ ಮತ್ತು ವರ್ಮಾ ಜನವರಿ 20 ಮತ್ತು ಜನವರಿ 28ರಂದು ಹೇಳಿಕೆ ನೀಡಿದ್ದರು. ಆದಾಗ್ಯೂ, ಗಲಭೆ ಆರಂಭವಾಗಿದ್ದು ಫೆಬ್ರುವರಿ 23ರಂದು. ಅಮಾನತುಲ್ಲಾಖಾನ್, ಶರ್ಜೀಲ್ ಇಮಾಮ್ ಮತ್ತು ತಾಹೀರ್ ಹುಸೇನ್ ಅವರ ಕೃತ್ಯಗಳಿಗಾಗಿ ಕಪಿಲ್ ಮಿಶ್ರಾ ಅವರನ್ನು ಹೊಣೆಯಾಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನ ಹೆಸರು ಉಲ್ಲೇಖಿಸಿದೆಯೇ ಟೀಕೆ ನಡೆಸಿದ ಲೇಖಿ, ದೆಹಲಿ ಗಲಭೆಗೆ ಕಾರಣ ಹಳೇ ಬೃಹತ್ ಪಕ್ಷ ಎಂದು ಆರೋಪಿಸಿದ ಅವರುನಮ್ಮ ಸರ್ಕಾರ 36 ಗಂಟೆಗಳಲ್ಲಿ ಗಲಭೆಯನ್ನು ನಿಯಂತ್ರಿಸಿದೆ ಎಂದಿದ್ದಾರೆ.

1984ರ ದಂಗೆ ಬಗ್ಗೆ ಅವರು ಹೇಳುತ್ತಿದ್ದಾರೆ. ಅದರಲ್ಲಿ ಆರೋಪಿಗಳಾಗಿದ್ದವರು ಈಗ ಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ ಎಂಬುದನ್ನು ನಾನು ಅವರಿಗೆ ನೆನಪಿಸುತ್ತಿದ್ದೇನೆ ಎಂದಿದ್ದಾರೆ ಲೇಖಿ.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕಳೆದ ಡಿಸೆಂಬರ್ ತಿಂಗಳಲ್ಲಿದೆಹಲಿಯ ಶಾಹೀನ್‌ಬಾಗ್‌ನಲ್ಲಿ ಪ್ರತಿಭಟನೆ ಆರಂಭವಾಗಿತ್ತು. ಇದು ಅಲ್ಲಿನ ವಾತಾವರಣವನ್ನು ಹಾಳು ಮಾಡಿದ್ದು ದೆಹಲಿಯಲ್ಲಿ ಗಲಭೆಗೆ ಪ್ರಚೋದನೆ ನೀಡಿತು ಎಂದು ಬಿಜೆಪಿ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT