ಯುಟ್ಯೂಬ್‌ ನೋಡಿ ಸ್ವತಃ ಹೆರಿಗೆ ಮಾಡಿಕೊಳ್ಳಲು ಯತ್ನಿಸಿದ್ದ ಮಹಿಳೆ, ಶಿಶು ಸಾವು

ಶನಿವಾರ, ಮಾರ್ಚ್ 23, 2019
34 °C

ಯುಟ್ಯೂಬ್‌ ನೋಡಿ ಸ್ವತಃ ಹೆರಿಗೆ ಮಾಡಿಕೊಳ್ಳಲು ಯತ್ನಿಸಿದ್ದ ಮಹಿಳೆ, ಶಿಶು ಸಾವು

Published:
Updated:

ಗೋರಖ್‌ಪುರ: ಸಾಮಾಜಿಕ ಜಾಲತಾಣ ಯುಟ್ಯೂಬ್‌ ನೋಡಿಕೊಂಡು ಸ್ವತಹ ಹೆರಿಗೆ ಮಾಡಿಕೊಳ್ಳಲು ಯತ್ನಿಸಿದ್ದ ಮಹಿಳೆ ಮತ್ತು ಆಕೆಯ ನವಜಾತ ಶಿಶು ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಇಲ್ಲಿನ ಬಿಲ್ಲಂದಪುರ ಪ್ರದೇಶದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ 26 ವರ್ಷದ ಅವಿವಾಹಿತ ಮಹಿಳೆ ಮತ್ತು ಆಕೆಯ ನವಜಾತ ಶಿಶು ಸಾವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಘಟನೆಯ ಹಿನ್ನೆಲೆ: ಮೃತ ಮಹಿಳೆಯ ಸ್ಮಾರ್ಟ್‌ ಫೋನ್‌ ಪರೀಕ್ಷಿಸಿದಾಗ ಅವರು ಯುಟ್ಯೂಬ್‌ನಲ್ಲಿ ’ಸ್ವತಹ ಹೆರಿಗೆ ಮಾಡಿಕೊಳ್ಳುವುದು ಹೇಗೆ’ ಎಂಬ ವಿಡಿಯೊವನ್ನು ನೋಡಿರುವುದು ಗೊತ್ತಾಗಿದೆ. ಪಕ್ಕದಲ್ಲಿ ಹರಿತವಾದ ಚಾಕು, ದಾರ, ಕಿರು ಕತ್ತರಿ ದೊರೆತಿದ್ದು, ಸಾಕಷ್ಟು ರಕ್ತ ಸ್ರಾವವಾಗಿರುವುದರಿಂದ ಮಹಿಳೆ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಠಾಣೆಯ ಪೊಲೀಸ್‌ ಅಧಿಕಾರಿ ರವಿ ರೈ ತಿಳಿಸಿದ್ದಾರೆ. 

ಯುಟ್ಯೂಬ್‌ ನೋಡಿಕೊಂಡು ಹೆರಿಗೆ ಮಾಡಿಕೊಳ್ಳಲು ಪ್ರಯತ್ನಿಸಿದ್ದೇ ಮಹಿಳೆಯ ಸಾವಿಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಶವ ಪರೀಕ್ಷೆ ನಡೆಸಿ ಮೃತ ದೇಹಗಳನ್ನು ಅವರು ಕುಟುಂಬದವರಿಗೆ ನೀಡಲಾಗಿದೆ.

4 ದಿನಗಳ ಹಿಂದಷ್ಟೆ ಬಂದಿದ್ದ ಮಹಿಳೆ

ಕಳೆದ ನಾಲ್ಕು ದಿನಗಳ ಹಿಂದಷ್ಟೆ ಆ ಮಹಿಳೆ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಅವರ ಆಧಾರ್ ಕಾರ್ಡ್‌ ಪರೀಕ್ಷಿಸಿ ಮನೆ ನೀಡಿದ್ದೆ ಎಂದು ಮನೆ ಮಾಲೀಕ ರವಿ ಉಪಾಧ್ಯಾಯ ಹೇಳಿದ್ದಾರೆ. ಎರಡು ಮೂರು ದಿನಗಳಲ್ಲಿ ನಮ್ಮ ತಾಯಿ ಬರಲಿದ್ದು ನಂತರ ಆಸ್ಪತ್ರೆಗೆ ದಾಖಲಾಗುವುದಾಗಿ ಅವರು ಹೇಳಿದ್ದರು ಎಂದು ರವಿ ಉಪಾಧ್ಯಾಯ ಪೊಲೀಸರಿಗೆ ನೀಡಿದ್ದ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಭಾನುವಾರ ತಡ ರಾತ್ರಿ ಹೆರಿಗೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಸಾಕಷ್ಟು ರಕ್ತ ಸ್ರಾವವಾಗಿದ್ದು ರಕ್ತ ಬಾಗಿಲಿಂದ ಹೊರಗಡೆ ಬಂದಿತ್ತು. ಇದನ್ನು ನೋಡಿದ ಕೂಡಲೇ ನಾನು ಪೊಲೀಸರಿಗೆ ಮಾಹಿತಿ ನೀಡಿದೆ. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲನ್ನು ಮುರಿದು ಒಳಗೆ ಹೋಗಿ ನೋಡಿದಾಗ ನವಜಾತ ಗಂಡು ಶಿಶು ಮತ್ತು ಮಹಿಳೆ ಮೃತಪಟ್ಟಿದ್ದರು ಎಂದು ರವಿ ಉಪಾಧ್ಯಾಯ ಹೇಳಿದ್ದಾರೆ.

ಮೃತ ಮಹಿಳೆ ಅವಿವಾಹಿತೆಯಾಗಿದ್ದರು ಎಂದು ಆಕೆಯ ಸಂಬಂಧಿಕರು ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ ಘಟನೆ ಸಂಬಂಧ ಮೃತ ಮಹಿಳೆಯ ಕುಟುಂಬದವರು ದೂರು ನೀಡಲು ನಿರಾಕರಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 3

  Amused
 • 3

  Sad
 • 1

  Frustrated
 • 3

  Angry

Comments:

0 comments

Write the first review for this !