ಮಂಗಳವಾರ, ಫೆಬ್ರವರಿ 18, 2020
27 °C

ಪ್ರೇಮಿಗಳ ದಿನದಂದು ಪ್ರೇಮ ವಿವಾಹದ ವಿರುದ್ಧ ವಿದ್ಯಾರ್ಥಿಗಳ ಪ್ರತಿಜ್ಞೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮರಾವತಿ: ವ್ಯಾಲೆಂಟೈನ್ ಡೇ (ಪ್ರೇಮಿಗಳ ದಿನ)ದಂದು ಇಲ್ಲಿನ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಪ್ರೇಮ ವಿವಾಹ ಅಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.

ಚಂದೂರು ರೈಲ್ವೆ ಸ್ಟೇಷನ್‌ ಬಳಿ ಇವರು ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ನಾವು ಯಾರನ್ನು ಪ್ರೀತಿಸುವುದಿಲ್ಲ ಅಥವಾ ಯಾರೊಂದಿಗೂ ಪ್ರೇಮ ವಿವಾಹವಾಗುವುದಿಲ್ಲ ಎಂದು ಮರಾಠಿಯಲ್ಲಿ ಪ್ರಮಾಣ ಮಾಡಿದ್ದಾರೆ.

ಹೆತ್ತವರ ಮೇಲೆ ನನಗೆ ವಿಶ್ವಾಸವಿದೆ. ನಾನು ಯಾರನ್ನೂ ಪ್ರೀತಿಸುವುದಿಲ್ಲ ಮತ್ತು ಪ್ರೇಮ ವಿವಾಹವಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುವುದಾಗಿ ವಿದ್ಯಾರ್ಥಿಗಳು ಹೇಳಿದ್ದಾರೆ. 

ನಾವು ಯಾರನ್ನಾದರೂ ಪ್ರೀತಿಸುತ್ತೇವೊ ಅವರು ಒಳ್ಳೆಯವರಾಗಿರಬೇಕು ಮತ್ತ ಸ್ವಾವಲಂಬಿಗಳಾಗಿರಬೇಕು, ಪ್ರೀತಿ ಪ್ರೇಮಗಳ ವಿಚಾರಗಳಲ್ಲಿ ಕುಟುಂಬಸ್ತರು ಮತ್ತು ಹಿರಿಯರ ಸಲಹೆ ಪಡೆಯುವುದು ಉತ್ತಮ ಎಂದು ರಿತಿಕಾ ಹೇಳಿದ್ದಾರೆ 

 

ಈ ಕುರಿತು ಮಾತನಾಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಯಶೋಮಿತಾ ಠಾಕೂರ್‌ ವರ್ದ್ರಾ ಆ್ಯಸಿಡ್‌ ದಾಳಿಯ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ನಡೆಸಿರಬಹುದು ಎಂದು ಹೇಳಿದ್ದಾರೆ. 

ವರ್ದ್ರಾ ಜಿಲ್ಲೆಯಲ್ಲಿ ಶಿಕ್ಷಕನೊಬ್ಬ ತನ್ನ ಪ್ರೇಯಸಿಗೆ ಆ್ಯಸಿಡ್‌ ಎರಚಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಂತ್ರಸ್ತೆಯು ಫೆಬ್ರುವರಿ 3ಕ್ಕೆ ಮೃತಪಟ್ಟಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು