ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಂಡಾಟಿಕೆ ವಿರುದ್ಧ ದೂರು ನೀಡಲು ಆ್ಯಪ್ ಅಭಿವೃದ್ಧಿಪಡಿಸಿದ 9ರ ಬಾಲೆ

Last Updated 10 ಫೆಬ್ರುವರಿ 2020, 4:54 IST
ಅಕ್ಷರ ಗಾತ್ರ

ಶಿಲ್ಲಾಂಗ್: ನಾಲ್ಕನೇ ತರಗತಿ ಓದುತ್ತಿರುವ 9 ವರ್ಷದ ಬಾಲಕಿ ಮೀದೈಬಹುನ್ ಮಾಜಾವ್, ಪುಂಡಾಟಿಕೆ ಕುರಿತು ದೂರು ನೀಡಲು ಬಳಸಬಹುದಾದ ಆ್ಯಪ್‌ ಅಭಿವೃದ್ಧಿಪಡಿಸಿದ್ದಾಳೆ.

‘ಅಂಗನವಾಡಿ ಸಮಯದಿಂದಲೂ ಪುಂಡರು ನನ್ನನ್ನು ಬೆದರಿಸುತ್ತಿದ್ದರು. ಇದನ್ನು ತೀವ್ರವಾಗಿ ದ್ವೇಷಿಸುತ್ತಿದ್ದ ನಾನು, ಸ್ವತಃ ಪರಿಹಾರ ಕಂಡುಕೊಳ್ಳಲು ಮುಂದಾದೆ. ಬೇರೆ ಯಾವ ಮಕ್ಕಳೂ ನನಗಾದ ಅನುಭವಕ್ಕೆ ಗುರಿಯಾಗಬಾರದು’ ಎಂದು ಮಾಜಾವ್ ತಾನು ಆ್ಯಪ್ ಅಭಿವೃದ್ಧಿಪಡಿಸಿದ ಉದ್ದೇಶ ಹಂಚಿಕೊಂಡಿದ್ದಾಳೆ.

ತಮ್ಮ ಗುರುತು ಬಹಿರಂಗಪಡಿಸಲು ಬಯಸದ ಸಂತ್ರಸ್ತರು ತಮಗಾದ ಬೆದರಿಕೆಯ ಅನುಭವಗಳನ್ನು ಈ ಆ್ಯಪ್ ಮೂಲಕ ಶಿಕ್ಷಕರು, ಪೋಷಕರು ಹಾಗೂ ಸ್ನೇಹಿತರ ಜತೆ ಹಂಚಿಕೊಳ್ಳಬಹುದು.

‘ಬೆದರಿಸಿದ ವ್ಯಕ್ತಿಗಳ ಹೆಸರು ಸೇರಿದಂತೆ ಘಟನೆಯ ವಿವರಗಳನ್ನು ಬಳಕೆದಾರರು ಸಂಬಂಧಪಟ್ಟ ವ್ಯಕ್ತಿಗಳಿಗೆ ರವಾನಿಸಬಹುದು. ಘಟನೆ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಇದರಿಂದ ನೆರವಾಗುತ್ತದೆ’ ಎಂದು ಮಾಜಾವ್ ವಿವರಿಸಿದ್ದಾಳೆ. ದೇಶದ ಶಾಲೆಗಳಲ್ಲಿ ಶೇ 42ರಷ್ಟು ಮಕ್ಕಳು ಬೆದರಿಕೆಗೆ ಒಳಗಾಗುತ್ತಾರೆ ಎಂದು ದಿ ಟೀಚರ್ ಅಸೋಸಿಯೇಷನ್ 2017ರಲ್ಲಿ ವಿಪ್ರೊ ಅಪ್ಲೈಯಿಂಗ್ ಥಾಟ್ ಇನ್ ಸ್ಕೂಲ್ಸ್ (ಡಬ್ಲ್ಯುಎಟಿಐಎಸ್) ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಈ ಆ್ಯಪ್ಶೀಘ್ರ ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಲಭ್ಯವಾಗಲಿದೆ.

ಶಿಕ್ಷಣ ಸಚಿವರಿಂದ ಪ್ರಶಂಸೆ: ಮಾಜಾವ್ ಆ್ಯಪ್‌ ಅಭಿವೃದ್ಧಿಪಡಿಸಿರುವುದನ್ನು ಶಿಕ್ಷಣ ಸಚಿವ ಲಕ್ಮೆನ್‌ ರಂಬುಯಿ ಪ್ರಶಂಸಿಸಿದ್ದು, ‘ಬಾಲಕಿ ಜವಾಬ್ದಾರಿಯುತ ಪ್ರಜೆಯಾಗಲಿದ್ದಾಳೆ. ಸಾಮಾಜಿಕ ಪಿಡುಗುಗಳ ವಿರುದ್ಧ ಆಕೆಯ ಹೋರಾಟಕ್ಕೆ ಶುಭ ಕೋರುತ್ತೇನೆ. ಆಕೆಗೆ ಮಾರ್ಗದರ್ಶನ ನೀಡುತ್ತಿರುವುದಕ್ಕೆ ಪೋಷಕರನ್ನೂ ಅಭಿನಂದಿಸುತ್ತೇನೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT