ಮಂಗಳವಾರ, ಮಾರ್ಚ್ 31, 2020
19 °C

‘ಏನ್‌ ಸಮಾಚಾರ’ ಎಂದ ಟ್ವಿಟರ್‌ ಇಂಡಿಯಾ: ಸಂತಸಗೊಂಡ ಕನ್ನಡಿಗರಿಂದ ಬಗೆಬಗೆ ಉತ್ತರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಟ್ವಿಟರ್‌ ಇಂಡಿಯಾದ ಅಧಿಕೃತ ಟ್ವಿಟರ್‌ ಖಾತೆಯಿಂದ ಮಂಗಳವಾರ ಕನ್ನಡದಲ್ಲಿ ‘ಏನ್‌ ಸಮಾಚಾರ’ ಎಂದು ಟ್ವೀಟ್‌ ಮಾಡಲಾಗಿದೆ.  ಇದಕ್ಕೆ ಸಂಭ್ರಮಗೊಂಡ ಕನ್ನಡಿಗರು ಟ್ವಿಟರ್‌ ಇಂಡಿಯಾಕ್ಕೆ ಬಗೆ ಬಗೆಯ ಉತ್ತರಗಳನ್ನು ನೀಡಿದ್ದಾರೆ. 

ಮಂಗಳವಾರ ಮಧ್ಯಾಹ್ನ 1.11 ನಿಮಿಷಯದಲ್ಲಿ ‘ಏನ್‌ ಸಮಾಚಾರ’ ಎಂದು ಟ್ವೀಟ್‌ ಮಾಡಲಾಗಿದೆ. ಈ ಟ್ವೀಟ್‌ ವೈರಲ್‌ ಆಗುತ್ತಿದ್ದು, ಮಂಗಳವಾರ ಸಂಜೆ 7ರ ಹೊತ್ತಿಗೆ 740ಕ್ಕೂ ಹೆಚ್ಚು ಬಾರಿ ರೀಟ್ವೀಟ್‌ ಆಗಿದೆ. ಅಲ್ಲದೆ, ಮೂರೂವರೆ ಸಾವಿರಕ್ಕೂ ಅಧಿಕ ಮಂದಿ ಮೆಚ್ಚಿದ್ದಾರೆ. 

ಬಗೆ ಬಗೆಯ ಉತ್ತರ 

ಏನ್‌ ಸಮಾಚಾರ ಎಂದು ಪ್ರಶ್ನೆ ಹಾಕಿದ ಟ್ವಿಟರ್‌ ಇಂಡಿಯಾಕ್ಕೆ ಟ್ವೀಟರ್‌ ಬಳಕೆದಾರರು ವಿಧ ವಿಧದ ಉತ್ತರಗಳನ್ನೇ ನೀಡಿದ್ದಾರೆ.  ‘ಊಟಾ ಆಯ್ತ’, ‘ಕನ್ನಡದಲ್ಲಿ ಟ್ವೀಟ್‌ ಮಾಡಿದ ನಿಮಗೆ ಶ್ಯಾವಿಗೆ ಪಾಯಸ ಕುಡಿಸುತ್ತೇವೆ’, ‘ವಿದ್ಯಾರ್ಥಿ ಭವನದ ದೋಸೆ ಕೊಡಿಸುತ್ತೇವೆ’ ಎಂದೆಲ್ಲ ಉತ್ತರಿಸಿದ್ದಾರೆ. 

‘ಕನ್ನಡದವರಿಗೆಲ್ಲೋ ಕೆಲಸ ಕೊಟ್ಟಂತಿದೆ,’ ಎಂದೂ ಒಬ್ಬ ಟ್ವೀಟಿಗರು ಹೇಳಿದ್ದಾರೆ. ‘ಕನ್ನಡದಲ್ಲೂ ಸೇವೆ ಕೊಡಿ’ ಎಂದು ಕೆಲವರು ಕೇಳಿಕೊಂಡಿದ್ದಾರೆ.

ಕೆಲವರು ಟ್ವಿಟರ್‌ನಲ್ಲಿ ಎಡಿಟ್‌ಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಆದರೆ, ಟ್ವಿಟರ್‌ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ.  

ಲಘು ಬಗೆಯಲ್ಲಿ ಟ್ವಿಟರ್‌ ಕೇಳಿದ ಪ್ರಶ್ನೆಗೆ ಉತ್ತರವಾಗಿ ರಾಜಕೀಯದ ವಿಷಯಗಳೂ ತೂರಿ ಬಂದಿವೆ. ಟ್ವಿಟರ್  ಬಳಕೆದಾರರು ತಾವು ಬೆಂಬಲಿಸುವ ಪಕ್ಷಗಳ ಪರವಾಗಿ ಕೆಲ ಮಾತುಗಳನ್ನೂ ಹಂಚಿಕೊಂಡಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು