ಶನಿವಾರ, ಫೆಬ್ರವರಿ 22, 2020
19 °C

ಪಂಜಾಬ್‌‌ನಲ್ಲಿ ಸ್ಫೋಟ, ಇಬ್ಬರ ಸಾವು, ಹಲವರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂಡೀಘಡ: ಸಿಖ್ಖರ ಧಾರ್ಮಿಕ ಮೆರವಣಿಗೆ ಸಂದರ್ಭ ಟ್ರಾಕ್ಟರ್‌‌‍ನಲ್ಲಿ ಇರಿಸಿದ್ದ ರಾಸಾಯನಿಕ ಸ್ಫೋಟಗೊಂಡ ಪರಿಣಾಮ ಇಬ್ಬರು ಮೃತಪಟ್ಟು ಹಲವು ಮಂದಿ ಗಾಯಗೊಂಡಿರುವ ಘಟನೆ ಪಂಚಾಬಿನ ತರ್ನ್ ತರನ್ ಜಿಲ್ಲೆಯ ದಲೇಕೆ ಗ್ರಾಮದಲ್ಲಿ ಶನಿವಾರ ನಡೆದಿದೆ.

ಯುವಕರು ಪಹುವಿಂಡ್ ಗ್ರಾಮದಿಂದ ಚಬ್ಬಾ ಗ್ರಾಮದ ಗುರುದ್ವಾರ ತಹ್ಲಾ ಸಾಹಿಬ್ ಬಳಿಗೆ ಸಿಖ್ ಸಂಪ್ರದಾಯದಂತೆ ಹಾಡು ಹೇಳಿಕೊಂಡು ಮೆರವಣಿಗೆಯಲ್ಲಿ ತೆರಳುತ್ತಿದ್ದರು. ಈ ಸಮಯದಲ್ಲಿ ಸಂಜೆ ವೇಳೆಗೆ ಇದ್ದಕ್ಕಿದ್ದಂತೆ ಟ್ರಾಕ್ಟರ್‌‌ನ ಹಿಂಬದಿಯಿಂದ ಭಾರಿ ಸ್ಫೋಟದ ಶಬ್ದ ಕೇಳಿಬಂತು. ಕೂಡಲೆ ಸಂಭ್ರಮದಿಂದ ತೆರಳುತ್ತಿದ್ದ ಮೆರವಣಿಗೆಯಲ್ಲಿ ಸ್ಫೋಟಕ್ಕೆ ಸಿಲುಕಿದ ಯುವಕರು ಸುಟ್ಟಗಾಯಗಳಿಂದ ಒದ್ದಾಡ ತೊಡಗಿದರು. ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟರೆ, ಹಲವರು ಸುಟ್ಟಗಾಯಗೊಂಡರು. 

ಮೃತಪಟ್ಟವರನ್ನು ಗುರುಪ್ರೀತ್ ಸಿಂಗ್ ಮತ್ತು ಮನಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಅನಮೋಲ್ ಪ್ರೀತ್ ಸಿಂಗ್, ಸರ್ಗುಣ್ ಸಿಂಗ್, ಅಜಯ್‌ಪಾಲ್ ಸಿಂಗ್, ನರೇನ್‌ದೀಪ್ ಸಿಂಗ್, ಹರ್ನೂರ್ ಸಿಂಗ್, ದವೀಂದರ್ಬೀರ್ ಸಿಂಗ್, ಸರಬಜೋತ್ ಸಿಂಗ್, ಕಿರತ್ ಸಿಂಗ್ ಹಾಗೂ ಗುರ್ ಸಿಮ್ರನ್ ಸಿಂಗ್ ಎಂದು ಗುರುತಿಸಲಾಗಿದೆ.

ವಿಷಯ ತಿಳಿದ ಕೂಡಲೆ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಅಮೃತಸರದ ಗುರುನಾನಕ್ ದೇವ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಸ್ಪಿ ಜಗಜೀತ್ ಸಿಂಗ್ ವಾಲಿಯಾ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು