ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಾರ್ಥ ಅವರ ಕೊನೇ ಪತ್ರ 'ನಿಜ', ಕಿರುಕುಳ ಆರೋಪ ಅಲ್ಲಗೆಳೆದ ಐಟಿ ಇಲಾಖೆ

Last Updated 30 ಜುಲೈ 2019, 14:04 IST
ಅಕ್ಷರ ಗಾತ್ರ

ಬೆಂಗಳೂರು:ನಿಗೂಢವಾಗಿ ಕಾಣೆಯಾಗಿರುವ ಕಾಫಿ ಡೇ ಮಾಲಿಕ ಸಿದ್ದಾರ್ಥ ಅವರು ಕಳೆದ ಶನಿವಾರ ಕಾಫಿ ಡೇ ಆಡಳಿತ ಮಂಡಳಿಗೆ ಬರೆದಿದ್ದಾರೆ ಎನ್ನಲಾದ ಪತ್ರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ಪತ್ರದ ವಿಶ್ವಾಸರ್ಹತೆಯನ್ನು ಪರೀಕ್ಷಿಸಿದ ದಿ ಕಾಫಿ ಡೇ ಎಂಟರ್‌ಪ್ರೈಸೆಸ್ ಇದು ನಿಜವಾದ ಪತ್ರ ಎಂದು ಹೇಳಿದೆ.

ವಿ.ಜಿ.ಸಿದ್ಧಾರ್ಥ ಅವರು ಜುಲೈ 27, 2109ರಂದು ಸಹಿ ಹಾಕಿದ ಪತ್ರ ಇದಾಗಿದ್ದು. ಆ ಪತ್ರದ ಪ್ರತಿಯನ್ನು ಕಾಫಿ ಡೇ ಶೇರ್ ಮಾಡಿದೆ.

ಈ ಪತ್ರದಲ್ಲಿ ಸಿದ್ದಾರ್ಥ ನೋವು ತೋಡಿಕೊಂಡಿದ್ದಾರೆ. ಹೋರಾಟ ನಡೆಸಿಯೂ ತಾವು ಉದ್ಯಮದಲ್ಲಿ ವಿಫಲವಾಗಿರುವುದಾಗಿಯೂ, ತಮ್ಮ ನಡೆಯನ್ನು ಕ್ಷಮಿಸುವಂತೆಯೂ ಅವರು ಆಡಳಿತ ಮಂಡಳಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕಿರುಕುಳ ನೀಡಿಲ್ಲ


ಸಿದ್ದಾರ್ಥ ಅವರಿಗೆ ನಮ್ಮಿಂದ ಯಾವುದೇ ಕಿರುಕುಳ ಇರಲಿಲ್ಲ. ಈ ಪತ್ರದ ವಿಶ್ವಾಸರ್ಹತೆ ಬಗ್ಗೆ ನಮಗೆ ಗೊತ್ತಿಲ್ಲ. ಅವರ ವಾರ್ಷಿಕ ವರದಿಯಲ್ಲಿರುವ ಸಹಿ ಮತ್ತು ಪತ್ರದಲ್ಲಿರುವ ಸಹಿ ತಾಳೆಯಾಗುತ್ತಿಲ್ಲ ಎಂದು ಐಟಿ ಇಲಾಖೆ ಪ್ರತಿಕ್ರಿಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT