ಬುಧವಾರ, ಜನವರಿ 22, 2020
18 °C
ಮೈಸೂರಿನ ರಾಜಕಾರಣವೇ ಬೇರೆ; ರಾಜ್ಯ ರಾಜಕಾರಣವೇ ಬೇರೆ: ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ವ್ಯಾಖ್ಯಾನ

ವಿಶ್ವನಾಥ್‌ ಸೋಲಿಗೆ ಯೋಗೇಶ್ವರ್‌ ಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಹುಣಸೂರು ಕ್ಷೇತ್ರದಲ್ಲಿ ಎಚ್‌.ವಿಶ್ವನಾಥ್‌ ಸೋಲಿಗೆ, ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್‌ ಕಾರಣ’ ಎಂದು ಜೆಡಿಎಸ್‌ ಶಾಸಕಜಿ.ಟಿ.ದೇವೇಗೌಡ ಬುಧವಾರ ಇಲ್ಲಿ ಹೇಳಿದರು.

ಪ್ರಚಾರದ ಸಂದರ್ಭದಲ್ಲಿ, ‘ಜಿ.ಟಿ.ದೇವೇಗೌಡ ಯಾರು? ಎಚ್.ಡಿ. ದೇವೇಗೌಡ ಯಾರು?’ ಎಂದು ಯೋಗೇಶ್ವರ್‌ ಅವರು ಒಕ್ಕಲಿಗ ಮುಖಂಡರನ್ನು ಅವಹೇಳನ ಮಾಡಿದ್ದು ಜನರನ್ನು ಕೆರಳಿಸಿತು. ಇದು ವಿಶ್ವನಾಥ್ ಸೋಲಿಗೆ ಕಾರಣವಾಯಿತು ಎಂದು ವಿಶ್ಲೇಷಿಸಿದರು.

‘ಕ್ಷೇತ್ರವೇ ಗೊತ್ತಿಲ್ಲದ ವಿಶ್ವನಾಥ್ ಅವರನ್ನು ಮೊದಲು ನಾವೆಲ್ಲ ಸೇರಿ ಗೆಲ್ಲಿಸಿದೆವು. ನಂತರ, ಅವರು ಕ್ಷೇತ್ರದತ್ತ ಮುಖ ಮಾಡಲಿಲ್ಲ. ಬಿಜೆಪಿ ಸೇರುವಾಗಲೂ ಚರ್ಚೆ ನಡೆಸಿರಲಿಲ್ಲ. ಸಂಬಂಧವೇ ಇಲ್ಲದ ಕ್ಷೇತ್ರಕ್ಕೆ ಬಂದು ಕುಕ್ಕರ್, ಸೀರೆ ಹಂಚಿ, ಒಕ್ಕಲಿಗರ ಸಂಘಕ್ಕೆ ₹5 ಕೋಟಿ ಆಮಿಷ ತೋರಿಸಿ ಗೆದ್ದುಬಿಡಬಹುದು ಎಂದು ಯೋಚಿಸುವುದು ಭ್ರಮೆ. ಮೈಸೂರಿನ ರಾಜಕಾರಣವೇ ಬೇರೆ; ರಾಜ್ಯ ರಾಜಕಾರಣವೇ ಬೇರೆ’ ಎಂದರು.

ತಮ್ಮ ವಿರುದ್ಧ ಮಾಡಲಾದ ‘ಪಕ್ಷದ್ರೋಹಿ’ ಎಂಬ ಆರೋಪಕ್ಕೆ ಪ್ರತಿಕ್ರಿ ಯಿಸಿದ ಅವರು, ‘ಹುಣಸೂರು ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲುತ್ತದೆ. ನಾನು ತಟಸ್ಥನಾಗಿರುತ್ತೇನೆ ಎಂದು ಎಚ್‌.ಡಿ.ದೇವೇಗೌಡರಿಗೆ ಮತ್ತು ಎಚ್‌.ಡಿ.ಕುಮಾರಸ್ವಾಮಿಗೆ ಮೊದಲೇ ಹೇಳಿದ್ದೆ. ಹೀಗೆ ನೇರವಾಗಿಯೇ ಹೇಳಿರುವಾಗ ಪಕ್ಷಕ್ಕೆ ದ್ರೋಹ ಮಾಡಿರುವುದಾಗಿ ಆರೋಪಿಸುವುದು ಸರಿಯಲ್ಲ’ ಎಂದರು.

***

ಎಲ್ಲ ಪಕ್ಷದ ಶಾಸಕರೂ ಮೂರೂವರೆ ವರ್ಷ ಬಿ.ಎಸ್.ಯಡಿಯೂರಪ್ಪ ನಾಯಕತ್ವದಲ್ಲಿ ಸಾಗೋಣ. ರಾಜ್ಯದಲ್ಲಿ ಅಭಿವೃದ್ಧಿ ಪರ್ವಕ್ಕೆ ನಾಂದಿ ಹಾಡೋಣ

– ಜಿ.ಟಿ.ದೇವೇಗೌಡ, ಜೆಡಿಎಸ್‌ ಶಾಸಕ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು