ಶುಕ್ರವಾರ, ಜನವರಿ 24, 2020
21 °C
ಇವಿಎಂ ದೋಷದಿಂದ ಅನರ್ಹರು ಆಯ್ಕೆ ಎಂಬ ಕಾಂಗ್ರೆಸ್‌ ನಾಯಕ ಬಯ್ಯಾಪುರ ಹೇಳಿಕೆ ರವಿ ಕಿಡಿ

ಕಾಂಗ್ರೆಸ್‌ನವರು ತಾಯಿ, ಹೆಂಡತಿಯನ್ನು ಅನುಮಾನಿಸದಿರಲಿ: ಸಿ.ಟಿ.ರವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಕಾಂಗ್ರೆಸ್‌ನವರಿಗೆ ಅನುಮಾನಿಸುವ ಕಾಯಿಲೆ ಇದೆ. ಹೆಂಡತಿ ಮತ್ತು ತಾಯಿಯನ್ನು ಅವಮಾನಿಸದಿರಲಿ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದು ವಿವಾದಕ್ಕೆ ಕಾರಣವಾಗಿದೆ.

ಕುಷ್ಟಗಿಯಲ್ಲಿ ನಡೆದ ಕಾರ್ಮಿಕರ ಮುಷ್ಕರ ಮತ್ತು ಸಿಎಎ ಕಾಯ್ದೆ ವಿರೋಧಿಸಿ ಬಯ್ಯಾಪುರ ಮಾತನಾಡುವಾಗ, ಎವಿಎಂ ದೋಷದಿಂದಲೇ ಅನರ್ಹ ಶಾಸಕರು ಗೆಲ್ಲುವಂತೆ ಆಯಿತು ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ರವಿ ತೀಕ್ಷಣ ಪ್ರತಿಕ್ರಿಯೆ ನೀಡಿದ್ದು, ವಿವಾದ ಹೊತ್ತಿಕೊಳ್ಳುವ ಸಾಧ್ಯತೆಗಳಿವೆ. 

ಅಮರೇಗೌಡ ಗೆದ್ದಿದ್ದು ಕೂಡ ಇವಿಎಂನಿಂದಲೇ, ಕಾಂಗ್ರೆಸ್‌ಗೆ ಅಧಿಕಾರ ಇಲ್ಲದೆ ಇರುವುವಾಗ ಕಾಯಿಲೆ ತೀವ್ರವಾಗಿ ಉಲ್ಭಣವಾಗುತ್ತದೆ. ಸೈನಿಕರು ಸರ್ಜಿಕಲ್ ಸ್ಟ್ರೈಕ್ ಮಾಡಿದರೂ ಅನುಮಾನ, ಚುನಾವಣೆ ಸೋತರೆ ಇವಿಎಂ ಮೇಲೆ ಅನುಮಾನ. ಈ ಕೆಟ್ಟ ಕಾಯಿಲೆ ಕಾಂಗ್ರೆಸ್‌ನಿಂದ ದೂರವಾಗಲಿ ಎಂದು ಟಾಂಗ್ ಟೀಕಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು