ಗುರುವಾರ , ಜೂಲೈ 9, 2020
29 °C

ಬಿಎಂಟಿಸಿ ಬಸ್‌ನಲ್ಲಿ ನಾಳೆಯಿಂದ ಟಿಕೆಟ್ ಪಡೆದು ಪ್ರಯಾಣಿಸಲು ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಬಸ್‌ನಲ್ಲಿ ಪ್ರಯಾಣಿಕರಿಗೆ ಈ ಹಿಂದಿನಂತೆ ಮಂಗಳವಾರದಿಂದ ಟಿಕೆಟ್ ವಿತರಿಸಲು ಬಿಎಂಟಿಸಿ ನಿರ್ಧರಿಸಿದೆ. ಅಲ್ಲದೇ, ಚಿಲ್ಲರೆ ಸಮಸ್ಯೆ ಉಂಟಾಗಬಾರದು ಎಂಬ ಕಾರಣಕ್ಕೆ ಫ್ಲಾಟ್‌ ದರ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಲಾಕ್‌ಡೌನ್ ಸಡಿಲದ ನಂತರ ಬಸ್ ಸಂಚಾರ ಆರಂಭಿಸಿದ್ದ ಬಿಎಂಟಿಸಿ, ಪ್ರಯಾಣಿಕರಿಂದ ₹70 ಪಡೆದು ದಿನದ ಪಾಸ್ ವಿತರಿಸುತ್ತಿತ್ತು. ₹10 ದರ ಇರುವ ದೂರಕ್ಕೂ ಪ್ರಯಾಣಿಕರು ₹70 ಪಾವತಿಸಬೇಕಾಗಿತ್ತು.

ಮಂಗಳವಾರದಿಂದ ಟಿಕೆಟ್ ವಿತರಿಸಲು ತೀರ್ಮಾನಿಸಿದೆ. ಫ್ಲಾಟ್ ದರ ವ್ಯವಸ್ಥೆ ತರಲು ಸರ್ಕಾರದಿಂದ ಒಪ್ಪಿಗೆ ಪಡೆದುಕೊಂಡಿದೆ. ಫ್ಲಾಟ್ ದರ ಎಂದರೆ ಪ್ರಯಾಣ ದರ ₹11 ಅಥವಾ ₹9 ಇದ್ದರೆ ಅದನ್ನು ₹10ಕ್ಕೆ ನಿಗದಿ ಮಾಡಲಾಗಿದೆ. ಚಿಲ್ಲರೆ ಸಮಸ್ಯೆ ಉಂಟಾಗಬಾರದು ಎಂಬ ಕಾರಣಕ್ಕೆ ಈ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು