ಸಿದ್ಧಗಂಗಾ ಶ್ರೀ ಎಲ್ಲ ಸಮುದಾಯಗಳ ಗುರು: ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ

7

ಸಿದ್ಧಗಂಗಾ ಶ್ರೀ ಎಲ್ಲ ಸಮುದಾಯಗಳ ಗುರು: ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ

Published:
Updated:

ದಾವಣಗೆರೆ: ‘ಸಿದ್ಧಗಂಗಾ ಪೂಜ್ಯರು ಮತ್ತು ನಮ್ಮದು ಗುರು ಶಿಷ್ಯರ ಸಂಬಂಧವಾಗಿತ್ತು. 40 ವರ್ಷಗಳಿಂದ ಅವರ ಜತೆಗೆ ನಿಕಟ ಸಂಬಂಧ ಇತ್ತು. ಆ ಮಾರ್ಗವಾಗಿ ಹೋಗುವಾಗಲೆಲ್ಲ ಅವರನ್ನು ಭೇಟಿ ಮಾಡಿ ಆಶೀರ್ವಚನ ಪಡೆದು ಸಾಗುತ್ತಿದ್ದೆವು’ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಅವರು ಸಿದ್ಧಗಂಗಶ್ರೀಗಳ ಜತೆಗಿನ ಒಡನಾಟವನ್ನು


ನಿಜಗುಣ ಪ್ರಭು ತೋಂಟದಾರ್ಯ ಶ್ರೀ

ನೆನಪಿಸಿಕೊಂಡರು.

‘ಅವರ ನಡೆನುಡಿ, ಬದುಕು ನಮಗೆ ಮಾತ್ರವಲ್ಲ. ಎಲ್ಲ ಸಮುದಾಯಗಳಿಗೆ ಆದರ್ಶವಾಗಿತ್ತು. ಅವರು ಎಲ್ಲ ಧರ್ಮಗಳ ಅಧಿಕೃತ ಧರ್ಮಗುರುಗಳಾಗಿದ್ದರು. ಬಸವಣ್ಣಾದಿ ಶರಣರ ಕಾಯಕ ಮತ್ತು ದಾಸೋಹ ಸಿದ್ಧಾಂತದಡಿ ಕೆಲಸಗಳನ್ನು ಮಾಡುತ್ತಿದ್ದರು. ಜೀವದಯಾಪರವಾಗಿದ್ದರು. ಮಕ್ಕಳ ಮೇಲೆ ಅಗಾಧ ಪರಿಣಾಮ ಬೀರಿದವರು. ಅವರ ಬದುಕಿನ ಹಾದಿ ಎಲ್ಲರ ಬದುಕಿನ ದಾರಿಯಾಗಲಿ’ ಎಂದು ತಿಳಿಸಿದರು.

ಇದನ್ನೂ ಓದಿ: ಇಷ್ಟಲಿಂಗ ಪ್ರಿಯ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ​

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !