ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಭವಿಷ್ಯವೇಕೆ ನುಡಿಯಲಿಲ್ಲ? ಬ್ರಹ್ಮಾಂಡ ಗುರೂಜಿಗೆ ಸಾಣೇಹಳ್ಳಿಶ್ರೀ ಪ್ರಶ್ನೆ

Last Updated 28 ಮೇ 2020, 7:02 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಕೊಡಗು ಜಿಲ್ಲೆ ನೆಲಸಮವಾಗುವುದಾಗಿ ಭವಿಷ್ಯ ನುಡಿಯುವ ಬ್ರಹ್ಮಾಂಡ ಗುರೂಜಿ, ಕೊರೊನಾ ವೈರಸ್‌ ಬಗ್ಗೆ ಏಕೆ ಮುನ್ಸೂಚನೆ ನೀಡಲಿಲ್ಲ’ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರಶ್ನಿಸಿದ್ದಾರೆ.

‘ಕೊರೊನಾ ಕಾರಣಕ್ಕೆ ಮೂಲೆಗುಂಪಾಗಿದ್ದ ಮೌಢ್ಯಪ್ರಚಾರಕರು ಮತ್ತೆ ಬಾಲ ಬಿಚ್ಚುತ್ತಿದ್ದಾರೆ. ಜನರ ಮನೋದೌರ್ಬಲ್ಯಗಳನ್ನು ಗುರುಗಳು, ಬಾಬಾಗಳು, ಶಾಸ್ತ್ರಕಾರರು, ಪಂಚಾಂಗದವರು, ಹಸ್ತಸಾಮುದ್ರಿಕೆ ಹೇಳುವವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬ್ರಹ್ಮಾಂಡ ಸುಳ್ಳನ್ನು ಸೃಷ್ಟಿಸುವ ಭವಿಷ್ಯಕಾರರ ದೊಡ್ಡ ದಂಡೇ ಹುಟ್ಟಿಕೊಂಡಿದೆ’ ಎಂದು ಹೇಳಿದ್ದಾರೆ.

‘ಭಾರಿ ಭೂಕಂಪದಿಂದ ಕೊಡಗು ಜಿಲ್ಲೆ ನೆಲಸಮವಾಗಲಿದೆ’ ಎಂದು ಅದಾವ ಮುಖ ಇಟ್ಟುಕೊಂಡು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದರೋ ಗೊತ್ತಿಲ್ಲ. ಇವರು ಹೇಳುವ ಭವಿಷ್ಯ ಸತ್ಯವಾಗುವುದಾದಲ್ಲಿ ಕಳೆದ ಎರಡು ವರ್ಷ ನೆರೆ ಹಾವಳಿ ವಿಚಾರವನ್ನು ಮೊದಲೇ ಏಕೆ ಹೇಳಲಿಲ್ಲ. ಜನರು ದಡ್ಡರಾದಾಗ ಇವರು ಬೇಳೆ ಬೇಯಿಸಿಕೊಳ್ಳುತ್ತಾರೆ. ಇಂಥವರನ್ನು ಮೈಬಗ್ಗಿಸಿ ದುಡಿಯುವಂತೆ ಮಾಡುವ ಹೊಣೆಗಾರಿಕೆ ಜನರ ಮೇಲಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT