ಮಂಗಳವಾರ, ಜನವರಿ 21, 2020
23 °C
ದಾವಣಗೆರೆ ಜಿಲ್ಲೆಯ ಕೆಲ ಖಾಸಗಿ ಶಾಲೆಗಳು ನಕಲಿ ದಾಖಲೆ ಸೃಷ್ಟಿಸಿದ ಆರೋಪ

ಮಕ್ಕಳ ಬದಲು ಟ್ರಂಕ್ ತೋರಿಸಿ ಅನುದಾನ ಲೂಟಿ

ಚಂದ್ರಶೇಖರ ಆರ್. Updated:

ಅಕ್ಷರ ಗಾತ್ರ : | |

ದಾವಣಗೆರೆ: ಜಿಲ್ಲೆಯ ಹಲವು ಖಾಸಗಿ ವಿದ್ಯಾಸಂಸ್ಥೆಗಳು ವಸತಿ ಶಾಲೆಯಲ್ಲಿ ಮಕ್ಕಳ ಬದಲು ಟ್ರಂಕ್ ತೋರಿಸಿ ಕೋಟ್ಯಂತರ ರೂಪಾಯಿ ಅನುದಾನ ಲೂಟಿ ಹೊಡೆದಿವೆ. 

ವಸತಿ ಶಾಲೆ ಇದೆ. ಇಲ್ಲಿ ಮಕ್ಕಳಿಗೆ ವಿದ್ಯಾರ್ಥಿನಿಲಯದ ವ್ಯವಸ್ಥೆ ಕಲ್ಪಿಸ ಲಾಗಿದೆ ಎಂದು ಸುಳ್ಳು ದಾಖಲೆ ನೀಡಿ ಜಿಲ್ಲೆಯ ಎಂಟು ವಿದ್ಯಾಸಂಸ್ಥೆಗಳು ಸರ್ಕಾರದ ಅನುದಾನವನ್ನು ಕೊಳ್ಳೆ ಹೊಡೆದಿವೆ. ಜಿಲ್ಲಾ ಪಂಚಾಯಿತಿ ಸದಸ್ಯರ ಸಮಿತಿ ಈ ಬಗ್ಗೆ ಪರಿಶೀಲನೆ ನಡೆಸಿದಾಗ ಇದು ಬೆಳಕಿಗೆ ಬಂದಿದೆ.

ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳು ಇಲ್ಲದಿದ್ದರೂ, ಪರಿಶೀಲನೆಗೆ ಅಧಿಕಾರಿ ಗಳು ಬಂದಾಗ ಮಕ್ಕಳ ಟ್ರಂಕ್‌ ತೋರಿಸಿ ವಿದ್ಯಾರ್ಥಿಗಳು ರಜೆಗೆ ಊರಿಗೆ ಹೋಗಿದ್ದಾರೆ ಎಂದು ಸುಳ್ಳು ಹೇಳಿ ಅನುದಾನ ಲಪಟಾಯಿಸಿವೆ. ಅಲ್ಲದೆ ಕಟ್ಟಡ ಇಲ್ಲದಿದ್ದರೂ ಶಾಲೆಗಳ ಕೊಠಡಿಗಳನ್ನೇ ತೋರಿಸಿ ವಂಚಿಸಿವೆ. ತಿಂಗಳಿಗೆ ₹7 ಲಕ್ಷಕ್ಕೂ ಅಧಿಕ ಅನುದಾನ ವಂಚಿಸಿದ್ದು, ಸರ್ಕಾರಕ್ಕೆ ವಾರ್ಷಿಕ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಿವೆ.

ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟವನ್ನೇ ನೀಡಿ, ಹಾಸ್ಟೆಲ್‌ ಇದೆ ಎಂದು ನಂಬಿಸಿವೆ. ವಿದ್ಯಾರ್ಥಿಗಳ ಹಾಜರಾತಿಯನ್ನೇ ತೋರಿಸಿರುವ ಖಾಸಗಿ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯವರು, ಮುಖ್ಯಶಿಕ್ಷಕರು ಶಾಲೆಗಳ ದಾಖಲಾತಿಯಲ್ಲಿ ನಮೂ ದಾಗಿರುವ ವಿದ್ಯಾರ್ಥಿಗಳ ವಿವರವನ್ನು ತಿರುಚಿ ಬೇರೊಬ್ಬ ವಿದ್ಯಾರ್ಥಿ ಹೆಸರಿನಲ್ಲಿ ದಾಖಲೆ ಸೃಷ್ಟಿಸಿದ್ದಾರೆ. ಅಲ್ಲದೆ
ಶಾಲೆಗೆ ದಾಖಲಾದ ವಿದ್ಯಾರ್ಥಿಯೇ ಹಾಸ್ಟೆಲ್‌ ಸೌಲಭ್ಯ ಪಡೆದಿದ್ದಾನೆ ಎಂದು ನಂಬಿಸಿ ಸರ್ಕಾರದ ಅನುದಾನ ಕಬಳಿಸಿವೆ. 

ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್‌. ಬಸವಂತಪ್ಪ ಅವರು ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದರು. ಸದಸ್ಯರ ಒತ್ತಡಕ್ಕೆ ಮಣಿದು ಜಿಲ್ಲಾ ಪಂಚಾಯಿತಿ ಈ ಬಗ್ಗೆ ಪರಿಶೀಲನೆಗೆ ಸಮಿತಿ ರಚಿಸಿತ್ತು. ವಿದ್ಯಾಸಂಸ್ಥೆಗಳಿಗೆ ಸಮಿತಿ ಭೇಟಿ ನೀಡಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.

‘ಕೆಲ ವಿದ್ಯಾಸಂಸ್ಥೆಗಳು 30
ವಿದ್ಯಾರ್ಥಿಗಳಿದ್ದರೆ 100 ವಿದ್ಯಾರ್ಥಿಗಳು ಇದ್ದಾರೆ ಎಂದು ದಾಖಲೆಯಲ್ಲಿ ತೋರಿಸಿವೆ. ವಿದ್ಯಾಸಂಸ್ಥೆಗಳ ಜೊತೆ ಜಿಲ್ಲಾ ಮಟ್ಟದ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಬಸವಂತಪ್ಪ ಆಗ್ರಹಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು