ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಾವತಿ ಮುಳುಗಡೆ ಸಂತ್ರಸ್ತರ ವಿರುದ್ಧ ಭೂಕಬಳಿಕೆ ಅಸ್ತ್ರ!

ಅರಣ್ಯ ತೊರೆಯಲು ನಿರ್ಧರಿಸಿದ ಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿ ಗ್ರಾಮಸ್ಥರ ಮೇಲೆ ಎಫ್‌ಐಆರ್ l ನಡೆಯದ ವ್ಯವಸ್ಥಿತ ಜಂಟಿ ಸರ್ವೆ ಕಾರ್ಯ
Last Updated 17 ಜನವರಿ 2020, 19:38 IST
ಅಕ್ಷರ ಗಾತ್ರ

ಶಿವಮೊಗ್ಗ: ಅಭಯಾರಣ್ಯ ವ್ಯಾಪ್ತಿಯ ಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿ ಗ್ರಾಮಗಳನ್ನುತೊರೆಯಲುಶರಾವತಿ ಮುಳುಗಡೆ ಸಂತ್ರಸ್ತರುಸಮ್ಮತಿಸಿದ ಬೆನ್ನಲ್ಲೇ ಆ ಗ್ರಾಮಗಳ 25ಕ್ಕೂ ಹೆಚ್ಚು ಕುಟುಂಬಗಳ ಮೇಲೆ ಅರಣ್ಯ ಇಲಾಖೆ ಭೂ ಕಬಳಿಕೆ ಪ್ರಕರಣ ದಾಖಲಿಸಿದೆ.

1958–64ರ ಅವಧಿಯಲ್ಲಿ ನಿರ್ಮಾಣವಾದಲಿಂಗನಮಕ್ಕಿಜಲಾಶಯಕ್ಕಾಗಿ 152 ಹಳ್ಳಿಗಳ 12 ಸಾವಿರ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿತ್ತು. ಒಂದಷ್ಟು ಕುಟುಂಬಗಳು ಶಿವಮೊಗ್ಗ ಸಮೀಪದ ಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿ ಕಾನನದಲ್ಲಿ ನೆಲೆ ನಿಂತಿದ್ದವು. ಸಂತ್ರಸ್ತರಿಗಾಗಿಯೇ ಸರ್ಕಾರ ಅರಣ್ಯಭೂಮಿ ಡಿನೋಟಿಫಿಕೇಷನ್ ಮಾಡಿ ಕಂದಾಯ ಭೂಮಿ ಎಂದು ಆದೇಶ ಹೊರಡಿಸಿತ್ತು.

ಮುಳುಗಡೆ ಸಂತ್ರಸ್ತರಿಗೆ ಸರ್ಕಾರವು ಭೂಮಿ ನಿಗದಿ ಮಾಡಿದರೂ, ಅರಣ್ಯ ಮತ್ತು ಕಂದಾಯ ಭೂಮಿಯ ಗಡಿ ನಿಗದಿ ಮಾಡಿರಲಿಲ್ಲ. ಇದುವರೆಗೂ ವ್ಯವಸ್ಥಿತ ಜಂಟಿ ಸರ್ವೆ ಕಾರ್ಯ ನಡೆದಿಲ್ಲ. ಎರಡು ವರ್ಷಗಳ ಹಿಂದೆ ರಾಜ್ಯ ಸರ್ಕಾರ 6,459 ಎಕರೆ ಬಿಡುಗಡೆ ಮಾಡಿತ್ತು. ಶೆಟ್ಟಿಹಳ್ಳಿ, ಚಿತ್ರಶೆಟ್ಟಿ ಪ್ರದೇಶ ಅಭಯಾರಣ್ಯ ವ್ಯಾಪ್ತಿಗೆ ಸೇರಿರುವ ಕಾರಣ ಅಲ್ಲಿನ ಬಹುತೇಕರಿಗೆ ಭೂಮಿ ಲಭಿಸಿರಲಿಲ್ಲ. ಐದೂವರೆ ದಶಕಗಳಲ್ಲಿ ಕುಟುಂಬಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಳವಾಗಿದೆ.ಆ ಎರಡು ಗ್ರಾಮಗಳಲ್ಲಿ ನೆಲೆಸಿರುವ 119 ಕುಟುಂಬಗಳು ಸುಮಾರು400 ಎಕರೆ ಭೂಮಿ ಸಾಗುವಳಿ ಮಾಡಿಕೊಂಡಿವೆ.

ಶೆಟ್ಟಿಹಳ್ಳಿಯನ್ನು ಒಳಗೊಂಡ ಪಶ್ಚಿಮಘಟ್ಟದ ಈ ಸೂಕ್ಷ್ಮ ಪರಿಸರ ಪ್ರದೇಶವನ್ನು 1984ರಲ್ಲಿ ಸರ್ಕಾರ ಅಭಯಾರಣ್ಯ ಎಂದುಘೋಷಿಸಿತ್ತು. ಅಂದಿನಿಂದಲೂ ಮುಳುಗಡೆ ಸಂತ್ರಸ್ತರನ್ನು ಸ್ಥಳಾಂತರಿಸಲು ಜಿಲ್ಲಾಡಳಿತ, ಅರಣ್ಯ ಇಲಾಖೆ ಯತ್ನಿಸಿತ್ತಾದರೂ ಅಲ್ಲಿನ ಜನರು ಮಣಿದಿರಲಿಲ್ಲ. ಈಗ ಅರಣ್ಯ ಪ್ರದೇಶ ತೊರೆಯಲು ಮುಂದೆ ಬಂದಿದ್ದಾರೆ.ಶಿವಮೊಗ್ಗ ತಾಲ್ಲೂಕಿನ ಗೋವಿಂದಾಪುರದ ಸರ್ವೆ ನಂಬರ್ 9ರಲ್ಲಿನ 540 ಎಕರೆ ಜಮೀನನ್ನು ಈ ಗ್ರಾಮಗಳ ಜನರಿಗೆ ಹಂಚಿಕೆ ಮಾಡುವ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.ಈ ಮಧ್ಯೆ ಭೂಕಬಳಿಕೆ ಆರೋಪ ಪ್ರಕರಣಗಳು ಹೊಸ ಸಮಸ್ಯೆ ಹುಟ್ಟುಹಾಕಿವೆ. ಶರಾವತಿ ಮುಳುಗಡೆ ಸಂತ್ರಸ್ತ ಕುಟುಂಬಗಳ ರೈತರಾದ ಕುಮಾರ, ಎಚ್‌.ಕೆ. ಶಂಕರಪ್ಪ, ಎಂ.ಎನ್. ರಾಮಪ್ಪ, ಮಂಜಪ್ಪ,ಎ.ತಿಮ್ಮಪ್ಪ, ಎಚ್‌.ಡಿ. ನಾಗರಾಜ,ಬಿ. ಸುರೇಶ, ಎಸ್‌.ಎಂ. ಗಣಪತಿ ಮತ್ತಿತರರವಿರುದ್ಧ ಭೂ ಕಬಳಿಕೆ ಆರೋಪದ ಮೇಲೆಶಿವಮೊಗ್ಗ ವನ್ಯಜೀವಿ ವಿಭಾಗದ ಶಿವಮೊಗ್ಗ ವಲಯ ಅರಣ್ಯಾಧಿಕಾರಿ ಎಫ್‌ಐಆರ್ ದಾಖಲಿಸಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರಿನಲ್ಲಿರುವ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

‘ಗ್ರಾಮದ ಸರ್ವೆ ನಂಬರ್ 1ರಲ್ಲಿ 5.20ಎಕರೆ ಒತ್ತುವರಿ ಮಾಡಿದ ಆರೋಪ ಹೊರಿಸಲಾಗಿದೆ. ಈ ಜಮೀನಿಗೆ 2016ರಲ್ಲೇ ಶಿವಮೊಗ್ಗ ತಹಶೀಲ್ದಾರ್ 3.30 ಎಕೆರೆಗೆ ಸಾಗುವಳಿ ಪತ್ರ ನೀಡಿದ್ದಾರೆ. ಅರಣ್ಯ, ಕಂದಾಯ ಭೂಮಿ ಇತ್ಯರ್ಥ ಮಾಡಿಕೊಳ್ಳದೆ ಜನರ ಮೇಲೆ ಬ್ರಹಾಸ್ತ್ರ ಪ್ರಯೋಗಿಸುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡರು ಶೆಟ್ಟಿಹಳ್ಳಿಯ ಕುಮಾರ್.

ಕಾನೂನು ಪ್ರಕಾರ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಭೂಮಿ ಮಂಜೂರಾದ ದಾಖಲೆಗಳಿದ್ದರೆ ನ್ಯಾಯಾಲಯಕ್ಕೆ ಹಾಜರುಪಡಿಸಬಹುದು. ನ್ಯಾಯ ಪಡೆಯಲು ಅವರಿಗೂ ಅವಕಾಶವಿದೆ

-ಐ.ಎಂ.ನಾಗರಾಜ್,ಉಪಅರಣ್ಯ ಸಂರಕ್ಷಣಾಧಿಕಾರಿ, ವನ್ಯಜೀವಿ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT