ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿನ್ನೋಟ 2019: ಸರ್ಕಾರದ ವಿವಾದಿತ ನಿರ್ಧಾರಗಳು

Last Updated 29 ಡಿಸೆಂಬರ್ 2019, 19:43 IST
ಅಕ್ಷರ ಗಾತ್ರ

ಜನವರಿ 2: ಟೆಂಡರ್‌ ಸುಗ್ಗಿ: ಲೋಕೋಪಯೋಗಿ ಇಲಾಖೆಯಲ್ಲಿ ಅಲ್ಪಾವಧಿ ಟೆಂಡರ್‌ ಸುಗ್ಗಿ ತಂದ ವಿವಾದ.

ಫೆಬ್ರುವರಿ 2: ಜೆಡಿಎಸ್‌ ಕ್ಷೇತ್ರ ವ್ಯಾಮೋಹ: ಬಿಬಿಎಂಪಿ ವ್ಯಾಪ್ತಿಯಲ್ಲಿ ಇಲ್ಲದ ಕ್ಷೇತ್ರಗಳಿಗೂ ಕಸದ ಹಣ ಅನುದಾನ.

ಫೆಬ್ರುವರಿ 17: ನಕಲಿ ಬಡ್ತಿ: ಅರಣ್ಯ ಇಲಾಖೆಯಲ್ಲಿ ಮಾಡಲಾದ ಬಡ್ತಿಯೇ ನಕಲಿ. ನೇರ ನೇಮಕವಾದ 300 ಮಂದಿಗೆ ಹುದ್ದೆಗಳೇ ಇಲ್ಲ.

ಮಾರ್ಚ್‌ 19: ಎಲಿವೇಟೆಡ್‌ ರಸ್ತೆಯ ಗುಮ್ಮ: ಸರ್ಕಾರ ಮತ್ತೆ ಪ್ರಸ್ತಾಪಿಸಿದ ಬೆಂಗಳೂರಿನ ಎಲಿವೇಟೆಡ್‌ ರಸ್ತೆ ನಿರ್ಮಾಣಕ್ಕೆ ಜನರಿಂದ ತೀವ್ರ ಆಕ್ಷೇಪ, ಕೊನೆಗೆ ಜನಾಭಿಪ್ರಾಯ ಪಡೆಯುವ ತೀರ್ಮಾನ.

ಮೇ 27: ಜಿಂದಾಲ್‌ಗೆ ಜಮೀನು: ಬಳ್ಳಾರಿ ಜಿಲ್ಲೆ ತೋರಣಗಲ್, ಕರೇಗುಪ್ಪ ಗ್ರಾಮಗಳಲ್ಲಿ ಜೆ.ಎಸ್‌.ಡಬ್ಲ್ಯೂ ಸ್ಟೀಲ್‌ ಲಿಮಿಟೆಟ್‌ (ಜಿಂದಾಲ್‌) ಕಂಪನಿಗೆ 3,667 ಎಕರೆ ಜಮೀನು ಮಾರಾಟ ನಿರ್ಧಾರ, ಬಿಜೆಪಿ ತೀವ್ರ ಹೋರಾಟ.

ಜುಲೈ 30: ಟಿಪ್ಪು ಜಯಂತಿ ರದ್ದು: ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ನೂತನ ಬಿಜೆಪಿ ಸರ್ಕಾರದ ಮೊದಲ ಪ್ರಮುಖ ನಿರ್ಧಾರ, ಸಿದ್ದರಾಮಯ್ಯ ಆರಂಭಿಸಿದ ಟಿಪ್ಪು ಜಯಂತಿಗೆ ಸಡ್ಡು.

ಅಕ್ಟೋಬರ್ 5: 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್ ಕುಮಾರ್ ತರಾತುರಿಯಲ್ಲಿ ಇದನ್ನು ಪ್ರಕಟಿಸಿದರೂ ಇದುವರೆಗೂ ಯಾವುದೇ ಇತ್ಯರ್ಥವಾಗಿಲ್ಲ. ವಿದ್ಯಾರ್ಥಿಗಳ ಗೊಂದಲ ಮುಂದುವರಿದಿದೆ.

ನವೆಂಬರ್ 29: ವೈದ್ಯಕೀಯ ಕಾಲೇಜು ಸ್ಥಳಾಂತರ: ಉಪಚುನಾವಣಾ ಪ್ರಚಾರದ ವೇಳೆ ಕನಕಪುರಕ್ಕೆ ಮಂಜೂರಾಗಿದ್ದ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ, ಡಿಕೆಶಿ–ಬಿಎಸ್‌ವೈ ರಾಜಕೀಯ ಜಟಾಪಟಿಗೆ ವೇದಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT