ನವದೆಹಲಿ: ದೇಶದ ಗ್ರಾಹಕರಿಗೆ ಸ್ಟಾರ್ಲಿಂಕ್ನ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಯನ್ನು ಒದಗಿಸಲು ಉದ್ಯಮಿ ಇಲಾನ್ ಮಸ್ಕ್ ಒಡೆತನದ ಸ್ಪೇಸ್ಎಕ್ಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ರಿಯಲನ್ಸ್ ಇಂಡಸ್ಟ್ರೀಸ್ ಡಿಜಿಟಲ್ ಸರ್ವೀಸಸ್ ಕಂಪನಿಯ ಜಿಯೊ ಫ್ಲಾಟ್ಫಾರ್ಮ್ಸ್ ಇಂದು (ಬುಧವಾರ) ತಿಳಿಸಿದೆ.

ಇದರೊಂದಿಗೆ ಪ್ರತಿಸ್ಪರ್ಧಿ ಏರ್ಟೆಲ್ ಒಪ್ಪಂದದ ಒಂದು ದಿನದ ಬೆನ್ನಲ್ಲೇ ಜಿಯೊ ಕೂಡ ದೇಶದಲ್ಲಿ ಸ್ಟಾರ್ಲಿಂಕ್ನ ಸೇವೆ ಒದಗಿಸಲು ಒಪ್ಪಂದಕ್ಕೆ ಸಹಿ ಹಾಕಿದೆ.

ಭಾರತದಲ್ಲಿ ಸ್ಟಾರ್ಲಿಂಕ್ ಉತ್ಪನಗಳನ್ನು ಮಾರಾಟ ಮಾಡಲು ಸ್ಪೇಸ್ಎಕ್ಸ್ ಮಾನ್ಯತೆ ಗಿಟ್ಟಿಸಿಕೊಂಡಲ್ಲಿ ಮಾತ್ರ ಒಪ್ಪಂದವು ಅನುಷ್ಠಾನಗೊಳ್ಳಲಿದೆ.

'ಭಾರತಕ್ಕೆ ಸ್ಟಾರ್ಲಿಂಕ್ ಅನ್ನು ಪರಿಚಯಿಸಲು ಸ್ಪೇಸ್ಎಕ್ಸ್ ಜೊತೆಗಿನ ನಮ್ಮ ಸಹಯೋಗವು ತಡೆರಹಿತ ಬ್ರಾಡ್ಬ್ಯಾಂಡ್ ಸೇವೆ ಒದಗಿಸಲು ನಮ್ಮ ಬದ್ಧತೆಯನ್ನು ಬಲಪಡಿಸುತ್ತದೆ' ಎಂದು ಜಿಯೊ ತಿಳಿಸಿದೆ.

'ಜಿಯೊ ಬ್ರಾಡ್ಬ್ಯಾಡ್ ಇಕೊ ಸಿಸ್ಟಂನಲ್ಲಿ ಸ್ಟಾರ್ಲಿಂಕ್ ಅನ್ನು ಸಂಯೋಜಿಸುವ ಮೂಲಕ ಹೈ-ಸ್ಪೀಡ್ ಬ್ರಾಡ್ಬ್ಯಾಂಡ್ ಸೇವೆಯ ವಿಶ್ವಾಸಾರ್ಹಾತೆ ಜೊತೆಗೆ ಎಐ ಚಾಲಿತ ಯುಗದಲ್ಲಿ ನಮ್ಮ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದೇವೆ' ಎಂದು ಹೇಳಿದೆ.
.ಎಲಾನ್ ಮಸ್ಕ್ ಒಡೆತನದ SpaceX ಜತೆ Airtel ಪಾಲುದಾರಿಕೆ.ಭಾರತದಲ್ಲಿ ಸ್ಟಾರ್ಲಿಂಕ್: ಇಲಾನ್ ಮಸ್ಕ್ ಜೊತೆ ಪ್ರಧಾನಿ ಮೋದಿ ಮಾತುಕತೆ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.