ನವದೆಹಲಿ: ತಂತ್ರಜ್ಞಾನ ದೈತ್ಯ ಗೂಗಲ್ ಸಹಯೋಗದಲ್ಲಿ ಉದ್ಯಮ ದಿಗ್ಗಜ ಮುಕೇಶ್ ಅಂಬಾನಿ ಒಡೆತನದ ರಿಲಯಲ್ಸ್ ಜಿಯೋ ನಿರ್ಮಿಸುತ್ತಿರುವ ಅತಿ ನೂತನ 'ಜಿಯೋಫೋನ್ ನೆಕ್ಸ್ಟ್' ಅಗ್ಗದ ಸ್ಮಾರ್ಟ್‌ಫೋನ್ ಮುಂಬರುವ ದೀಪಾವಳಿ ಹಬ್ಬದ ಆವೃತ್ತಿಯ ವೇಳೆಗೆ ಮಾರುಕಟ್ಟೆಯನ್ನು ತಲುಪಲಿದೆ.
ಈ ಮೊದಲು ಸೆಪ್ಟೆಂಬರ್ 10ರಂದು (ಇಂದು) ಬಿಡುಗಡೆಗೊಳಿಸಲು ದಿನಾಂಕ ನಿಗದಿಗೊಳಿಸಲಾಗಿತ್ತು. ಆದರೆ ಈಗ ಬಿಡುಗಡೆ ದಿನಾಂಕ ಮುಂದೂಡಿರುವುದಾಗಿ ರಿಲಯನ್ಸ್ ಜಿಯೋ ತಿಳಿಸಿದೆ.
ಇದನ್ನೂ ಓದಿ:ಬಜೆಟ್ ದರದ ಸ್ಮಾರ್ಟ್‌ಫೋನ್ ಪರಿಚಯಿಸಿದ ಐಟೆಲ್
ಗೂಗಲ್ ಸಹಯೋಗದಲ್ಲಿ ವಿನ್ಯಾಸಗೊಳಿಸಲಾಗಿರುವ ಜಿಯೋಫೋನ್ ನೆಕ್ಸ್ಟ್, 2ಜಿಯಿಂದ 4ಜಿ ಕನೆಕ್ಟಿವಿಟಿಗೆ ಅಪ್‌ಗ್ರೇಡ್ ಮಾಡಲು ಬಯಸುವವರಿಗೆ ಉತ್ತಮ ಆಯ್ಕೆಯಾಗಿರಲಿದೆ.
ಹಾಗಿದ್ದರೂ ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್ ಬೆಲೆ ಎಷ್ಟಾಗಿರಲಿದೆ ಎಂಬುದರ ಬಗ್ಗೆ ವಿವರವನ್ನು ಬಹಿರಂಗಪಡಿಸಿಲ್ಲ.
ಜಿಯೋಫೋನ್ ನೆಕ್ಸ್ಟ್ ಆಂಡ್ರಾಯ್ಡ್ ಹಾಗೂ ಪ್ಲೇ-ಸ್ಟೋರ್ ಆಧಾರಿತ ಆಪ್ಟಿಮೈಸ್ಡ್ ಆಪರೇಟಿಂಗ್ ಸಿಸ್ಟಂ ಅನ್ನು ಹೊಂದಿರಲಿದೆ. ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್ ಹಾಗೂ ಅದರ ಆಪರೇಟಿಂಗ್ ಸಿಸ್ಟಂ, ಇಲ್ಲಿಯವರೆಗೆ ಹೆಚ್ಚು ಶಕ್ತಿಶಾಲಿ ಸ್ಮಾರ್ಟ್‌ಫೋನ್‌ಗಳಲ್ಲಿ ಇರುವಂತಹ ಪ್ರೀಮಿಯಂ ಸಾಮರ್ಥ್ಯವನ್ನು ಹೊಂದಿರಲಿದೆ. ಅಲ್ಲದೆ ತಾಜಾ ಆಂಡ್ರಾಯ್ಡ್ ಫೀಚರ್, ಅತ್ಯುತ್ತಮ ಕ್ಯಾಮರಾ ಹಾಗೂ ಸೆಕ್ಯೂರಿಟಿ ಅಪ್‌ಡೇಟ್ ಒಳಗೊಂಡಿರಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.