ಸೋಮವಾರ, ಸೆಪ್ಟೆಂಬರ್ 27, 2021
23 °C

Nokia C20 Plus ಬಿಡುಗಡೆ: ಶೀಘ್ರದಲ್ಲೇ ಮಾರುಕಟ್ಟೆಗೆ ಸಿ30, ಸಿ01

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಎಚ್‌ಎಂಡಿ ಗ್ಲೋಬಲ್ ಮಾಲೀಕತ್ವದಲ್ಲಿರುವ ನೋಕಿಯಾ ಫೋನ್ಸ್, ನೂತನ 'ನೋಕಿಯಾ ಸಿ20 ಪ್ಲಸ್' ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಪರಿಚಯಿಸಿದೆ. ಜಿಯೋ ಪಾಲುದಾರಿಕೆಯಲ್ಲಿ ಗ್ರಾಹಕರಿಗೆ ಮತ್ತಷ್ಟು ಆಫರ್‌ಗಳು ಲಭ್ಯವಾಗಲಿವೆ. 

ಮುಖ್ಯಾಂಶಗಳು:
6.5 ಇಂಚುಗಳ ಎಚ್‌ಡಿ ಪ್ಲಸ್ ಸ್ಕ್ರೀನ್,
4950 mAh ಬ್ಯಾಟರಿ (ಎರಡು ದಿನ ಕಾರ್ಯಾಚರಣೆ ಸಾಮರ್ಥ್ಯ),
1.6 GHz ಆಕ್ಟಾಕೋರ್ ಪ್ರೊಸೆಸರ್,
ಆಂಡ್ರಾಯ್ಡ್ 11 (ಗೊ ಎಡಿಷನ್) ಆಪರೇಟಿಂಗ್ ಸಿಸ್ಟಂ,
ಹಿಂಬದಿಯಲ್ಲಿ ಎರಡು ಕ್ಯಾಮರಾ,
ಫೇಸ್ ಅನ್‌ಲಾಕ್, 
ಎರಡು ವರ್ಷಗಳ ಸೆಕ್ಯೂರಿಟಿ ಅಪ್‌ಡೇಟ್,
ಗರಿಷ್ಠ ನಿರ್ಮಾಣ ಗುಣಮಟ್ಟ,
1 ವರ್ಷದ ರಿಪ್ಲೇಸ್‌ಮೆಂಟ್ ಗ್ಯಾರಂಟಿ.

ಬೆಲೆ/ಸ್ಟೋರೆಜ್:
2GB RAM/32GB: ₹8999 
3GB RAM/32GB: ₹9999 

ಬಣ್ಣ: ಒಷಿಯನ್ ಬ್ಲೂ, ಡಾರ್ಕ್ ಗ್ರೇ. 

ಶೀಘ್ರದಲ್ಲೇ ಸಿ30, ಸಿ01 ಮಾರುಕಟ್ಟೆಗೆ...
'ಸಿ' ಶ್ರೇಣಿಯಲ್ಲಿ ಮತ್ತಷ್ಟು ಸ್ಮಾರ್ಟ್‌ಪೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ನೋಕಿಯಾ ಸಿದ್ಧತೆ ನಡೆಸುತ್ತಿದೆ. ಮುಂಬರುವ ಹಬ್ಬದ ಆವೃತ್ತಿಯ ವೇಳೆಯಲ್ಲಿ ನೋಕಿಯಾ ಸಿ01 ಪ್ಲಸ್ ಮತ್ತು ನೋಕಿಯಾ ಸಿ30 ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆಯಿಡಲಿವೆ. 
 


ನೋಕಿಯಾ ಸಿ20 ಪ್ಲಸ್

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು