ಭಾನುವಾರ, ಜೂನ್ 20, 2021
29 °C

ಸಮಯ ಉಳಿಸುವ ಸ್ಮಾರ್ಟ್‌ ಅಡುಗೆ ಪಾಟ್‌

ಅಮೃತ Updated:

ಅಕ್ಷರ ಗಾತ್ರ : | |

Prajavani

ಅಡುಗೆ ವಿಷಯ ಬಂದಾಗ ಗೃಹಿಣಿಯರು ಮಾತ್ರವಲ್ಲ, ಪ್ರತಿಯೊಬ್ಬರೂ ಈಗ ಸ್ಮಾರ್ಟ್‌ ತಂತ್ರಜ್ಞಾನದ ಮೇಲೆ ಕಣ್ಣಿಟ್ಟಿರುತ್ತಾರೆ. ಅದರಲ್ಲೂ ಅಡುಗೆಮನೆಯಲ್ಲಿ ಬಳಕೆಯಾಗುವಂತಹ ಸಣ್ಣಪುಟ್ಟ ಸಲಕರಣೆಗಳು ಆ್ಯಪ್‌ಗೆ ಜೋಡಣೆಯಾದರೆ ಕೆಲಸ ಸಲೀಸಲ್ಲವೇ? ಈ ವಿಷಯದಲ್ಲಿ ಇನ್‌ಸ್ಟಂಟ್‌ ಪಾಟ್‌ ನಮ್ಮ ಕಣ್ಣೆದುರು ನಿಲ್ಲುತ್ತದೆ. ಇದು ಪ್ರೆಶರ್‌ ಕುಕರ್‌, ರೈಸ್‌ ಕುಕರ್‌, ಸ್ಟೀಮರ್‌, ಯೋಗ್ಹರ್ಟ್‌ ಮೇಕರ್‌, ಕೇಕ್‌ ಮೇಕರ್‌, ವಾರ್ಮರ್‌ ಆಗಿ ಕೆಲಸ ಮಾಡುವುದು ಮಾತ್ರವಲ್ಲ, ಇದರಲ್ಲಿ ಹುರಿಯಬಹುದು ಕೂಡ. ವಿಶೇಷವೆಂದರೆ ಇದು ವೈಫೈ ಮೇಲೆ ಕೆಲಸ ಮಾಡುವುದಲ್ಲದೇ ಆ್ಯಪ್‌ಗೆ ಜೋಡಣೆಯಾಗಿದೆ. ಹಾಗೆಯೇ ಅಲೆಕ್ಸಾದ ಮೂಲಕ ಆರ್ಡರ್‌ ಕೊಟ್ಟು ಕೆಲಸ ಮಾಡಿಸಬಹುದು.

ವೈಶಿಷ್ಟ್ಯಗಳು: ಫಟಾಫಟ್‌ ಎಂದು ಬೇಯಿಸಿ ನಿಮ್ಮೆದುರು ಇಡುತ್ತದೆ. ಇದರಿಂದ ಸಮಯದ ಉಳಿತಾಯವಾಗುವುದಲ್ಲದೇ 8 ಇನ್‌ ಒನ್‌ ಸಲಕರಣೆ, ಒನ್‌ ಟಚ್‌ನ 13 ಬಗೆಯ ಪ್ರೋಗ್ರಾಮ್‌ಗಳಿದ್ದು, ಸೂಪ್‌, ಅನ್ನ, ಕೋಳಿ ಮಾಂಸ ಎಲ್ಲವನ್ನೂ ಬೇಯಿಸಿ ಹಾಕುತ್ತದೆ. ಡೆಸರ್ಟ್‌ ಕೂಡ ಮಾಡಬಹುದು.

ಇದು ಅಲೆಕ್ಸಾ ಮತ್ತು ವೈಫೈಗೆ ಜೋಡಣೆಯಾಗಿದೆ. ಹೀಗಾಗಿ ಕೈಯಲ್ಲಿರುವ ಸ್ಮಾರ್ಟ್‌ ಫೋನ್‌ ಮೂಲಕ ನಿಯಂತ್ರಿಸಬಹುದು. ಅಷ್ಟಕ್ಕೂ ಸೋಮಾರಿತನ ಕಾಡಿದರೆ ಅಲೆಕ್ಸಾ ಮೂಲಕ ಹೇಳಿಸಬಹುದು. ಒಂದು ಸಾವಿರಕ್ಕೂ ಅಧಿಕ ತಿನಿಸುಗಳನ್ನು ಮೊದಲೇ ಪ್ರೋಗ್ರಾಮ್‌ ಮಾಡಿಡಲಾಗಿದೆ. ಹಾಗೆಯೇ ಅಡುಗೆ ಆಗುತ್ತಿರುವ ಬಗ್ಗೆ ಅಪ್‌ಡೇಟ್‌ ಪಡೆಯಬಹುದು.

ಇದರ ಜೊತೆಗೆ ಸ್ಟೇನ್‌ಲೆಸ್‌ ಸ್ಟೀಲ್‌ ಸ್ಟೀಮ್‌ ರ‍್ಯಾಕ್‌, ಸೂಪ್‌ ಸ್ಪೂನ್‌, ಅಳತೆ ಕಪ್‌ ಮೊದಲಾದವುಗಳನ್ನು ನೀಡಲಾಗುವುದು. 120ವ್ಯಾಟ್‌– 60ಎಚ್‌ಝೆಡ್‌ ವಿದ್ಯುತ್‌ ಅಗತ್ಯವಿದೆ. ಸುರಕ್ಷತ ಮಾನದಂಡಗಳನ್ನು ಅನುಸರಿಸಿ ತಯಾರಿಸಲಾಗಿದೆ. ಸೇಫ್ಟಿ ಲಾಕ್‌ ಕೂಡ ಇದೆ.

ಐಒಎಸ್‌ ಮತ್ತು ಆ್ಯಂಡ್ರಾಯ್ಡ್‌ ಸಾಧನಗಳಲ್ಲಿ ಉಚಿತ ಪಾಟ್‌ ಆ್ಯಪ್‌ ಇದ್ದು ನೂರಾರು ತಿನಿಸುಗಳ ತಯಾರಿಯನ್ನು ಅಳವಡಿಸಲಾಗಿದೆ. ಆರು ಜನರಿಗೆ ಸಾಕಾಗುವಷ್ಟು ಅಡುಗೆ ಮಾಡಬಹುದು. ಒಂಟಿಯಾಗಿ ಪಿಜಿಯಲ್ಲಿರುವವರಿಗೆ ಹೇಳಿ ಮಾಡಿಸಿರುವಂತಹದ್ದು. ಪಾಟ್‌ನ ಒಳಗಿರುವ ಸ್ಟೇನ್‌ಲೆಸ್‌ ಸ್ಟೀಲ್‌ನ ಭಾಗ ಹಲವು ವರ್ಷಗಳ ಕಾಲ ಬಾಳಿಕೆ ಬರುವುದಲ್ಲದೇ ಆರೋಗ್ಯದ ದೃಷ್ಟಿಯಿಂದ ಸುರಕ್ಷಿತ ಕೂಡ.

ಆನ್‌ಲೈನ್‌ನಲ್ಲಿ ಖರೀದಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು