ನವದೆಹಲಿ: ಭಾರತಕ್ಕೆ ಅಮೆರಿಕದ ಖ್ಯಾತ ಉದ್ಯಮಿ ಎಲಾನ್ ಮಸ್ಕ್ ಅವರ ಉಪಗ್ರಹ ಆಧರಿತ ಸ್ಟಾರ್ಲಿಂಕ್ ಸೇವೆಯನ್ನು ಸ್ವಾಗತಿಸಿದ ಕೆಲವೇ ಹೊತ್ತಿನಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪೋಸ್ಟ್ ಅನ್ನು ಅಳಿಸಿ ಹಾಕಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅಶ್ವಿನಿ ವೈಷ್ಣವ್, 'ಸ್ಟಾರ್ಲಿಂಕ್, ಭಾರತಕ್ಕೆ ಸ್ವಾಗತ! ಇದರಿಂದ ದೂರದ ಪ್ರದೇಶದ ರೈಲ್ವೆ ಯೋಜನೆಗಳಿಗೆ ಪ್ರಯೋಜನವಾಗಲಿದೆ' ಎಂದು ಬರೆದುಕೊಂಡಿದ್ದರು.

ಬಳಿಕ ಈ ಪೋಸ್ಟ್ ಅನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರೂ ಆಗಿರುವ ಅಶ್ವಿನಿ ವೈಷ್ಣವ್ ಅಳಿಸಿ ಹಾಕಿದ್ದಾರೆ.

ಸ್ಟಾರ್ಲಿಂಕ್ ಜೊತೆ ಏರ್ಟೆಲ್ ಹಾಗೂ ಜಿಯೊ ಒಪ್ಪಂದದ ಬೆನ್ನಲ್ಲೇ ಸ್ಟಾರ್ಲಿಂಕ್ ಅನ್ನು ದೇಶಕ್ಕೆ ಸ್ವಾಗತಿಸಿ ಅಶ್ವಿನಿ ವೈಷ್ಣವ್ ಪೋಸ್ಟ್ ಮಾಡಿದ್ದರು.

ದೇಶದ ಗ್ರಾಹಕರಿಗೆ ಸ್ಟಾರ್ಲಿಂಕ್ನ ಉಪಗ್ರಹ ಆಧರಿತ ಇಂಟರ್ನೆಟ್ ಸೇವೆ ಒದಗಿಸುವ ಸಂಬಂಧ ಇಲಾನ್ ಮಸ್ಕ್ ಒಡೆತನದ ಸ್ಪೇಸ್ಎಕ್ಸ್ ಜೊತೆ ಒಪ್ಪಂದಕ್ಕೆ ಏರ್ಟೆಲ್ ಬೆನ್ನಲ್ಲೇ ಜಿಯೊ ಕೂಡಾ ಸಹಿ ಹಾಕಿತ್ತು.

ಆದರೆ ಸ್ಟಾರ್ಲಿಂಕ್ ಸೇವೆ ಆರಂಭಿಸಲು ಕೇಂದ್ರದಿಂದ ಇನ್ನೂ ಅನುಮತಿ ದೊರಕಿಲ್ಲ. ದೇಶದಲ್ಲಿ ಸ್ಟಾರ್ಲಿಂಕ್ ಉತ್ಪನ್ನಗಳನ್ನು ಮಾರಾಟ ಮಾಡಲು ಸ್ಪೇಸ್ಎಕ್ಸ್ ಮಾನ್ಯತೆ ಗಿಟ್ಟಿಸಿಕೊಂಡಲ್ಲಿ ಮಾತ್ರ ಒಪ್ಪಂದವು ಅನುಷ್ಠಾನಗೊಳ್ಳಲಿದೆ.

ಸ್ಟಾರ್ಲಿಂಕ್ ವಿಶ್ವದ ಅತಿ ದೊಡ್ಡ 'ಭೂಮಿಗೆ ಸಮೀಪದ ಕಕ್ಷೆಯಲ್ಲಿ (ಎಲ್ಇಒ) ಕಾರ್ಯನಿರ್ವಹಿಸಬಲ್ಲ ಸೇವೆಯನ್ನು ಹೊಂದಿದೆ.
.ದೇಶದಲ್ಲಿ Starlink ಇಂಟರ್ನೆಟ್ ಸೇವೆ; SpaceX ಜತೆ ಏರ್ಟೆಲ್ ಬಳಿಕ Jio ಒಪ್ಪಂದ.ಭಾರತದಲ್ಲಿ ಸ್ಟಾರ್ಲಿಂಕ್: ಇಲಾನ್ ಮಸ್ಕ್ ಜೊತೆ ಪ್ರಧಾನಿ ಮೋದಿ ಮಾತುಕತೆ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.