ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Vivo X80 Pro: ಪ್ರೀಮಿಯಂ ಸ್ಮಾರ್ಟ್‌ಫೋನ್ ಪರಿಚಯಿಸಿದ ವಿವೊ

ಅಕ್ಷರ ಗಾತ್ರ

ಬೆಂಗಳೂರು: ಚೀನಾ ಮೂಲದ ಗ್ಯಾಜೆಟ್ ತಯಾರಿಕ ಸಂಸ್ಥೆ ವಿವೊ, ಎಕ್ಸ್ ಸರಣಿಯಲ್ಲಿ ನೂತನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.

ಪ್ರೀಮಿಯಂ ಸ್ಮಾರ್ಟ್‌ಫೋನ್ ಸರಣಿಯಲ್ಲಿ ವಿವೊ X80 Pro ಮತ್ತು ವಿವೊ X80 ಮಾರುಕಟ್ಟೆಗೆ ಲಗ್ಗೆ ಇರಿಸಿದೆ.

ವಿವೊ X80 Pro
6.78 ಇಂಚಿನ ಕ್ವಾಡ್ ಎಚ್‌ಡಿ+ ಡಿಸ್‌ಪ್ಲೇ
ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 8 ಜೆನ್ 1 ಒಕ್ಟಾ ಕೋರ್ ಪ್ರೊಸೆಸರ್, ಅಡ್ರೆನೊ 730 ಗ್ರಾಫಿಕ್ಸ್ ಬೆಂಬಲ
V1+ ಚಿಪ್
12 GB RAM, 256 GB ಸ್ಟೋರೇಜ್ ಜತೆಗೆ 4,700mAh ಬ್ಯಾಟರಿ ಮತ್ತು 80W ಫಾಸ್ಟ್‌ ಚಾರ್ಜಿಂಗ್.
50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ 48+12+8 ಮೆಗಾಪಿಕ್ಸೆಲ್ ಕ್ಯಾಮೆರಾ ಹಿಂಭಾಗದಲ್ಲಿದೆ. ಉಳಿದಂತೆ, 32 ಮೆಗಾಪಿಕ್ಸೆಲ್ ಸೆಲ್ಫಿ ಕೂಡ ಇದರಲ್ಲಿದೆ.

ಬೆಲೆ ಮತ್ತು ಲಭ್ಯತೆ
ವಿವೊ X80 Pro 12 GB RAM, 256 GB ಮಾದರಿಗೆ ದೇಶದಲ್ಲಿ ₹79,999 ದರವಿದೆ.

ಆರಂಭಿಕ ಕೊಡುಗೆಯಾಗಿ, ಎಚ್‌ಡಿಎಫ್‌ಸಿ ಕಾರ್ಡ್ ಬಳಕೆದಾರರಿಗೆ ₹7,000 ಡಿಸ್ಕೌಂಟ್ ಮತ್ತು ಇತರ ಕಾರ್ಡ್ ಹೊಂದಿರುವವರಿಗೆ ಶೇ 10ರವರೆಗೆ ಡಿಸ್ಕೌಂಟ್ ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT