ಶನಿವಾರ, ಜೂನ್ 19, 2021
21 °C

ಶವೊಮಿ ಇಂಡಿಯಾದಿಂದ ರೆಡ್‌ಮಿ ನೋಟ್ 9: ಆರಂಭಿಕ ಬೆಲೆ ₹11,999

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ರೆಡ್‌ಮಿ ನೋಟ್ 9

ಬೆಂಗಳೂರು: ಭಾರತದ ನಂಬರ್ ಒನ್ ಸ್ಮಾರ್ಟ್‌ಫೋನ್ ಮತ್ತು ಸ್ಮಾರ್ಟ್ ಟಿ.ವಿ. ಬ್ರಾಂಡ್ ಶವೊಮಿ (Xiaomi) ತಮ್ಮ ಬೆಸ್ಟ್-ಸೆಲ್ಲಿಂಗ್ ಸ್ಮಾರ್ಟ್‌ಫೋನ್ ಸೀರೀಸ್ ಭಾಗವಾಗಿ ರೆಡ್‌ಮಿ ನೋಟ್ ಘೋಷಿಸಿದೆ. ಭಾರತದಲ್ಲಿ ಅತ್ಯುನ್ನತ ಕಾರ್ಯಕ್ಷಮತೆಯ ಮೀಡಿಯಾ ಟೆಕ್ ಹೀಲಿಯೊ ಜಿ85 ಇರುವ ಮೊದಲ ಫೋನ್ ಇದೆಂದು ಕಂಪನಿಯು ಹೇಳಿಕೊಂಡಿದೆ.

ರೆಡ್‌ಮಿ ನೋಟ್ 9 ನಲ್ಲಿ ಕಾರ್ಯಕ್ಷಮತೆ ಮತ್ತು ಗೇಮಿಂಗ್ ಕೇಂದ್ರಿತ ಮೀಡಿಯಾ ಟೆಕ್ ಹೀಲಿಯೊ ಜಿ85 ಪ್ರೊಸೆಸರ್ ಇದ್ದು, 16.5 ಸೆಂ.ಮೀ. (6.53 ಇಂಚು) ಡಾಟ್ ಡಿಸ್‌ಪ್ಲೇ ಫುಲ್ ಎಚ್‌ಡಿ+ ರೆಸೊಲ್ಯೂಷನ್ ಹೊಂದಿದೆ.

ಪ್ರಮುಖ ಸ್ಪೆಸಿಫಿಕೇಶನ್‌ಗಳು:

ರೆಡ್‌ಮಿ ನೋಟ್ 9ರಲ್ಲಿ ಆಕ್ಟಾ-ಕೋರ್ ಮೀಡಿಯಾಟೆಕ್ ಹೀಲಿಯೊ ಜಿ85ರಲ್ಲಿ ಎರಡು ಕಾರ್ಟೆಕ್ಸ್-ಎ75 ಕೋರ್‌ಗಳಿದ್ದು, 2.0 ಗಿಗಾಹರ್ಟ್ಸ್‌ವರೆಗೆ ವೇಗ ನೀಡಿದರೆ, ಆರು ಕಾರ್ಟೆಕ್ಸ್-ಎ55 ಕೋರ್‌ಗಳು 1.8 ಗಿಗಾಹರ್ಟ್ಸ್‌ವರೆಗೆ ವೇಗ ನೀಡುತ್ತದೆ. ರೆಡ್‌ಮಿ ನೋಟ್ 8ಕ್ಕೆ ಹೋಲಿಸಿದರೆ ರೆಡ್‌ಮಿ ನೋಟ್ 9 ಕಾರ್ಯಕ್ಷಮತೆಯಲ್ಲಿ ಶೇ.21ರಷ್ಟು ವೃದ್ಧಿಯಿದೆ. ಮಾಲಿ-ಜಿ52 ಮೂಲಕ ಶಕ್ತಿಯುತ ಗೇಮಿಂಗ್ ಅನುಭವ ದೊರೆಯುತ್ತದೆ. ಇದನ್ನು ಫುಲ್ ಎಚ್‌ಡಿ+ ಡಿಸ್‌ಪ್ಲೇಯಲ್ಲಿ ಆನಂದಿಸಬಹುದು.

5020mAh ಬ್ಯಾಟರಿಯು 2 ದಿನಗಳವರೆಗೂ ಚಾರ್ಜ್ ಹೊಂದಿರುತ್ತದೆ. 22.5W ಫಾಸ್ಟ್ ಚಾರ್ಜರ್ (ಬಾಕ್ಸ್‌ನಲ್ಲಿ ಲಭ್ಯ) ವೇಗದ ಚಾರ್ಜಿಂಗ್‌ಗೆ ಅನುಕೂಲ ಮಾಡುತ್ತದೆ ಮತ್ತು ಟೈಪ್-ಸಿ ಚಾರ್ಜಿಂಗ್ ಪೋರ್ಟ್ 9W ರಿವರ್ಸ್ ಚಾರ್ಜಿಂಗ್ ಬೆಂಬಲಿಸುತ್ತದೆ. ಮೊದಲ ಬಾರಿಗೆ ರೆಡ್‌ಮಿ ನೋಟ್ 9 ಪ್ರೊ ಸೀರೀಸ್‌ನಲ್ಲಿ ಪರಿಚಯಿಸಲಾಗಿದ್ದ ಔರಾ ವಿನ್ಯಾಸವಿದೆ. 3ಡಿ ಬಾಗಿದ ಕವಚವು ಉತ್ತಮ ಗ್ರಿಪ್ ನೀಡುತ್ತದೆ. 48 ಮೆಗಾಪಿಕ್ಸೆಲ್ ಕ್ವಾಡ್ ಕ್ಯಾಮೆರಾ, 3.5 ಎಂಎಂ ಹೆಡ್‌ಫೋನ್ ಜಾಕ್ ಮತ್ತು ಇನ್‌ಫ್ರಾರೆಡ್ ಸೆನ್ಸರ್ ಇವೆ.

ಕ್ವಾಡ್ ಕ್ಯಾಮೆರಾ ಗುಚ್ಛದಲ್ಲಿ 48 ಎಂಪಿ ಸ್ಯಾಮ್‌ಸಂಗ್ ಐಸೊಸೆಲ್ ಬ್ರೈಟ್ ಜಿಎಂ1, 8 ಎಂಪಿ ಅಲ್ಟ್ರಾವೈಡ್, 2 ಎಂಪಿ ಮ್ಯಾಕ್ರೊ ಮತ್ತು 2 ಎಂಪಿ ಡೆಪ್ತ್ ಸೆನ್ಸರ್‌ಗಳಿವೆ. 13 ಎಂಪಿ ಎಐ ಸೆಲ್ಫಿ ಸೆನ್ಸರ್ ಫ್ರಂಟ್ ಕ್ಯಾಮೆರಾದಲ್ಲಿದೆ.

ರೆಡ್‌ಮಿ ನೋಟ್ 9 ಮುಂಬದಿಯಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5, ಪಿ2ಐ ವಾಟರ್ ರೆಸಿಸ್ಟೆಂಟ್ ಕೋಟಿಂಗ್, 4m ಪೈರೊಲಿಟಿಕ್ ಶೀಟ್ ಇರುವುದರಿಂದ, ನೀರಿನ ಹನಿಗಳಿಂದ ಮತ್ತು ಆಕಸ್ಮಿಕವಾಗಿ ಬೀಳುವಾಗ ರಕ್ಷಣೆ ದೊರೆಯುತ್ತದೆ.

ಲಭ್ಯತೆ

ರೆಡ್‌ಮಿ ನೋಟ್ 9 ಪೆಬಲ್ ಗ್ರೇ, ಆರ್ಕ್ಟಿಕ್ ವೈಟ್ ಮತ್ತು ಅಕ್ವಾ ಗ್ರೀನ್ ಬಣ್ಣಗಳಲ್ಲಿ 4 ಜಿಬಿ+64 ಜಿಬಿ, 4ಜಿಬಿ+128 ಜಿಬಿ ಮತ್ತು 6ಜಿಬಿ+128 ಜಿಬಿ ಸ್ಟೋರೇಜ್ ವೇರಿಯೆಂಟ್‌ಗಳಲ್ಲಿ ಕ್ರಮವಾಗಿ ರೂ.11,999, ರೂ.13,499 ಮತ್ತು ರೂ.14,999 ಗಳಲ್ಲಿ ಎಂಐ.ಕಾಂ, ಅಮೆಜಾನ್ ಇಂಡಿಯಾ, ಎಂಐ ಹೋಮ್ಸ್ ಮತ್ತು ಎಂಐ ಸ್ಟುಡಿಯೋಸ್‌ಗಳಲ್ಲಿ ಲಭ್ಯ ಇವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು