ಭಾರತೀಯ ಫೋನ್ ಮಾರುಕಟ್ಟೆಯಲ್ಲಿ ಪಾಲು ಹೆಚ್ಚಿಸಿಕೊಳ್ಳಲು ಸತತ ಪ್ರಯತ್ನದಲ್ಲಿರುವ ಆ್ಯಪಲ್ ಕಂಪನಿಯು, ಆ್ಯಪಲ್ ಐಫೋನ್ 16ಇ ಹೆಸರಿನಲ್ಲಿ ಇತ್ತೀಚೆಗೆ ವಿನೂತನ ಹಾಗೂ ಉಳಿದ ಐಫೋನ್ಗಳಿಗೆ ಹೋಲಿಸಿದರೆ ಅಗ್ಗದ ಫೋನ್ ಅನ್ನು ಕಳೆದ ತಿಂಗಳು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಎರಡು ವಾರಗಳ ಕಾಲ ಅದನ್ನು ಬಳಸಿ ನೋಡಿದಾಗ ಕಂಡುಬಂದ ವಿಚಾರಗಳು ಇಲ್ಲಿವೆ.

ಆ್ಯಪಲ್ನ ಹೊಸ 16 ಸರಣಿಯ ಐಫೋನ್ಗಳಲ್ಲೇ ಅಗ್ಗವಾಗಿರುವುದು 16ಇ. ಕೆಲವು ವರ್ಷಗಳ ಹಿಂದೆ ಎಸ್ಇ (ಸ್ಪೆಶಲ್ ಎಡಿಶನ್) ಹೆಸರಿನಲ್ಲಿ ಅಗ್ಗದ ಐಫೋನ್ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದ ಆ್ಯಪಲ್, ಈ ಬಾರಿ ಸಂಖ್ಯೆಯೊಂದಿಗೆ 'ಇ' ಸೇರಿಸಿ, ಹೊಸ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ವಿನ್ಯಾಸ

ನೋಡಿದ ತಕ್ಷಣ ಗಮನ ಸೆಳೆಯುವುದೆಂದರೆ, ಇದರಲ್ಲಿರುವುದು ಒಂದೇ ಪ್ರಧಾನ ಕ್ಯಾಮೆರಾ. 6.1 ಇಂಚಿನ OLED ಡಿಸ್ಪ್ಲೇ ಸ್ಕ್ರೀನ್, 167 ಗ್ರಾಂ ತೂಕವಿದೆ. ಐಫೋನ್ 16 ಸರಣಿಯ ಇತರ ಮಾದರಿಗಳಿಗೆ (ಐಫೋನ್, ಪ್ರೋ, ಪ್ರೋ-ಮ್ಯಾಕ್ಸ್) ಹೋಲಿಸಿದರೆ, ಸ್ಕ್ರೀನ್ ಮೇಲೆ ಮುಂಭಾಗದ ಕ್ಯಾಮೆರಾ ಇರುವ ಮಧ್ಯಭಾಗದಲ್ಲಿ ಡೈನಮಿಕ್ ಐಲೆಂಡ್ ಎಂಬ, ಗಾತ್ರ ಬದಲಾಗುವ ಖಾಲಿ ಜಾಗದ ಬದಲಾಗಿ ಇಲ್ಲಿ ಹಳೆಯ ಫೋನ್ಗಳಲ್ಲಿರುವ ನಾಚ್ (ನಿಶ್ಚಿತ ಗಾತ್ರ) ಇದೆ. ಇದಲ್ಲದೆ, ಆ್ಯಕ್ಷನ್ ಬಟನ್ ಕೂಡ ಇದ್ದು, ಇದನ್ನು ನಮಗೆ ಬೇಕಾದ ಆ್ಯಪ್ ಅಥವಾ ಸೆಟ್ಟಿಂಗ್ನ ಶಾರ್ಟ್ಕಟ್ ಆಗಿ ಬಳಸಬಹುದು. ಅಂದರೆ, ಕ್ಯಾಮೆರಾ ತೆರೆಯಲು, ಸೈಲೆಂಟ್ ಮಾಡಲು ಅಥವಾ ವಿನೂತನವಾದ ವಿಶುವಲ್ ಇಂಟೆಲಿಜೆನ್ಸ್ ಎಂಬ ವೈಶಿಷ್ಟ್ಯವನ್ನು ಬಳಸಲು ಈ ಬಟನನ್ನು ಹೊಂದಿಸಬಹುದು.

ಯುಎಸ್ಬಿ-ಸಿ ಪೋರ್ಟ್ ಚಾರ್ಜಿಂಗ್ ವ್ಯವಸ್ಥೆಯಿದ್ದು, ಒಳಗೆ ಅತ್ಯಾಧುನಿಕವಾದ ಎ18 ಚಿಪ್ ಹೊಂದಿರುವುದು ವಿಶೇಷ. ಐಫೋನ್ 11 ಸರಣಿಯಲ್ಲಿ ಬಳಸಲಾಗಿದ್ದ ಎ13 ಬಯೋನಿಕ್ ಚಿಪ್ಗಿಂತ ಇದು ಸುಮಾರು ಶೇ.80ರಷ್ಟು ವೇಗವಾಗಿರುತ್ತದೆ ಎಂದು ಆ್ಯಪಲ್ ಹೇಳಿಕೊಂಡಿದೆ. ಅಂದರೆ, ಸುಮಾರು ಐದು ವರ್ಷಗಳ ಹಿಂದಿನ ಆ್ಯಪಲ್ ಫೋನ್ ಬಳಸುವವರು ಅತ್ಯಾಧುನಿಕ ವೈಶಿಷ್ಟ್ಯಗಳುಳ್ಳ 16ಇಗೆ ಬದಲಾಗಬಹುದು ಎಂಬ ಸಂದೇಶವಿಲ್ಲಿದೆ.

ಕ್ಯಾಮೆರಾ

ಫೋಟೋಗ್ರಫಿಗೆ ಇದರಲ್ಲಿ ಐಫೋನ್ 16ರಲ್ಲಿ ಇರುವಂಥದ್ದೇ 48 ಮೆಗಾಪಿಕ್ಸೆಲ್ ಫ್ಯೂಶನ್ ಕ್ಯಾಮೆರಾ ಇದೆ. ಆದರೆ, ಒಂದೇ ಲೆನ್ಸ್ ಮತ್ತು ಇದರ ಗಾತ್ರ ಸ್ವಲ್ಪ ಚಿಕ್ಕದು. ಇದರಲ್ಲಿ 2x ಟೆಲಿಫೋಟೋ ಝೂಮ್ ವ್ಯವಸ್ಥೆಯಿದೆ. ಇದು 16 ಸರಣಿಯ ಇತರ ಫ್ಲ್ಯಾಗ್ಶಿಪ್ ಐಫೋನ್ಗಳಿಗಿಂತ ಸ್ವಲ್ಪ ಕಡಿಮೆ ಸಾಮರ್ಥ್ಯ ಎಂದುಕೊಂಡರೂ, ಇದರಲ್ಲಿ ಸೆರೆಹಿಡಿದ ಚಿತ್ರಗಳು ಮತ್ತು ವಿಡಿಯೊಗಳ ಗುಣಮಟ್ಟ ಚೆನ್ನಾಗಿಯೇ ಇವೆ. 10x ಡಿಜಿಟಲ್ ಝೂಮ್ ಇದೆ. ಜೊತೆಗೆ, ಪೋರ್ಟ್ರೇಟ್, ಪನೋರಮಾ, ನೈಟ್ ಮೋಡ್, ಸ್ಲೋಮೋಷನ್, ಟೈಮ್ ಲ್ಯಾಪ್ಸ್ ಮೋಡ್ಗಳಿವೆ. ಡೀಫಾಲ್ಟ್ ಆಗಿ 24 ಮೆಗಾಪಿಕ್ಸೆಲ್ನಲ್ಲಿ ಫೋಟೊಗಳು ಸೆರೆಯಾಗುತ್ತವೆ. ಹೆಚ್ಚಿನ ಪಿಕ್ಸೆಲ್ ಬೇಕಿದ್ದರೆ, ಸೆಟ್ಟಿಂಗ್ನಲ್ಲಿ ಕ್ಯಾಮೆರಾ ಆ್ಯಪ್ಗೆ ಹೋಗಿ, 'ಫಾರ್ಮ್ಯಾಟ್ಸ್' ಎಂಬಲ್ಲಿ ನೋಡಿದರೆ, 'ರೆಸೊಲ್ಯುಶನ್ ಕಂಟ್ರೋಲ್' ಮೂಲಕ 48 ಮೆಗಾಪಿಕ್ಸೆಲ್ಗೆ ಹೊಂದಿಸುವ ಆಯ್ಕೆಯನ್ನು ಗಮನಿಸಬಹುದು.

ಸೆಲ್ಫಿಗಾಗಿ ಮತ್ತು ವಿಡಿಯೊ ಕಾನ್ಫರೆನ್ಸ್ಗಳಿಗಾಗಿ ಮುಂಭಾಗದಲ್ಲಿ 12 ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾ ಇದೆ. ಇದರಲ್ಲಿ ಆಟೋ-ಫೋಕಸ್ ವೈಶಿಷ್ಟ್ಯವೂ, ಡಾಲ್ಬಿ-ವಿಶನ್-4ಕೆ ಸಾಮರ್ಥ್ಯದ ವಿಡಿಯೊ ರೆಕಾರ್ಡಿಂಗ್ ಸಾಮರ್ಥ್ಯವೂ ಇರುವುದು ವಿಶೇಷ. ಫೇಸ್ ಐಡಿ ಮೂಲಕ ಸ್ಕ್ರೀನ್ ಅನ್ಲಾಕ್ ವ್ಯವಸ್ಥೆಯಿದೆ.

ಬ್ಯಾಟರಿ ಧಾರಣಾ ಸಾಮರ್ಥ್ಯ ಎಷ್ಟೆಂಬುದನ್ನು ಆ್ಯಪಲ್ ಬಹಿರಂಗಪಡಿಸಿಲ್ಲವಾದರೂ, ಐಫೋನ್ 14 ಪ್ರೊ, ಐಫೋನ್ 15 ಹಾಗೂ ಐಫೋನ್ 16 ಸರಣಿಯ 6.1 ಇಂಚಿನ ಯಾವುದೇ ಫೋನ್ಗಿಂತ ಹೆಚ್ಚು ಸಾಮರ್ಥ್ಯ ಹೊಂದಿದೆ ಎಂದು ಆ್ಯಪಲ್ ಹೇಳಿಕೊಂಡಿದೆ. ಸಾಮಾನ್ಯ ಬಳಕೆಗೆ ಎರಡು ದಿನ ಚಾರ್ಜ್ ಮಾಡಬೇಕಾಗಿಬರಲಿಲ್ಲ. ನಿರಂತರವಾಗಿ ವಿಡಿಯೊ ನೋಡಿದರೆ ಸುಮಾರು 26 ಗಂಟೆ ಬ್ಯಾಟರಿಗೆ ಸಮಸ್ಯೆಯಿಲ್ಲ.

ಇದೇ ಮೊದಲ ಬಾರಿಗೆ ಆ್ಯಪಲ್ ತಾನೇ ತಯಾರಿಸಿರುವ ಸಿ1 ಮೋಡೆಮ್ ಅನ್ನು ಈ ಫೋನ್ನಲ್ಲಿ ಅಳವಡಿಸಿದೆ. ಇದು ಬ್ಯಾಟರಿ ಬಾಳಿಕೆಯನ್ನು ಹೆಚ್ಚಿಸುತ್ತದೆ ಎನ್ನಲಾಗುತ್ತಿದೆ. ಈಗಿನ ಐಫೋನ್ಗಳಲ್ಲಿರುವಂತೆ ವೈರ್ಲೆಸ್ ಚಾರ್ಜಿಂಗ್ಗೆ 'ಮ್ಯಾಗ್ಸೇಫ್' ಬೆಂಬಲವಿಲ್ಲವಾದರೂ, ಬಿದ್ದರೆ ಅಥವಾ ಅಪಘಾತವಾದರೆ ಸ್ವಯಂಚಾಲಿತವಾಗಿ ಮೊದಲೇ ನಿಗದಿಪಡಿಸಿದ ಫೋನ್ ಸಂಖ್ಯೆಗಳಿಗೆ ತುರ್ತು ಸಂದೇಶ ರವಾನಿಸುವ ವ್ಯವಸ್ಥೆಯಿದೆ.

ಆ್ಯಪಲ್ ಇಂಟೆಲಿಜೆನ್ಸ್ಗೆ ಸಿದ್ಧ

ಐಫೋನ್ 16ಇ ಮುಂದೆ ಬರಲಿರುವ ಐಒಎಸ್ 18.4 ಅಪ್ಡೇಟ್ ಮೂಲಕ ಭಾರತದ ಎಲ್ಲ ಗ್ರಾಹಕರಿಗೂ ದೊರೆಯಲಿರುವ ಆ್ಯಪಲ್ ಇಂಟೆಲಿಜೆನ್ಸ್ಗೆ ಸಂಪೂರ್ಣವಾಗಿ ಸಜ್ಜಾಗಿದೆ. ಆ್ಯಪಲ್ ಇಂಟೆಲಿಜೆನ್ಸ್ ಎಂಬ ಜೆನರೇಟಿವ್ ಕೃತಕ ಬುದ್ಧಿಮತ್ತೆ ವ್ಯವಸ್ಥೆಯಲ್ಲಿ ಚಾಟ್ಜಿಪಿಟಿ ಕೂಡ ಅಡಕವಾಗಿರುವುದು ವಿಶೇಷ. ಜೊತೆಗೆ, ಜೆನ್ಮೋಜಿ (ಇಮೋಜಿ ರಚಿಸುವುದು), ಬರೆಯುವ ಟೂಲ್ಗಳು, ವಿಶುವಲ್ ಇಂಟೆಲಿಜೆನ್ಸ್ ವ್ಯವಸ್ಥೆಯೂ ಈ ಆ್ಯಪಲ್ ಇಂಟೆಲಿಜೆನ್ಸ್ನಲ್ಲಿ ಅಡಕವಾಗಿದ್ದು, ಹೊಸ ಅಪ್ಡೇಟ್ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಕಾರ್ಯನಿರ್ವಹಣೆ

ಎ18 ಬಯೋನಿಕ್ ಚಿಪ್ ಹಾಗೂ ಅತ್ಯಾಧುನಿಕ ಐಒಎಸ್ 18 ಕಾರ್ಯಾಚರಣಾ ವ್ಯವಸ್ಥೆಯೊಂದಿಗೆ, 6 ಕೋರ್ ಸಿಪಿಯು ಮತ್ತು 16-ಕೋರ್ ನ್ಯೂರಲ್ ಎಂಜಿನ್ ಇರುವುದರಿಂದಾಗಿ, ಫ್ಲ್ಯಾಗ್ಶಿಪ್ ಫೋನ್ಗಳಂತೆಯೇ ವೇಗದ ಕಾರ್ಯಾಚರಣೆ ಸಾಧ್ಯವಾಗಿದೆ. ಹೆಚ್ಚು ತೂಕದ ಅಂದರೆ ಗ್ರಾಫಿಕ್ಸ್ ಹೆಚ್ಚಿರುವ ಗೇಮ್ಸ್ ಆಡುವ ಸಂದರ್ಭದಲ್ಲಿ ಕೂಡ ಯಾವುದೇ ರೀತಿಯ ವಿಳಂಬ (ಲೇಟೆನ್ಸಿ) ಕಾಣಿಸಿಕೊಂಡಿಲ್ಲ. ಕೃತಕ ಬುದ್ಧಿಮತ್ತೆಯೂ ಅಳವಡಿಕೆಯಾಗುವುದರಿಂದ, ಹೊಸ ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಆ್ಯಪಲ್ ಐಫೋನ್ ಹೊಂದುವ ಆಸೆ ಇರುವವರಿಗೆ ₹59,900ರಿಂದ ಆರಂಭವಾಗುವ ಬೆಲೆಯಲ್ಲಿ ಇದು ಇಷ್ಟವಾಗಬಹುದು. ಅದರಲ್ಲಿಯೂ, ನಮಗೆ ಬೇಕಾದ ಪಠ್ಯ ರೂಪಿಸಿಕೊಡಬಲ್ಲ ಆ್ಯಪಲ್ ಇಂಟೆಲಿಜೆನ್ಸ್, ಬೇಕಾದ ರೀತಿಯಲ್ಲಿ ಚಿತ್ರ ರೂಪಿಸಿಕೊಡಬಲ್ಲ ವಿಶುವಲ್ ಇಂಟೆಲಿಜೆನ್ಸ್ ಶೀಘ್ರದಲ್ಲೇ (ಅಂದರೆ ಏಪ್ರಿಲ್ ತಿಂಗಳಲ್ಲಿ ಐಒಎಸ್ 18.4 ಆವೃತ್ತಿ) ಈ ಫೋನ್ನಲ್ಲಿಯೂ ದೊರೆಯಲಿದೆ, ಚಾಟ್ಜಿಪಿಟಿ ಪ್ರತ್ಯೇಕ ಇನ್ಸ್ಟಾಲ್ ಮಾಡಿಕೊಳ್ಳಬೇಕಿಲ್ಲ ಎಂಬುದೇ ಇದರ ಬಗೆಗೆ ನಿರೀಕ್ಷೆ ಹೆಚ್ಚಿಸಿದೆ.

ಆ್ಯಪಲ್ ಇಂಟೆಲಿಜೆನ್ಸ್ ಹೇಗೆ ಕೆಲಸ ಮಾಡುತ್ತದೆ?

ಆ್ಯಪಲ್ ಐಫೋನ್ 16ಇ ಫೋನ್ನಲ್ಲಿ ಕೃತಕ ಬುದ್ಧಿಮತ್ತೆಯ ವೈಶಿಷ್ಟ್ಯವನ್ನು ಅಳವಡಿಸಿದ್ದನ್ನು ನೋಡುವ ಅವಕಾಶವು ನಮಗೆ ದೊರೆತಿತ್ತು. ಸರಳವಾದ ಕೆಲವು ಪ್ರಾಂಪ್ಟ್ ನೀಡಿ, ನಮ್ಮಿಷ್ಟದ ಜೆನ್ಮೋಜಿ ರಚಿಸಬಹುದು, ನಮಗೆ ಬೇಕಾದ ಚಿತ್ರ ರಚಿಸಬಹುದು, ನೋಟ್ಸ್ ಆ್ಯಪ್ ಮೂಲಕ ಬರೆಯಬಹುದು, ಆನ್ಲೈನ್ ಸಂಶೋಧನೆ ನಡೆಸಬಹುದು ಮತ್ತು ಬರೆಹವನ್ನು ಸುಧಾರಿಸಬಹುದು. ಚಾಟ್ಜಿಪಿಟಿ ಡೌನ್ಲೋಡ್ ಅಗತ್ಯವಿಲ್ಲದೆಯೇ ಇವೆಲ್ಲ ಸಾಧ್ಯವಾಗಿದೆ. ವಿಶುವಲ್ ಇಂಟೆಲಿಜೆನ್ಸ್ ಮೂಲಕ, ಕ್ಯಾಮೆರಾ ಲೆನ್ಸನ್ನು ಯಾವುದೇ ವಸ್ತುವಿನತ್ತ ತಿರುಗಿಸಿದರೆ, ತಕ್ಷಣವೇ ಅದರ ಕುರಿತು ಮಾಹಿತಿ ದೊರೆಯುವಂತಾಗುತ್ತದೆ. ಆಂಡ್ರಾಯ್ಡ್ ಫೋನ್ಗಳಲ್ಲಿ ಕಂಡುಬರುವ ಗೂಗಲ್ ಲೆನ್ಸ್ ಮಾದರಿಯಲ್ಲಿ ಚಿತ್ರದಿಂದ ಪಠ್ಯ ಬೇರ್ಪಡಿಸುವ, ಚಿತ್ರವನ್ನು ಗುರುತು ಹಿಡಿದು, ಅದರ ಬಗ್ಗೆ ಅಂತರಜಾಲದಲ್ಲಿ ಹುಡುಕಿ ಅದರ ಕುರಿತು ಮಾಹಿತಿಯನ್ನು ಧುತ್ತನೇ ನೀಡುವ ಕೆಲಸಲನ್ನು ಇದೂ ಕೆಲಸ ಮಾಡುತ್ತದೆ.

ಕನ್ನಡಕ್ಕೆ ಬಲ

ಇಷ್ಟೇ ಅಲ್ಲದೆ, ಹೊಸ ಅಪ್ಡೇಟ್ನಲ್ಲಿ ಕನ್ನಡ ಸಹಿತ ಹಲವಾರು ಭಾರತೀಯ ಭಾಷೆಗಳಲ್ಲಿ ಪೂರ್ಣವಾಗಿ ಆ್ಯಪಲ್ ಐಫೋನ್ ಅನ್ನು ನೋಡಬಹುದು. ಅಂದರೆ ಐಫೋನ್ನ ಯೂಸರ್ ಇಂಟರ್ಫೇಸ್ ಅನ್ನು ಪೂರ್ತಿಯಾಗಿ ಕನ್ನಡಕ್ಕೆ ಹೊಂದಿಸಬಹುದು. ಇದಲ್ಲದೆ, ಫೋನ್ನಲ್ಲಿ ಈಗಾಗಲೇ ಲಿಪ್ಯಂತರಣ (ಟ್ರಾನ್ಸ್ಲಿಟರೇಶನ್), ಇನ್ಸ್ಕ್ರಿಪ್ಟ್ ಹಾಗೂ ವರ್ಣಮಾಲೆಯುಳ್ಳ ಮೂರು ಕನ್ನಡ ಕೀಬೋರ್ಡ್ಗಳು ಅಂತರ್ನಿರ್ಮಿತವಾಗಿಯೇ ಇವೆ. ಕನ್ನಡ ಟೈಪ್ ಮಾಡಲು ಯಾವುದು ಸುಲಭವೋ, ಅದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಐಫೋನ್ 16ಇ ಹೇಗಿದೆ? ಬೆಲೆ ಎಷ್ಟು?

60 ಸಾವಿರ ರೂ. ಒಳಗೆ, ಬಹುನಿರೀಕ್ಷೆಯ ಕೃತಕ ಬುದ್ಧಿಮತ್ತೆಯ ಆ್ಯಪಲ್ ಇಂಟೆಲಿಜೆನ್ಸ್ ಮತ್ತು ವಿಶುವಲ್ ಇಂಟೆಲಿಜೆನ್ಸ್ ಸಹಿತವಾಗಿ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವ ಹೊಸ ಐಫೋನ್ ಸಿಗುತ್ತಿದೆ. ಆ್ಯಪಲ್ 16 ಸರಣಿಯ ಫೋನ್ಗಳಲ್ಲಿ ಇದು ಅತ್ಯಂತ ಅಗ್ಗದ ಫೋನ್ ಆಗಿದ್ದರೂ, ಕಾರ್ಯಾಚರಣೆ, ವೇಗದಲ್ಲಿ ದೊಡ್ಡ ಮಟ್ಟದ ವ್ಯತ್ಯಾಸವೇನೂ ಇಲ್ಲ. ದರ: ಸ್ಟೋರೇಜ್ ಸಾಮರ್ಥ್ಯದ ಆಧಾರದಲ್ಲಿ ದರ ವ್ಯತ್ಯಾಸವಿದೆ. 128GB ಫೋನ್ಗೆ ₹59,900, 256GB ಗೆ ₹69,900 ಹಾಗೂ 512GB ಸಾಮರ್ಥ್ಯದ ಐಫೋನ್ 16ಇ ಬೆಲೆ ₹89,900.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.