ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಾರ್‌ ಆರ್ಬಿಟರ್‌ನ ಫ್ಲೈಬೈ ಸಾಹಸ: ಬಾಹ್ಯಾಕಾಶ ತ್ಯಾಜ್ಯಕ್ಕೆ ಡಿಕ್ಕಿಯಾಗುವ ಅಪಾಯ

Last Updated 27 ನವೆಂಬರ್ 2021, 12:31 IST
ಅಕ್ಷರ ಗಾತ್ರ

ಯುರೋಪಿಯನ್‌ ಸ್ಪೇಸ್‌ ಏಜೆನ್ಸಿಯ 'ಸೋಲಾರ್‌ ಆರ್ಬಿಟರ್‌' ಉಪಗ್ರಹ ನ.27ರಂದು ಅಪಾಯಕಾರಿ ಸಾಹಸಕ್ಕೆ ಮುಂದಾಗಿದೆ. ಭೂಮಿಯಿಂದ ಸುಮಾರು 460 ಕಿ.ಮೀ. ಅಂತರದೊಳಗೆ ಸೋಲಾರ್‌ ಆರ್ಬಿಟರ್‌ ಪ್ರವೇಶಿಸಲಿದೆ. ಹೀಗೆ ಪ್ರವೇಶಿಸಿದಾಗ ಬಾಹ್ಯಾಕಾಶ ತ್ಯಾಜ್ಯಗಳಿಗೆ ಡಿಕ್ಕಿ ಹೊಡೆಯುವ ಸಂಭವ ಇರುವುದರಿಂದ ಇದೊಂದು ಅಪಾಯಕಾರಿ ಸಾಹಸ ಎನ್ನಲಾಗಿದೆ.

ಹೀಗೆ ಭೂಮಿಯ ಸಮೀಪ ಬಂದು ಹೋಗುವ ಪ್ರಕ್ರಿಯೆಯನ್ನು ಫ್ಲೈಬೈ ಎಂದು, 285 ಮೈಲಿ ಅಂತರದೊಳಗಿನ ಬಾಹ್ಯಾಕಾಶ ಪ್ರದೇಶವನ್ನು 'ಲೋ ಅರ್ಥ್‌ ಆರ್ಬಿಟ್‌(ಎಲ್‌ಇಒ) ಪ್ರದೇಶ' ಎಂದು ಕರೆಯಲಾಗುತ್ತದೆ. ಭೂಮಿಯ ಮೇಲ್ಮೈಯಿಂದ 250 ಕಿ.ಮೀ. ಮತ್ತು 2,000 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಎಲ್‌ಇಒ ಎನ್ನಲಾಗುತ್ತದೆ. ಈ ಪ್ರದೇಶದಲ್ಲೇ ಅಂತರರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಸೇರಿದಂತೆ ಇತರ ಉಪಗ್ರಹಗಳನ್ನು ಕಾಣಬಹುದಾಗಿದೆ.

ಸೋಲಾರ್‌ ಆರ್ಬಿಟರ್‌ನ ಈ ಸಾಹಸದ ಹಿಂದೆ ಸೂರ್ಯನೆಡೆಗಿನ ಪಥವನ್ನು ಸರಿದೂಗಿಸಿಕೊಂಡು, ಸೂರ್ಯನನ್ನು ಕೂಲಂಕಷವಾಗಿ ಅಧ್ಯಯನ ಮಾಡುವ ಗುರಿಯಿದೆ. ಭೂಮಿಯ ಸಮೀಪಕ್ಕೆ ಬರುವುದರಿಂದ ಗುರುತ್ವಾಕರ್ಷಣೆಯ ಎಳೆತದ ಶಕ್ತಿಯನ್ನು ಬಳಸಿಕೊಂಡು ಉಪಗ್ರಹದ ವೇಗವನ್ನು ಹೆಚ್ಚಿಸುವುದು ಈ ಪ್ರಯೋಗದ ಗುಟ್ಟು. ಇದರಿಂದ ಸೋಲಾರ್‌ ಆರ್ಬಿಟರ್‌ನ ಚಿಮ್ಮುವಿಕೆ ಮತ್ತು ಮುನ್ನುಗ್ಗುವ ವೇಗ ಹೆಚ್ಚುತ್ತದೆ. ಸಾಧ್ಯವಾದಷ್ಟು ಸೂರ್ಯನ ಸಮೀಪಕ್ಕೆ ಹೋಗಿ ಅಧ್ಯಯನಕ್ಕೆ ಸಹಕರಿಸುತ್ತದೆ.

'ಸೋಲಾರ್‌ ಆರ್ಬಿಟರ್‌' ಸೂರ್ಯನ ಮೇಲೆ ಅಧ್ಯಯನ ನಡೆಸುತ್ತಿರುವ ಯುರೋಪಿಯನ್‌ ಸ್ಪೇಸ್‌ ಏಜೆನ್ಸಿಯ ಉಪಗ್ರಹವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT