ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19: ಜನರ ಸಂದೇಹಗಳಿಗೆ ಟ್ವಿಟರ್‌ನಲ್ಲೇ ಪರಿಹಾರ ನೀಡುತ್ತೆ ಆರೋಗ್ಯ ಸಚಿವಾಲಯ

Last Updated 22 ಏಪ್ರಿಲ್ 2020, 4:03 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಾದ್ಯಂತ ಕೊರೊನಾ ವೈರಸ್‌ ಸೋಂಕಿನಿಂದಾಗಿ ಎದುರಾಗಿರುವ ಬಿಕ್ಕಟಿನ ಸಮಯದಲ್ಲಿ ಜನರಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಮೂಡುವ ಪ್ರಶ್ನೆಗಳು ಹಾಗೂ ಸಂದೇಹಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಟ್ವಿಟರ್‌ನಲ್ಲೇ ಉತ್ತರಿಸುತ್ತದೆ. ಅದಕ್ಕಾಗಿಯೇ 'ಕೋವಿಡ್ ಇಂಡಿಯಾ ಸೇವಾ' ಪತ್ರ್ಯೇಕ ಖಾತೆ ಆರಂಭಿಸಿದೆ.

ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ ವರ್ಧನ್‌ ಅವರು ಟ್ವೀಟ್ ಮಾಡುವ ಮೂಲಕ @CovidIndiaSeva ಖಾತೆಗೆ ಚಾಲನೆ ನೀಡಿದ್ದಾರೆ. 'ನೇರವಾಗಿ ನಾಗರಿಕರ ಪ್ರಶ್ನೆಗಳಿಗೆ ಕ್ಷಿಪ್ರಗತಿಯಲ್ಲಿ ಪರಿಹಾರವನ್ನು ನೀಡುವಲ್ಲಿ ಕೋವಿಡ್‌ ಇಂಡಿಯಾ ಸೇವೆ ಟ್ವಿಟರ್‌ ಸೇವೆ ಅನುವಾಗಲಿದೆ. ಕೋವಿಡ್‌–19ಗೆ ಸಂಬಂಧಿಸಿದಂತೆ ಸಾರ್ವಜನಿಕ ಆರೋಗ್ಯ ಮಾಹಿತಿ ಹಾಗೂ ಸಲಹೆಗಳನ್ನು ತಜ್ಞರು ನೀಡುತ್ತಾರೆ.' ಎಂದು ಟ್ವೀಟಿಸಿದ್ದಾರೆ.

ಸರ್ಕಾರ ಇತ್ತೀಚೆಗೆ ಕೈಗೊಂಡಿರುವ ಕ್ರಮಗಳು, ಹೊಸ ಅಪ್‌ಡೇಟ್‌ಗಳು, ಆರೋಗ್ಯ ಶುಶ್ರೂಷ ಸೇವೆಗಳಿಗೆ ಪ್ರವೇಶ ಪಡೆಯುವ ಕುರಿತು, ರೋಗದ ಲಕ್ಷಣಗಳು ಕಂಡು ಬಂದರೆಯಾರನ್ನು ಸಂಪರ್ಕಿಸಬೇಕು, ಇಂಥ ಅನುಮಾನಗಳಿಗೆ ಈ ಟ್ವಿಟರ್ ಖಾತೆಯಿಂದ ಸಲಹೆಗಳು ಸಿಗುತ್ತವೆ. ಪ್ರಶ್ನೆ ಅಥವಾ ಸಂದೇಹಗಳಿಗೆ ಅನುಗುಣವಾಗಿ ನಿರ್ದಿಷ್ಟ ಇಲಾಖೆ, ಅಧಿಕಾರಿಗಳು ಅಥವಾ ಪ್ರಾಧಿಕಾರಗಳಿಗೆ ಅದನ್ನು ಹಂಚಿಕೊಳ್ಳುವ ಮೂಲಕ ನಾಗರಿಕರು ಅವರನ್ನು ಸಂಪರ್ಕಿಸಿ ಉತ್ತರ ಪಡೆಯಲು ನೆರವಾಗುತ್ತದೆ.

ಟ್ವಿಟರ್‌ನಲ್ಲಿ @CovidIndiaSeva ಎಂದು ಟೈಪಿಸಿ ಅದರ ಜೊತೆಗೆ ನಿಮ್ಮ ಪ್ರಶ್ನೆಗಳನ್ನು ಕೇಳಬಹುದು. ದೇಶದ ಎಲ್ಲ ಭಾಷೆಗಳಲ್ಲಿಯೂ ಸಂವಹನ ನಡೆಸಲು ಅವಕಾಶವಿದೆ. ಇಲ್ಲಿ ಕೋವಿಡ್‌–19 ಕುರಿತಾದ ಯಾವುದೇ ಪ್ರಶ್ನೆಗಳಿಗೆ ಪರಿಹಾರ ಪಡೆಯಲು ಸಂಪರ್ಕ ವಿವರ, ಗುರುತಿನ ದಾಖಲೆಗಳು, ವೈಯಕ್ತಿಕ ದಾಖಲೆಗಳು ಸೇರಿದಂತೆ ಯಾವುದೇ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳುವುದು ಅಥವಾ ಬಹಿರಂಗ ಪಡಿಸುವ ಅವಶ್ಯಕತೆ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT