ಬುಧವಾರ, ಅಕ್ಟೋಬರ್ 28, 2020
29 °C

ಟ್ವಿಟರ್‌ನಲ್ಲಿ ‘ಗೋಡ್ಸೆ ಜಿಂದಾಬಾದ್’ ಟ್ರೆಂಡಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧಿ ಜನ್ಮದಿನದಂದು ಟ್ವಿಟರ್‌ನಲ್ಲಿ ಸಾವಿರಾರು ಜನ, ಗಾಂಧೀಜಿ ಹಂತಕ ನಾಥೂರಾಮ್‌ ಗೋಡ್ಸೆಗೆ ‘ಜಿಂದಾಬಾದ್‌’ ಹೇಳಿದರು. ‘ಗೋಡ್ಸೆ ಜಿಂದಾಬಾದ್‌’ ಹ್ಯಾಶ್‌ಟ್ಯಾಗ್‌ ಶುಕ್ರವಾರ ಇಡೀ ದಿನ ಟ್ರೆಂಡಿಂಗ್‌ನಲ್ಲಿತ್ತು. 

‘ಭಾರತದ ವಿಭಜಕನಿಗೆ, ಪಾಕಿಸ್ತಾನದ ಪಿತಾಮಹನಿಗೆ ಜನ್ಮದಿನದ ಶುಭಾಶಯ’ ಎಂದು ವಿನಯ್‌ ರಾಯ್ ಎಂಬುವರು ವ್ಯಂಗ್ಯವಾಗಿ ಶುಭಾಶಯ ಕೋರಿದರೆ, ‘ದೇಶವನ್ನು ಕಾಪಾಡಿದವರು ನೀವು ಗೋಡ್ಸೆಜೀ, ಈ ದೇಶ ನಿಮಗೆ ಎಂದಿಗೂ ಆಭಾರಿಯಾಗಿರುತ್ತದೆ’ ಎಂದು ವೀರ್‌ ಗುರ್ಜಾರ್ ಎಂಬುವರು ಟ್ವೀಟ್ ಮಾಡಿದ್ದರು.

‘ಹಿಂದೂ ಹೃದಯಸಾಮ್ರಾಟ ನಾಥೂರಾಮ್‌ ಗೋಡ್ಸೆ, ನಿಮ್ಮ ತ್ಯಾಗಕ್ಕೆ ನಮನ’ ಎಂದು ಮೀರಾ ಎಂಬುವರು ಟ್ವೀಟ್ ಮಾಡಿದರೆ, ‘ಸತ್ಯ ತಿಳಿದುಕೊಳ್ಳಲು ಲಕ್ಷಕ್ಕೂ ಹೆಚ್ಚು ಜನ ಟ್ವೀಟ್‌ ಮಾಡಿದ್ದಾರೆ. ಎಲ್ಲರಿಗೂ ಅಭಿನಂದನೆ’ ಎಂದು ಅಲ್ಟ್ರಾನ್ಯಾಷನಲಿಸ್ಟ್‌ ಹೆಸರಿನಲ್ಲಿ ಟ್ವೀಟ್‌ ಮಾಡಲಾಯಿತು. 

ಶುಕ್ರವಾರ ಸಂಜೆ ವೇಳೆಗೆ 55 ಸಾವಿರ ಟ್ವೀಟ್‌ಗಳು ಈ ಹ್ಯಾಶ್‌ಟ್ಯಾಗ್ ಅಡಿ ಇದ್ದವು.

ಅಸಮಾಧಾನ: ಇದಕ್ಕೆ ಪ್ರತಿಯಾಗಿ ‘ಗೋಡ್ಸೆ ಮುರ್ದಾಬಾದ್‌’ ಹೆಸರಿನಲ್ಲಿಯೂ ಸಾವಿರಾರು ಜನ ಟ್ವೀಟ್‌ ಮಾಡಿದರು. 

‘ಮಹಾತ್ಮಗಾಂಧಿ ಜನ್ಮದಿನದಂದೇ ಭಾರತದಲ್ಲಿ ಗೋಡ್ಸೆ ಜಿಂದಾಬಾದ್‌ ಎನ್ನುವುದು ಟ್ರೆಂಡಿಂಗ್‌ನಲ್ಲಿದೆ. ನಾಥೂರಾಮ್‌ ಗೋಡ್ಸೆ ಆರ್‌ಎಸ್‌ಎಸ್‌ ಮತ್ತು ಬಿಜೆಪಿಗೆ ಗಾಡ್‌ಫಾದರ್‌ ಇದ್ದಂತೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಇದಕ್ಕಿಂತ ಇನ್ನೇನು ನಿರೀಕ್ಷಿಸಲು ಸಾಧ್ಯ’ ಎಂದು ಭಾರ್ತಿ ಸೈನಿ ಎಂಬುವರು ಟ್ವೀಟ್ ಮಾಡಿದ್ದಾರೆ.  

‘ಗೋಡ್ಸೆ ನಮ್ಮ ಆದರ್ಶವಾಗಲು ಸಾಧ್ಯವೇ ಇಲ್ಲ. ಅವನೊಬ್ಬ ಕ್ರಿಮಿನಲ್. ಅದೊಂದೇ ಅವನ ಗುರುತು. ಗಾಂಧೀಜಿ ನಮ್ಮ ಹೀರೊ’ ಎಂದು ಅರ್ಘ್ಯ ಚಟರ್ಜಿ ಟ್ವೀಟ್ ಮಾಡಿದ್ದಾರೆ. 

‘ಒಬ್ಬ ಕೊಲೆಗಡುಕನ ಪರವಾಗಿ ಇಷ್ಟು ಜನ ಟ್ವೀಟ್‌ ಮಾಡಿರುವುದು ನಂಬಲಾಗುತ್ತಿಲ್ಲ’ ಎಂದು ಪ್ರತಿಭಾ ಅಚ್ಚರಿ ವ್ಯಕ್ತಪಡಿಸಿ ಟ್ವೀಟ್ ಮಾಡಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು