ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಹೃದಯಸ್ಪರ್ಶಿ ವಿಡಿಯೊಗಳು ಆಗಾಗ ಕಾಣಿಸಿಕೊಳ್ಳುತ್ತವೆ. ಅದು ಪ್ರಾಣಿಗಳದ್ದೇ ಇರಬಹುದು ಅಥವಾ ಇನ್ನಿತರ ವಿಡಿಯೊಗಳೇ ಆಗಿರಬಹುದು. ಅದರಲ್ಲೂ ಮಾನವನ ಸ್ನೇಹವನ್ನು ಬಯಸುವ ನಾಯಿಗಳ ವಿಡಿಯೊ ಆಗಾಗ ಕಾಣಸಿಗುತ್ತವೆ. ಇದೀಗ ತಾಯಿ ನಾಯಿಯೊಂದು ತನ್ನ ಮರಿಯನ್ನು ವೈದ್ಯರಿದ್ದಲ್ಲಿಗೆ ಕರೆತಂದು ಚಿಕಿತ್ಸೆ ಕೊಡಿಸುತ್ತಿರುವ ವಿಡಿಯೊವೊಂದು ಗಮನ ಸೆಳೆದಿದೆ.

ಟರ್ಕಿಯ ಇಸ್ತಾಂಬುಲ್ ಪ್ರಾಂತ್ಯದಲ್ಲಿ ಸುರಿಯುವ ಮಳೆಯಲ್ಲೇ ನಾಯಿಯೊಂದು ತೀವ್ರವಾಗಿ ಅಸ್ವಸ್ಥಗೊಂಡಿದ್ದ ತನ್ನ ಮರಿಯನ್ನು ಬಾಯಿಯಲ್ಲಿ ಕಚ್ಚಿಕೊಂಡು ಪಶು ವೈದ್ಯಕೀಯ ಆಸ್ಪತ್ರೆಯ ಬಾಗಿಲ ಬಳಿ ತಂದು ಬಿಟ್ಟಿದೆ. ಬಳಿಕ ವೈದ್ಯರು ನಾಯಿಮರಿಯನ್ನು ಉಳಿಸಲು ಪ್ರಯತ್ನಿಸುತ್ತಿದ್ದ ವೇಳೆ ತಾಯಿ ನಾಯಿ ಆತಂಕದಿಂದ ನೋಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಘಟನೆ ಜನವರಿ 13ರಂದು ನಡೆದಿದೆ ಎನ್ನಲಾಗಿದೆ. ನಾಯಿಮರಿಯ ಹೃದಯ ಬಡಿತ ಕಡಿಮೆ ಇತ್ತು. ತಕ್ಷಣ ಚಿಕಿತ್ಸೆ ನೀಡಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ.

ವೈದ್ಯರು ನಾಯಿಮರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ತಾಯಿ ನಾಯಿಯು ಗಮನಿಸುತ್ತಾ ಹತ್ತಿರದಲ್ಲಿಯೇ ಇತ್ತು. ತಾಯಿ ನಾಯಿ ಇತ್ತೀಚೆಗಷ್ಟೇ ಮರಿಗಳಿಗೆ ಜನ್ಮ ನೀಡಿತ್ತು. ಆದರೆ, ಬಹುತೇಕ ಮರಿಗಳು ಮೃತಪಟ್ಟಿವೆ ಎಂದು ಪಶುವೈದ್ಯ ಬಟುರಾಲ್ಪ್ ಓಘನ್ ತಿಳಿಸಿದ್ದಾರೆ.

ಸದ್ಯ ಚಿಕಿತ್ಸೆ ಯಶಸ್ವಿಯಾಗಿದ್ದು, ನಾಯಿ ತನ್ನ ಮರಿಯೊಂದಿಗೆ ಮತ್ತೆ ಸೇರಿಕೊಂಡಿದೆ. ನಾಯಿಮರಿಯ ಆರೋಗ್ಯ ಸುಧಾರಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.