ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಮಹಿಳಾ ದಿನ 2022: ಮಹಿಳೆಯರಿಗೆ ಗೂಗಲ್ ಡೂಡಲ್ ಗೌರವ

Last Updated 8 ಮಾರ್ಚ್ 2022, 7:29 IST
ಅಕ್ಷರ ಗಾತ್ರ

ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಇಂದಿನ ಗೂಗಲ್ ಡೂಡಲ್, ಪ್ರಪಂಚದಾದ್ಯಂತ ಇರುವ ವಿವಿಧ ಸಂಸ್ಕೃತಿಯ ಹಿನ್ನೆಲೆಯುಳ್ಳ ಮಹಿಳೆಯರ ದೈನಂದಿನ ಜೀವನದ ಬಗ್ಗೆ ಒಂದು ಚಿತ್ರಣವನ್ನು ಕಟ್ಟಿಕೊಟ್ಟಿದೆ.

'ಮನೆಯಿಂದ ಕೆಲಸ ಮಾಡುವ ತಾಯಿಯಿಂದ ಹಿಡಿದು ಮುಂದಿನ ಪೀಳಿಗೆಗೆ ತನ್ನ ಕೌಶಲ್ಯಗಳನ್ನು ಕಲಿಸುವ ಮೋಟಾರ್‌ ಸೈಕಲ್ ಮೆಕ್ಯಾನಿಕ್‌ವರೆಗೆ, ಇಂದಿನ ಡೂಡಲ್‌ನಲ್ಲಿ ಚಿತ್ರಿಸಲಾದ ಪ್ರತಿಯೊಂದು ಚಿತ್ರಣವು ಮಹಿಳೆಯರು ತಮ್ಮ ಕುಟುಂಬ ಮತ್ತು ಅವರ ಸಮುದಾಯಗಳಿಗಾಗಿ ಹೇಗೆ ತೆರೆದುಕೊಂಡಿರುತ್ತಾರೆ ಎಂಬುದನ್ನು ತೋರಿಸುತ್ತದೆ' ಎಂದು ಗೂಗಲ್ ಹೇಳಿದೆ.

ಅಂತರರಾಷ್ಟ್ರೀಯ ಮಹಿಳಾ ದಿನದ ಗೂಗಲ್ ಡೂಡಲ್ ಅನ್ನು ಡೂಡಲ್ ಆರ್ಟ್ ಡೈರೆಕ್ಟರ್ ಥೋಕಾ ಮೇರ್ ವಿನ್ಯಾಸಗೊಳಿಸಿದ್ದಾರೆ.

ಇಂದಿನ ಗೂಗಲ್ ಡೂಡಲ್‌ಗೆ ಸ್ಫೂರ್ತಿ ನೀಡಿದ ಅನುಭವಗಳ ಕುರಿತು ಮಾತನಾಡಿದ ಅವರು, 'ಸಾಂಕ್ರಾಮಿಕ ರೋಗದ ಸಮಯದಲ್ಲಿ ಜೀವನ ನಡೆಸುವುದೇ ಎಲ್ಲರಿಗೂ ಕಷ್ಟವಾಗಿ ಪರಿಣಮಿಸಿತ್ತು. ಅದರಲ್ಲೂ ಮಹಿಳೆಯರಿಗೆ ತೀರಾ ಹೊರೆಯಾಗಿತ್ತು. ನಾವು ಸಾಮಾನ್ಯವಾಗಿ ಮಹಿಳೆಯರು ಮತ್ತು ಅವರ ಹಿಂದಿನ ಹಾಗೂ ಸದ್ಯದ ಅವರ ಅದ್ಭುತ ಸಾಧನೆಗಳ ಬಗ್ಗೆ ಮಾತನಾಡುತ್ತೇವೆ. ಯುವತಿಯರಿಗೆ ಸ್ಫೂರ್ತಿ ತುಂಬುತ್ತೇವೆ. ಆದರೆ, ಕಳೆದ ಕೆಲವು ವರ್ಷಗಳ ವಾಸ್ತವವೆಂದರೆ, ತಮ್ಮ ಆದ್ಯತೆಗಳನ್ನು ಬದಿಗಿಟ್ಟು ಇತರರ ಆದ್ಯತೆಗಳಿಗೆ ಹೊಂದಿಕೊಳ್ಳಲು ಮತ್ತು ಅಗತ್ಯವಿರುವ ಇತರರಿಗಾಗಿ ತ್ಯಾಗ ಮಾಡುವಂತೆ ಮಹಿಳೆಯರನ್ನು ಒತ್ತಾಯಿಸಲಾಗಿದೆ' ಎಂದರು.

ಅನಿಮೇಟೆಡ್ ಸ್ಲೈಡ್‌ಶೋ ಮೂಲಕ ಗೂಗಲ್ ಡೂಡಲ್ ಇಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತಿದೆ.

ಪ್ರತಿವರ್ಷ ಮಾರ್ಚ್ 8ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ವಿಶ್ವದಾದ್ಯಂತ ಇರುವ ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಇಂದು ಆಚರಿಸಲಾಗುತ್ತದೆ. ಅಂತರರಾಷ್ಟ್ರೀಯ ಮಹಿಳಾ ದಿನಕ್ಕೆ ಮೊದಲ ಬಾರಿಗೆ ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಟ್ಜರ್‌ಲೆಂಡ್‌ ಗಳಲ್ಲಿ 1911ರ ಮಾರ್ಚ್ 11 ರಂದು ಮನ್ನಣೆ ನೀಡಲಾಯಿತು.

1975ರಲ್ಲಿ ಮೊದಲ ಬಾರಿಗೆ ಅಮೆರಿಕದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.

'ಸುಸ್ಥಿರ ನಾಳೆಗಾಗಿ ಇಂದು ಲಿಂಗ ಸಮಾನತೆ' ಎಂಬುದು ಈ ವರ್ಷದ ಮಹಿಳಾ ದಿನಾಚರಣೆಯ ಥೀಮ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT