ಬೆರಳಂಚಲ್ಲೇ ಲೋಕವನ್ನು ಹಿಡಿದಿಡುವ ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ ಯಾರು ಬೇಕಾದರೂ ದಿಢೀರನೆ ಪ್ರಖ್ಯಾತಿ, ಕುಖ್ಯಾತಿಯನ್ನು ಗಳಿಸಿಬಿಡಬಹುದು. ಎಲ್ಲರ ಕಣ್ಸೆಳೆಯುವ ಬಟ್ಟಲುಗಣ್ಣಿನ ಚಂದದ ಹುಡುಗಿ, ವಕ್ರ ಕಂಠದಿಂದ ಹಾಡುವವರು, ಒಂದೊಳ್ಳೆ ಪ್ರತಿಭೆ, ಯಾರದ್ದೋ ಒಳ್ಳೆಯ ಕೆಲಸ, ಇನ್ಯಾರದ್ದೋ ಕೆಟ್ಟ ಕೆಲಸ... ಹೀಗೆ ನಮ್ಮೆಲ್ಲ ಅಭಿವ್ಯಕ್ತಿಗೂ ವೇದಿಕೆ ಕಲ್ಪಿಸುವ ಸಾಮಾಜಿಕ ಜಾಲತಾಣ, ಅದರಲ್ಲೂ ಈ ರೀಲ್ಸ್ ಲೋಕ ನಮಗರಿವಿಲ್ಲದೇ ನಮ್ಮ ಮೇಲೆ ಬೀರುತ್ತಿರುವ ಪ್ರಭಾವ ದೊಡ್ಡದು. ಹಾಗೇ 2025ರಲ್ಲಿ ವೈರಲ್ ಆದ ನಮ್ಮ ನಡುವಿನ ಆಯ್ದ ಕೆಲವು ಹೆಣ್ಣುಮಕ್ಕಳ ಚಿತ್ರಣ ಇಲ್ಲಿದೆ.
ಆ ವಿಡಿಯೊ ವೈರಲ್ ಆಗಿದ್ದು ಅನಿರೀಕ್ಷಿತ. ಮಧ್ಯಮ ವರ್ಗದ ಕುಟುಂಬದವಳಾದ ನಾನು, ಯಾವ ಭೇದವೂ ಇಲ್ಲದೆ ಎಲ್ಲರನ್ನೂ ಗೌರವಿಸುವ ವಾತಾವರಣದಲ್ಲಿ ಬೆಳೆದವಳು. ಈಗ ಕೆಲಸದ ನಡುವೆ ಬಿಡುವಿದ್ದಾಗ ರೀಲ್ಸ್ ಮಾಡುತ್ತಾ ಖುಷಿಯಾಗಿದ್ದೇನೆ.
ಪುಣ್ಯಾ
ಈಗ ಕೊಂಚ ಕೆಲಸದ ಒತ್ತಡದಲ್ಲಿದ್ದೇನೆ. ಸದ್ಯದಲ್ಲೇ ಮತ್ತೆ ಆ ಮಗುವನ್ನು ಭೇಟಿಯಾಗಲು ಹೊರಟಿರುವೆ.
ಚಂದ್ರಪ್ರಭಾ ಗೌಡ
ದಿತಿ ಒಂದೂವರೆ ವರ್ಷದವಳಿದ್ದಾಗಲೇ ಒಳ್ಳೆಯ ಜ್ಞಾಪಕ ಶಕ್ತಿ ಹೊಂದಿದ್ದಳು. ಅದನ್ನು ಗಮನಿಸಿ ಅವಳಿಗೆ ಮಾರ್ಗದರ್ಶನ ನೀಡಿದೆವು. ಈಗ ಎಲ್ಲೆಡೆ ಜನ ಅವಳನ್ನು ಗುರುತಿಸುತ್ತಾರೆ.