ಪ್ರಯಾಗರಾಜ್: ಕಂದು ಮೈಬಣ್ಣ, ಆಕರ್ಷಕ ಕಣ್ಣುಗಳು, ಮುಗ್ಧ ನಗುವಿನ ಮೂಲಕ ಎಲ್ಲರನ್ನು ಸೆಳೆಯುತ್ತಿರುವ ಈಕೆಯ ಹೆಸರು ಮೊನಾಲಿಸಾ. ಮಧ್ಯಪ್ರದೇಶದ ಇಂದೋರ್ನಿಂದ ಬಂದಿರುವ ಈಕೆ ಮಹಾ ಕುಂಭಮೇಳದಲ್ಲಿ ಜಪಮಾಲೆಗಳನ್ನು ಮಾರುತ್ತಾಳೆ.

ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಈಕೆಯದೇ ಮಾತು. ಆಕೆಯ ಸೌಂದರ್ಯವನ್ನು ಹೊಗಳುವವರು ಒಂದು ಕಡೆಯಾದರೆ, ಅವಳ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸುವವರು ಇನ್ನೊಂದು ಕಡೆ.

ಹೌದು.... ಕುಂಭಮೇಳದಲ್ಲಿ ರುದ್ರಾಕ್ಷಿ, ಜಪಮಾಲೆ ಸೇರಿದಂತೆ ನಾನಾ ರೀತಿಯ ಸರಗಳನ್ನು ಮಾರುತ್ತಿರುವ ಈ ಹುಡುಗಿಯ ವಿಡಿಯೊವೊಂದನ್ನು ಇನ್ಫ್ಲೂಯೆನ್ಸರ್ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೊಗೆ ಸುಮಾರು 1 ಮಿಲಿಯನ್ ವರೆಗೆ ಲೈಕ್ಸ್ ಬಂದಿದ್ದು, ಹಲವು ಶೇರ್ ಕಂಡಿತ್ತು. ಆಕೆಯ ಸರಳ ಸೌಂದರ್ಯವನ್ನು ಮೆಚ್ಚಿರುವ ನೆಟ್ಟಿಗರು ‘ಮಹಾ ಕುಂಭಮೇಳದ ಮೊನಲಿಸಾ’ ಎಂದು ಕರೆದಿದ್ದಾರೆ.

ಮತ್ತೊಂದು ವಿಡಿಯೊದಲ್ಲಿ ಇನ್ಫ್ಲೂಯೆನ್ಸರ್ ಮೊನಾಲಿಸಾ ಬಳಿ ಮದುವೆಯಾಗಿದೆಯಾ? ಎಂದು ಕೇಳಿದ್ದು. ಅದಕ್ಕೆ ಆಕೆ, ‘ನನಗಿನ್ನು 16 ವರ್ಷ...ಇಷ್ಟು ಚಿಕ್ಕ ವಯಸ್ಸಿನಲ್ಲಿ ಯಾಕೆ ಮದುವೆಯಾಗಬೇಕು’ ಎಂದು ಹೇಳಿದ್ದಾಳೆ. ಅಲ್ಲದೇ ಪೋಷಕರು ತೋರಿಸುವ ಹುಡುಗನನ್ನೇ ವರಿಸುವುದಾಗಿಯೂ ಹೇಳಿದ್ದಾಳೆ.

ಏತನ್ಮಧ್ಯೆ, ಮೊನಾಲಿಸಾಳ ದಿಡೀರ್ ಜನಪ್ರಿಯತೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕೆಲವರು, ಆಕೆಯ ಸುತ್ತ ಪುರುಷರು ನಿಂತುಕೊಂಡು ಸೆಲ್ಫಿ ಕ್ಲಿಕ್ಕಿಸುತ್ತಿರುವುದು, ಅವಳ ಬೆನ್ನಟ್ಟಿ ಹೋಗುತ್ತಿರುವುದರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಆಕೆಯ ಖಾಸಗಿತನವನ್ನು ಗೌರವಿಸಿ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.