ಆ್ಯಪಲ್ ಸಾಧನಗಳನ್ನು ಸಂಪೂರ್ಣವಾಗಿ ಭಾರತೀಯ ಭಾಷೆಗಳಿಗೆ ಪರಿವರ್ತಿಸುವ ಸಂಗತಿ ಇತ್ತೀಚೆಗೆ ಗಮನ ಸೆಳೆಯುತ್ತಿದೆ. ಆ್ಯಪಲ್ ಇಂಟೆಲಿಜೆನ್ಸ್ ಕೂಡ ಭಾರತೀಯ ಮನಸ್ಸುಗಳನ್ನು ಆಕರ್ಷಿಸುತ್ತಿದೆ.

ಪ್ರತಿಷ್ಠೆಗೂ ಸುರಕ್ಷತೆಗೂ ಹೆಸರಾಗಿರುವ ಆ್ಯಪಲ್ ಸಾಧನಗಳೀಗ ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಿಗೆ ತಕ್ಕಂತೆ ಸಂಪೂರ್ಣವಾಗಿ ಬದಲಾಗುವಂತಿವೆ. ಈಗಾಗಲೇ ಕನ್ನಡ ಸಹಿತ ಹಲವಾರು ಭಾರತೀಯ ಭಾಷೆಗಳಲ್ಲಿ ಟೈಪ್ ಮಾಡಲು ಅಂತರ್-ನಿರ್ಮಿತ ಕೀಬೋರ್ಡ್ಗಳನ್ನು ಒದಗಿಸಿರುವ ಆ್ಯಪಲ್, ಬಳಕೆದಾರ ಇಂಟರ್ಫೇಸನ್ನೇ ಆಯಾ ಭಾಷೆಗಳಿಗೆ ಬದಲಾಯಿಸುವ ಆಯ್ಕೆಯನ್ನು ಒದಗಿಸಿದೆ.

ಇದರೊಂದಿಗೆ, ಚಾಟ್ಜಿಪಿಟಿ, ಮೆಟಾ ಎಐ, ಕೋಪೈಲಟ್, ಜೆಮಿನಿ ಮುಂತಾದ ಜನರೇಟಿವ್ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನಗಳು ಜನಸಾಮಾನ್ಯರನ್ನು ಆಕರ್ಷಿಸುತ್ತಿರುವ ಹೊತ್ತಿನಲ್ಲೇ 'ಆ್ಯಪಲ್ ಇಂಟೆಲಿಜೆನ್ಸ್' ಎಂಬ ಜನರೇಟಿವ್ ಎಐ ತಂತ್ರಜ್ಞಾನವನ್ನೂ ಭಾರತೀಯರ ಇಷ್ಟಗಳಿಗೆ ಅನುಗುಣವಾಗಿ ಒದಗಿಸಿದೆ.

ಕನ್ನಡಮಯ ಆ್ಯಪಲ್ ಐಫೋನ್

ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಮಾಡಿರುವ ಐಒಎಸ್ 18.4 ಕಾರ್ಯಾಚರಣಾ ವ್ಯವಸ್ಥೆ ಅಪ್ಡೇಟ್ನೊಂದಿಗೆ ಐಫೋನ್, ಐಪ್ಯಾಡ್ ಅಥವಾ ಮ್ಯಾಕ್ ಲ್ಯಾಪ್ಟಾಪ್ಗಳನ್ನು ಸಂಪೂರ್ಣವಾಗಿ ಕನ್ನಡಮಯವಾಗಿಸಿಕೊಳ್ಳಬಹುದು. ಅಂದರೆ ಈಗಾಗಲೇ ಲಭ್ಯವಿರುವ ಲಿಪ್ಯಂತರಣ (ಟ್ರಾನ್ಸ್ಲಿಟರೇಶನ್), ವರ್ಣಮಾಲೆ ಹಾಗೂ ಇನ್ಸ್ಕ್ರಿಪ್ಟ್ ಲೇಔಟ್ ಇರುವ ಕನ್ನಡ ಕೀಬೋರ್ಡ್ಗಳು ಮಾತ್ರವಷ್ಟೇ ಅಲ್ಲದೆ, ಸಂಪೂರ್ಣವಾಗಿ ಬಳಕೆದಾರ ಇಂಟರ್ಫೇಸ್ ಅನ್ನು (ಸೆಟ್ಟಿಂಗ್ಸ್, ಮೆನು, ಆ್ಯಪ್ ಹೆಸರುಗಳು, ಸೂಚನೆ, ಮಾಹಿತಿ, ಅಂಕಿಗಳು ಇತ್ಯಾದಿ) ಕನ್ನಡದಲ್ಲೇ ನೋಡುವಂತೆ ಹೊಂದಿಸಬಹುದು. ಉಳಿದಂತೆ ಬಾಂಗ್ಲಾ, ಗುಜರಾತಿ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಹಾಗೂ ಉರ್ದು ಭಾಷೆಗಳಲ್ಲೂ ಬಳಕೆದಾರ ಇಂಟರ್ಫೇಸ್ ಹೊಂದಿಸಿಕೊಳ್ಳಬಹುದಾಗಿದೆ.

2017ರಲ್ಲಿ ಐಒಎಸ್ 11 ಬಿಡುಗಡೆಯಾದಾಗ ಆ್ಯಪಲ್ ಸಾಧನಗಳಲ್ಲಿ ಕನ್ನಡ ಮತ್ತು ಮಲಯಾಳಂ ಕೀಬೋರ್ಡ್ಗಳು ಅಂತರ್-ನಿರ್ಮಿತವಾಗಿ ಬಂದಿದ್ದವು. ಹಿಂದಿ ಮತ್ತು ತಮಿಳು ಕೀಬೋರ್ಡ್ಗಳು ಅದಕ್ಕೂ ಹಿಂದೆ ಐಒಎಸ್ 7ರಲ್ಲಿ ಹಾಗೂ ತೆಲುಗು, ಪಂಜಾಬಿ, ಗುಜರಾತಿ, ಮರಾಠಿ, ಬಂಗಾಳಿ ಮತ್ತು ಉರ್ದು ಕೀಬೋರ್ಡ್ಗಳು ಐಒಎಸ್ 9ರಲ್ಲಿ ಮತ್ತೀಗ ಅಸ್ಸಾಮಿ, ಬೋಡೋ, ಡೊಗ್ರಿ, ಕಾಶ್ಮೀರಿ, ಕೊಂಕಣಿ, ಮೈಥಿಲಿ, ಮಣಿಪುರಿ, ನೇಪಾಳಿ, ಒಡಿಯಾ, ಸಂಸ್ಕೃತ, ಸಂತಾಲಿ, ಸಿಂಧಿ ಕೀಬೋರ್ಡುಗಳೂ ಇವೆ. ಹೊಸದೇನೆಂದರೆ, ಯೂಸರ್ ಇಂಟರ್ಫೇಸ್ ಕೂಡ ಸಂಪೂರ್ಣವಾಗಿ ಕನ್ನಡ ಮತ್ತಿತರ 10 ಭಾರತೀಯ ಭಾಷೆಗಳಲ್ಲಿ ಕಾಣಿಸಿಕೊಳ್ಳುತ್ತಿದೆ.

ಕನ್ನಡಕ್ಕೆ ಹೀಗೆ ಬದಲಾಯಿಸಿಕೊಳ್ಳಿ

ಐಒಎಸ್ 18.4 (ಈಗಿನದು 18.4.1) ಕಾರ್ಯಾಚರಣಾ ವ್ಯವಸ್ಥೆಯನ್ನು ಸೆಟ್ಟಿಂಗ್ಸ್ > ಜನರಲ್ ಎಂಬಲ್ಲಿ ಸಾಫ್ಟ್ವೇರ್ ಅಪ್ಡೇಟ್ ಸ್ಪರ್ಶಿಸುವ ಮೂಲಕ ಅಪ್ಡೇಟ್ ಮಾಡಿಕೊಳ್ಳಿ. ನಂತರ, ಸೆಟ್ಟಿಂಗ್ಸ್ನಲ್ಲಿ 'ಲ್ಯಾಂಗ್ವೇಜ್&ರೀಜನ್' ಎಂದಿರುವಲ್ಲಿ, Add Language ಮೂಲಕ ಕನ್ನಡ ಅಥವಾ ಬೇರಾವುದೇ ಭಾಷೆಯನ್ನು ಅಳವಡಿಸಿಕೊಳ್ಳಿ. ಉದಾಹರಣೆಗೆ, ಕನ್ನಡ ಅಳವಡಿಸಿದ ಬಳಿಕ, ಅದನ್ನು ಬಲಭಾಗದ ಮೂರು ಗೆರೆಯನ್ನು ಸ್ಪರ್ಶಿಸಿ ಎಳೆಯುವ ಮೂಲಕ (ಅಥವಾ ಬಲ-ಮೇಲ್ಭಾಗದಲ್ಲಿ ಎಡಿಟ್ ಬಟನ್ ಸ್ಪರ್ಶಿಸುವ ಮೂಲಕ) ಮೇಲಕ್ಕೆ ತನ್ನಿ. ಅದುವರೆಗೆ ಪ್ರಧಾನ ಭಾಷೆಯಾಗಿದ್ದ ಇಂಗ್ಲಿಷ್ ಕೆಳಕ್ಕೆ ಹೋಗುತ್ತದೆ. ನಂತರ ಫೋನ್ ರೀಸ್ಟಾರ್ಟ್ ಮಾಡಬೇಕೇ ಎಂದು ಕೇಳುತ್ತದೆ. 'ಕಂಟಿನ್ಯೂ' ಒತ್ತಿದರೆ ಕನ್ನಡ ಭಾಷೆಯನ್ನು ಹೊಂದಿಸಲಾಗುತ್ತದೆ. ಇಡೀ ಫೋನ್ ಕನ್ನಡಕ್ಕೆ ಬದಲಾಗುತ್ತದೆ. ಅದೇ ರೀತಿ, ಭಾಷೆ ಮತ್ತು ಪ್ರದೇಶ ಎಂದಿರುವಲ್ಲಿ, ಸಂಖ್ಯೆಗಳು ಎಂಬಲ್ಲಿ ಹೋದರೆ, ಕನ್ನಡ ಅಂಕಿಗಳಿಗೆ ಬದಲಾಯಿಸಿಕೊಳ್ಳುವ ಆಯ್ಕೆಯೂ ಕಾಣಿಸುತ್ತದೆ. ಹೀಗಾದಾಗ ಐಫೋನ್ನ ಎಲ್ಲ ವಿಷಯ, ಮೆನು, ಆ್ಯಪ್ ಹೆಸರು ಮುಂತಾದವೆಲ್ಲವೂ ಕನ್ನಡದಲ್ಲಿ ಗೋಚರಿಸುತ್ತದೆ. ಬಲದಿಂದ ಎಡಕ್ಕೆ ಸಾಗುವ ಉರ್ದು ಭಾಷೆಯಲ್ಲೂ ಇದೇ ರೀತಿ ಹೊಂದಿಸಿಕೊಳ್ಳಬಹುದು.

ಭಾರತಕ್ಕೆ ಬಂತು ಆ್ಯಪಲ್ ಇಂಟೆಲಿಜೆನ್ಸ್

ಐಒಎಸ್ 18.4 ಅಪ್ಡೇಟ್ನಲ್ಲಿ ಬಹುನಿರೀಕ್ಷಿತ ಆ್ಯಪಲ್ ಇಂಟೆಲಿಜೆನ್ಸ್ ಎಂಬ ಜನರೇಟಿವ್ ತಂತ್ರಜ್ಞಾನವಿದೆ. ಇದರಿಂದ ಸಿರಿ ಎಂಬ ಸಹಾಯಕ ತಂತ್ರಜ್ಞಾನವನ್ನು ಬಳಸಿ, ಫೋನ್ಗೆ ಸೂಚನೆ ನೀಡಿದ ತಕ್ಷಣವೇ ನಮಗೆ ಬೇಕಾದ ಮಾಹಿತಿ, ಪಠ್ಯ, ಅದರ ತಿದ್ದುಪಡಿ, ಚಿತ್ರ ರಚನೆ ಮುಂತಾದವೆಲ್ಲವನ್ನೂ ಸುಲಭವಾಗಿ ನಿರ್ವಹಿಸಬಹುದು. 'ನೋಟ್' ಆ್ಯಪ್ ಮೂಲಕವಾಗಿ ಆ್ಯಪಲ್ ಇಂಟೆಲಿಜೆನ್ಸ್ಗೆ ಜನಪ್ರಿಯ ಚಾಟ್ಜಿಪಿಟಿಯ ನೇರ ಬೆಂಬಲವಿದೆ. ಹೀಗಾಗಿ, ಚಾಟ್ಜಿಪಿಟಿಗೆ ಪ್ರತ್ಯೇಕ ಆ್ಯಪ್ ಅಥವಾ ಚಂದಾದಾರಿಕೆಯಿಲ್ಲದೆಯೇ ಇದನ್ನು ಬಳಸಿ, ತಮ್ಮ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ವೇಗವಾಗಿಸಬಹುದು. ನಿರ್ದಿಷ್ಟ ವಸ್ತು, ವಿಷಯ ಹೇಳಿ, ಇದರ ಬಗೆಗೆ ಕಥೆ ಬರೆದುಕೊಡು ಎಂದರೂ ಐಫೋನ್ನಲ್ಲೇ ಇದು ಸಿದ್ಧವಾಗುತ್ತದೆ.

ಯಾವೆಲ್ಲಾ ಸಾಧನಗಳಿಗೆ ಲಭ್ಯ?

ಐಒಎಸ್ 18, ಐಪ್ಯಾಡ್ಒಎಸ್ 18 ಹಾಗೂ ಮ್ಯಾಕ್ಒಎಸ್ ಸಿಕೋಯಾ (Sequoia) ಕಾರ್ಯಾಚರಣಾ ವ್ಯವಸ್ಥೆಯಿರುವ ಆ್ಯಪಲ್ ಸಾಧನಗಳಲ್ಲಿ ಈ ವಿನೂತನ ಭಾಷಾ ವೈಶಿಷ್ಟ್ಯ ಹಾಗೂ ಸದ್ಯಕ್ಕೆ ಇಂಗ್ಲಿಷ್ನಲ್ಲಿ ಆ್ಯಪಲ್ ಇಂಟೆಲಿಜೆನ್ಸ್ ಕಾಣಸಿಗುತ್ತಿದೆ. ಐಫೋನ್ 16 ಸರಣಿಯ ಎಲ್ಲ ಫೋನ್ಗಳು, ಐಫೋನ್ 15 ಪ್ರೊ ಹಾಗೂ 15 ಪ್ರೊ ಮ್ಯಾಕ್ಸ್, ಐಪ್ಯಾಡ್ ಮಿನಿ ಹಾಗೂ ಎಂ1 ಮತ್ತು ನಂತರದ ಚಿಪ್ಸೆಟ್ ಇರುವ ಎಲ್ಲ ಐಪ್ಯಾಡ್ ಹಾಗೂ ಮ್ಯಾಕ್ ಸಾಧನಗಳಲ್ಲಿ ಕಾರ್ಯಾಚರಣಾ ವ್ಯವಸ್ಥೆ ಅಪ್ಡೇಟ್ ಮಾಡಿಕೊಂಡರೆ, ಈ ಹೊಸ ವೈಶಿಷ್ಟ್ಯಗಳು ದೊರೆಯುತ್ತವೆ.

ಪ್ರಮುಖ ವೈಶಿಷ್ಟ್ಯಗಳು

ಸಿರಿ ಎಂಬ ಧ್ವನಿ ಸಹಾಯಕ ತಂತ್ರಜ್ಞಾನ ಬಳಸಿ, ಆದೇಶಗಳನ್ನು ನೀಡಿ ನಮಗೆ ಬೇಕಾದ ಕೆಲಸಗಳನ್ನು ಅಂತರ್ಜಾಲ ಸಂಪರ್ಕದ ಮೂಲಕವಾಗಿ ಮಾಡಿಕೊಳ್ಳಬಹುದು. ಇದರೊಂದಿಗೆ, ಪ್ಲೇಗ್ರೌಂಡ್ ಎಂಬ ಆ್ಯಪ್ ಮೂಲಕ, ಹಲವು ಥೀಮ್ಗಳ ಬೆಂಬಲದೊಂದಿಗೆ ಆಕರ್ಷಕವಾಗಿ ಚಿತ್ರಗಳನ್ನು ರಚಿಸಬಹುದು ಹಾಗೂ ನಮ್ಮದೇ ಚಿತ್ರಗಳನ್ನು ತಿದ್ದಬಹುದು. ಇದಲ್ಲದೆ, ನೋಟ್ ಆ್ಯಪ್ನಲ್ಲಿ ಚಾಟ್ಜಿಪಿಟಿಗೆ ನೀಡುವ ಕಮಾಂಡ್ಗಳನ್ನು ನೀಡಿ, ಒಂದು ಕಥೆ ಬರೆಯಬಹುದು ಹಾಗೂ ಅದಕ್ಕೆ ಸೂಕ್ತವಾದ ಚಿತ್ರಗಳನ್ನು ರಚಿಸಿಕೊಡುವಂತೆ ನಾವು ಈ ಕೃತಕ ಬುದ್ಧಿಮತ್ತೆ (ಆ್ಯಪಲ್ ಇಂಟೆಲಿಜೆನ್ಸ್) ವ್ಯವಸ್ಥೆಗೆ ಸೂಚಿಸಿದರೆ, ಕ್ಷಣ ಮಾತ್ರದಲ್ಲಿ ಕಥೆಯೂ ಸಿದ್ಧ, ಅದಕ್ಕೆ ಸೂಕ್ತವಾದ ಚಿತ್ರಗಳೂ ಸಿದ್ಧ. ಸೂಕ್ತ ಪ್ರಾಂಪ್ಟ್ ಅಥವಾ ಆದೇಶಗಳನ್ನು ನೀಡಿ ಪಠ್ಯ ಅಥವಾ ಚಿತ್ರವನ್ನು ತಿದ್ದುಪಡಿ ಕೂಡ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.