ಕಾರು ಅಪಘಾತ: ಜೋಡಿಯ ಪ್ರಾಣ ಉಳಿಸಿದ ಆ್ಯಪಲ್ ಐಫೋನ್ ಫೀಚರ್

ಬೆಂಗಳೂರು: ಆ್ಯಪಲ್ ಐಫೋನ್ 14 ಸರಣಿಯಲ್ಲಿ ಹೊಸದಾಗಿ ಕ್ರ್ಯಾಶ್ ಡಿಟೆಕ್ಷನ್ ಫೀಚರ್ ಅನ್ನು ಪರಿಚಯಿಸಿದೆ. ಅಪಘಾತವಾದಾಗ ಅಥವಾ ತುರ್ತು ಸಂದರ್ಭದಲ್ಲಿ ಅದು ನಮ್ಮ ಆಪ್ತರಿಗೆ ಮತ್ತು ತುರ್ತು ಸೇವೆಗಳಿಗೆ ಫೋನ್ ನೆಟ್‌ವರ್ಕ್ ಇಲ್ಲದಿದ್ದರೂ, ಉಪಗ್ರಹ ನೆರವಿನಿಂದ ಮಾಹಿತಿ ನೀಡುತ್ತದೆ. ಜತೆಗೆ, ಸ್ಥಳದ ವಿವರವನ್ನೂ ಒದಗಿಸುತ್ತದೆ.
ಈ ನೂತನ ಫೀಚರ್ ಅಮೆರಿಕದಲ್ಲಿ ಜೋಡಿಯೊಂದರ ಪ್ರಾಣ ಉಳಿಸಿದೆ. ಕ್ಲಾಯ್ ಫೀಲ್ಡ್ಸ್ ಮತ್ತು ಕ್ರಿಸ್ಟಿನ್ ಝೆಲಾಡ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ 300 ಅಡಿ ಆಳದ ಕಣಿವೆಗೆ ಬಿದ್ದಿತ್ತು.
ಕಾರು ಕಣಿವೆಯಲ್ಲಿ ಸಿಲುಕಿಕೊಂಡಿದ್ದು, ಅದರೊಳಗಿಂದ ಜೋಡಿ ಹೊರಗಡೆ ಬರಲು ಸಾಧ್ಯವಾಗಿಲ್ಲ. ಅಲ್ಲದೆ, ತುರ್ತು ಕರೆ ಮಾಡಲು ಕೂಡ ಅವಕಾಶ ದೊರಕಿಲ್ಲ.
ಅದೃಷ್ಟವಶಾತ್, ಕ್ರಿಸ್ಟಿನ್ ಬಳಿಯಿದ್ದ ಆ್ಯಪಲ್ ಐಫೋನ್ 14, ಅದಾಗಲೇ ಕಾರು ಅಪಘಾತಕ್ಕೀಡಾಗಿರುವುದನ್ನು ಪತ್ತೆಹಚ್ಚಿತ್ತು. ಮತ್ತು ತುರ್ತು ಸೇವೆಗೆ ಸಂದೇಶ ಕಳುಹಿಸಿತ್ತು!
ಟ್ರೆಕ್ಕಿಂಗ್ ಹೋಗಿ ಕಣಿವೆಗೆ ಬಿದ್ದ ಯುವಕನ ಜೀವ ಉಳಿಸಿದ ಆ್ಯಪಲ್ ವಾಚ್
ಅದಾಗಿ ಅರ್ಧ ಗಂಟೆಯೊಳಗೆ ತುರ್ತು ರಕ್ಷಣಾ ತಂಡ ಹೆಲಿಕಾಪ್ಟರ್‌ನಲ್ಲಿ, ಕಾರು ಅಪಘಾತವಾದ ಸ್ಥಳಕ್ಕೆ ಧಾವಿಸಿ, ಜೋಡಿಯನ್ನು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ದಾಖಲಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.