ವಾಷಿಂಗ್ಟನ್: ಚೀನಾ ವಿಡಿಯೊ ಶೇರಿಂಗ್ ಆ್ಯಪ್ 'ಟಿಕ್ಟಾಕ್' ಡೌನ್ಲೋಡ್ಗೆ ಸಿಗದಂತೆ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಹೊರಡಿಸಿದ್ದ ಆದೇಶಕ್ಕೆ ಅಮೆರಿಕದ ನ್ಯಾಯಾಮೂರ್ತಿಯೊಬ್ಬರು ತಡೆಯಾಜ್ಞೆ ನೀಡಿದ್ದಾರೆ.

ಸೋಮವಾರ ಮಧ್ಯರಾತ್ರಿಯಿಂದ ಟಿಕ್ಟಾಕ್ ಆ್ಯಪ್ ಡೌನ್ಲೋಡ್ ನಿರ್ಬಂಧಿಸುವಂತೆ ಟ್ರಂಪ್ ಆಡಳಿತ ಆದೇಶ ಹೊರಡಿಸಿತ್ತು. ನವೆಂಬರ್ 12ರಂದು ಟಿಕ್ಟಾಕ್ನ ಬಳಕೆಗೆ ಸಂಪೂರ್ಣ ನಿಷೇಧ ಹೇರಲು ಯೋಜಿಸಲಾಗಿದ್ದು, ಆವರೆಗೂ ಟಿಕ್ಟಾಕ್ ಬಳಕೆ ಮುಂದುವರಿಯಬಹುದಾಗಿದೆ. ಆದರೆ, ಹೊಸದಾಗಿ ಡೌನ್ಲೋಡ್ ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡಿರಲಿಲ್ಲ.

ಟಿಕ್ಟಾಕ್ ಮನವಿಯ ಮೇರೆಗೆ ಡಿಸ್ಟ್ರಿಕ್ಟ್ ಜಡ್ಜ್ ಕಾರ್ಲ್ ನಿಕೋಲ್ಸ್ ಸರ್ಕಾರದ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿದ್ದಾರೆ. ಭಾನುವಾರ ರಾತ್ರಿ ವಾಷಿಂಗ್ಟನ್ ಕೋರ್ಟ್ ಒಂದು ಪುಟದ ಆದೇಶ ಹೊರಡಿಸಿದೆ. ಆದರೆ, ನವೆಂಬರ್ 12ರಿಂದ ಸರ್ಕಾರ ಜಾರಿಗೆ ತರಲು ಉದ್ದೇಶಿಸಲಾಗಿರುವ ನಿರ್ಬಂಧಗಳ ಕುರಿತು ತಡೆ ನೀಡಲು ಕೋರ್ಟ್ ನಿರಾಕರಿಸಿದೆ.

ಆ್ಯಪಲ್ ಇಂಕ್ ಮತ್ತು ಆಲ್ಫಾಬೆಟ್ ಇಂಕ್ನ ಗೂಗಲ್ ಸ್ಟೋರ್ನಲ್ಲಿ ಚೀನಾ ಮೂಲದ ಟಿಕ್ಟಾಕ್ ಆ್ಯಪ್ ದೊರೆಯದಂತೆ ನಿರ್ಬಂಧಿಸಲು ಅಮೆರಿಕ ಸರ್ಕಾರ ಆದೇಶಿಸಿತ್ತು. ರಾಷ್ಟ್ರೀಯ ಭದ್ರತೆ ಕಾರಣಗಳನ್ನು ನೀಡಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ನ್ಯಾಯಮೂರ್ತಿ ನಿಕೋಲ್ಸ್ ಅವರ ವಿವರವಾದ ಆದೇಶ ಸೋಮವಾರ ಬಿಡುಗಡೆಯಾಗುವ ಸಾಧ್ಯತೆ ಇದೆ.

ಟಿಕ್ಟಾಕ್ ಸಂಗ್ರಹಿಸಿಕೊಂಡಿರುವ ಸುಮಾರು 10 ಕೋಟಿ ಅಮೆರಿಕನ್ನರ ವೈಯಕ್ತಿಕ ಮಾಹಿತಿ ಸುರಕ್ಷತೆಯ ಬಗ್ಗೆ ಅಮೆರಿಕ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದರು.

ವಾಲ್ಮಾರ್ಟ್ ಇಂಕ್ ಮತ್ತು ಒರಾಕಲ್ ಕಾರ್ಪೊರೇಷನ್ ಜೊತೆಗೆ ಪ್ರಾಥಮಿಕ ಒಪ್ಪಂದ ನಡೆದಿದ್ದು, ಷೇರು ಖರೀದಿಗೆ ಪ್ರಕ್ರಿಯೆ ನಡೆಯಲಿದೆ ಎಂದು ಟಿಕ್ಟಾಕ್ನ ಮೂಲ ಸಂಸ್ಥೆ ಬೈಟ್ಡ್ಯಾನ್ಸ್ ತಿಳಿಸಿತ್ತು. ಒಪ್ಪಂದಗಳ ಸಂಬಂಧ ನಿಯಮಗಳ ಬಗ್ಗೆ ಮಾತುಕತೆ ನಡೆದಿರುವುದಾಗಿ ಹೇಳಿತ್ತು. ಅಮೆರಿಕ ಸರ್ಕಾರದ ವಿದೇಶಿ ಹೂಡಿಕೆ ಸಮಿತಿಯು ಒಪ್ಪಂದದ ಪರಿಶೀಲನೆ ನಡೆಸಬೇಕಿದೆ ಹಾಗೂ ಒಪ್ಪಂದ ಪ್ರಕ್ರಿಯೆ ಪೂರ್ಣಗೊಳಿಸಲು ವಾಣಿಜ್ಯ ಇಲಾಖೆ ಆ್ಯಪ್ ಮೇಲಿನ ನಿಷೇಧನ ಜಾರಿಯನ್ನು ಒಂದು ವಾರಗಳ ವರೆಗೂ ಮುಂದೂಡಿರುವುದಾಗಿ ಸೆಪ್ಟೆಂಬರ್ 19ರಂದು ಪ್ರಕಟಿಸಿತ್ತು.

ರಾಷ್ಟ್ರೀಯ ಭದ್ರತಾ ಕಾರಣಗಳಿಂದಾಗಿ ಟ್ರಂಪ್ ಆಡಳಿತ ಈ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ, ಮುಂಬರುವ ಸಾರ್ವತ್ರಿಕ ಚುನಾವಣೆಯ ನಿಟ್ಟಿನಲ್ಲಿ ರಾಜಕೀಯ ನಿರ್ಧಾರವಾಗಿದೆ ಎಂದು ಆ್ಯಪ್ ನಿಷೇಧದ ಕುರಿತು ಟಿಕ್ಟಾಕ್ ಕೋರ್ಟ್ನಲ್ಲಿ ವಾದ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.